ಭಟ್ಕಳ ಕೊರೊನಾ ವಿರುದ್ಧ ಹೋರಾಟಕ್ಕೆ ಸಾರಥಿಯಾದ ಶರದ್

Source: S.O. News Service | By V. D. Bhatkal | Published on 19th April 2020, 1:04 AM | Coastal News | Special Report |

ಭಟ್ಕಳ: ರಾಜ್ಯದ ಕೊರೊನಾ ಹಾಟ್ ಸ್ಪಾಟ್‍ಗಳ ಪಟ್ಟಿಯಲ್ಲಿ ಉತ್ತರಕನ್ನಡ ಜಿಲ್ಲೆಗೆ ಅದರಲ್ಲಿಯೂ ವಿಶೇಷವಾಗಿ ಭಟ್ಕಳಕ್ಕೂ ಸ್ಥಾನ ಸಿಕ್ಕಿದೆ. ಹಾಗೆಂದ ಮಾತ್ರ ರಾಜ್ಯದ ಉಳಿದ ಕೊರೊನಾ ಪ್ರದೇಶಗಳಿಗೆ ಹೋಲಿಸಿದರೆ ಭಟ್ಕಳದಲ್ಲಿ ಹಂತಹಂತವಾಗಿ ಕೊರೊನಾ ನಿಯಂತ್ರಣವನ್ನು ಕಾಣಬಹುದಾಗಿದೆ. ಇದಕ್ಕೆ ಜಿಲ್ಲಾಧಿಕಾರಿ ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾ ಪಂಚಾಯತ ಮುಖ್ಯಕಾರ್ಯದರ್ಶಿ ಮಹ್ಮದ್ ರೋಶನ್‍ರಿಂದ ಹಿಡಿದು ಭಟ್ಕಳದ ಎಸಿ ಭರತ್‍ರವರೆಗೆ ಎಲ್ಲರ ಪ್ರಯತ್ನವನ್ನೂ ಉಲ್ಲೇಖಿಸಬಹುದು. ಇವರೆಲ್ಲರೂ ಜನರ ಮುಂದೆ ಬಂದು ಸೇವೆಯನ್ನು ವಿವರಿಸುವವರು. ಆದರೆ ತೆರೆಮರೆಯಲ್ಲಿ ನಿಂತು ಯಾರ ಮುಂದೆಯೂ ಸುದ್ದಿಯಾಗದೇ ಭಟ್ಕಳದಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ಸಾರಥಿಯಾದವರು ಜಿಲ್ಲಾ ಮಕ್ಕಳ ಆರೋಗ್ಯಾಧಿಕಾರಿ ಡಾ. ಶರದ್ ನಾಯಕ್!

ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ, ಭಟ್ಕಳದಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಂತೆಯೇ ಡಾ. ಶರದ್ ನಾಯಕ್ ಭಟ್ಕಳಕ್ಕೆ ಕಾಲಿಟ್ಟಿದ್ದರು. ಬಂದಿದ್ದು ಕೇವಲ ಎರಡೇ ಜೊತೆ ಬಟ್ಟೆಯಲ್ಲಿ! ಮೇಲಿನಿಂದ ಬರುವ ಆದೇಶವನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಭಟ್ಕಳದಿಂದ ಶಂಕಿತರ ರಕ್ತ ಹಾಗೂ ಗಂಟಲಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವುದರಿಂದ ಹಿಡಿದು ಸೋಂಕಿತರ ಸಂಪರ್ಕದಲ್ಲಿರುವವರು, ಶಂಕಿತರು, ಶಂಕಿತರ

ಶಂಕಿತರು, ಶಂಕಿತರ ಸಂಪರ್ಕದಲ್ಲಿರುವವರೆಲ್ಲರನ್ನೂ ಪಟ್ಟಿ ಮಾಡಿಕೊಂಡು ಅವರೆಲ್ಲರನ್ನೂ ಕಟ್ಟುನಿಟ್ಟಾಗಿ ಕ್ವಾರೆಂಟೈನ್‍ನಲ್ಲಿರಿಸುವಲ್ಲಿ ಡಾ.ಶರದ್ ಶ್ರಮ ಶ್ಲಾಘನೀಯವಾದುದು. ಒಂದೆರಡು ಕ್ವಾರೆಂಟೈನ್ ಉಲ್ಲಂಘನೆಯ ಪ್ರಕರಣದಲ್ಲಿಯೂ ಅವರು ತಾಳ್ಮೆ ಕಳೆದುಕೊಳ್ಳಲಿಲ್ಲ. ಊರಿಗೆ ಕೇಳಿಸುವಂತೆ ಗದ್ದಲ ಎಬ್ಬಿಸಲಿಲ್ಲ. ಕಥೆ ಕಟ್ಟಿ ವದಂತಿ ಹಬ್ಬಿಸಲಿಲ್ಲ! ಸಮಸ್ಯೆ ಬಗ್ಗೆ ಅವರಿಗೇ ತಿಳಿ ಹೇಳಿ ಕ್ವಾರೆಂಟೈನ್‍ನಿಂದ ಹೊರಗೆ ಬಾರದಂತೆ ನೋಡಿಕೊಂಡರು

ಸಂಪರ್ಕದಲ್ಲಿರುವವರೆಲ್ಲರನ್ನೂ ಪಟ್ಟಿ ಮಾಡಿಕೊಂಡು ಅವರೆಲ್ಲರನ್ನೂ ಕಟ್ಟುನಿಟ್ಟಾಗಿ ಕ್ವಾರೆಂಟೈನ್‍ನಲ್ಲಿರಿಸುವಲ್ಲಿ ಶರದ್ ಶ್ರಮ ಶ್ಲಾಘನೀಯವಾದುದು. ಸೋಂಕಿತರಿಗೆ ಚಿಕಿತ್ಸೆ ನೀಡುವ ವಿಷಯದಲ್ಲಿಯೂ ಶರತ್ ಆಸ್ಪತ್ರೆಯನ್ನು ಬಿಟ್ಟು ಕದಲಿಲ್ಲ. ವಿಶೇಷ ಎಂದರೆ ಸಾರ್ವಜನಿಕರಿಂದ ತಕರಾರು ಬರದಂತೆಯೂ ಜಾಗೃತೆ ವಹಿಸಿದ್ದರು. ಜನ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡರು. ( ಆರಂಭದಲ್ಲಿ ಬಹಳಷ್ಟು ಜನರು ಒಲ್ಲೆ ಎಂದರೂ ನಂತರ ಶರತ್ ವರ್ತನೆ, ಮಾತಿನ ಮುಂದೆ ಎಲ್ಲರೂ ತಲೆಬಾಗಿದ್ದರು!)  ಸ್ಥಳೀಯರನ್ನು ಭರವಸೆ ತೆಗೆದುಕೊಡು ಕಟ್ಟುನಿಟ್ಟಿನ ಕ್ವಾರೆಂಟೈನ್ ಜಾರಿಗೊಳಿಸುವಲ್ಲಿ ಸಫಲರಾದರು. ಒಂದೆರಡು ಕ್ವಾರೆಂಟೈನ್ ಉಲ್ಲಂಘನೆಯ ಪ್ರಕರಣದಲ್ಲಿಯೂ ಅವರು ತಾಳ್ಮೆ ಕಳೆದುಕೊಳ್ಳಲಿಲ್ಲ. ಊರಿಗೆ ಕೇಳಿಸುವಂತೆ ಗದ್ದಲ ಎಬ್ಬಿಸಲಿಲ್ಲ. ಕಥೆ ಕಟ್ಟಿ ವದಂತಿ ಹಬ್ಬಿಸಲಿಲ್ಲ! ಸಮಸ್ಯೆ ಬಗ್ಗೆ ಅವರಿಗೇ ತಿಳಿ ಹೇಳಿ ಕ್ವಾರೆಂಟೈನ್‍ನಿಂದ ಹೊರಗೆ ಬಾರದಂತೆ ನೋಡಿಕೊಂಡರು. ಡಾ.ಶರದ್ ನಡವಳಿಕೆಯ ಬಗ್ಗೆ ಸಹಜವಾಗಿ ಭಟ್ಕಳ ಶಹರದಲ್ಲಿ ಭರವಸೆ ಮೂಡಿತು. ಭಟ್ಕಳ ಮಜ್ಲಿಸೇ ಇಸ್ಲಾ ವ ತಂಜೀಮ್ ಸಂಸ್ಥೆಯೇ ಸರಿಸುಮಾರು 50 ಸೇವಕರನ್ನು ನೇಮಿಸಿ ದಾದಿಯರು, ಆಶಾಕಾರ್ಯಕರ್ತರಿಗೆ ನೆರವಾಗುವಂತೆ ಕ್ರಮ ಕೈಗೊಂಡಿತು. ಪರಿಣಾಮವಾಗಿ ಹೆಚ್ಚಿನ ಜನರು ಅಂದುಕೊಂಡಂತೆ ಭಟ್ಕಳದಲ್ಲಿ ಕೊರೊನಾ ನಿಯಂತ್ರಣ ತಪ್ಪಿ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲಿಲ್ಲ. (ಇದೇ ರೀತಿ ಕ್ವಾರೆಂಟೈನ್ ಮುಂದುವರೆದರೆ ಕೊರೊನಾ ಸೋಂಕಿತರ ಸಂಖ್ಯೆ ಭಟ್ಕಳದಲ್ಲಿ ಗರಿಷ್ಠ ಎಂದರೂ 15 ದಾಟುವುದಿಲ್ಲ ಎನ್ನುವ ನಿರೀಕ್ಷೆ ಇದೆ)

ಊಟ ಬಿಟ್ಟು ಓಡಿ ಹೋದರು:

ಕೊರೊನಾ ಕ್ವಾರೆಂಟೈನ್ ಸಂದರ್ಭದಲ್ಲಿಯೇ ಭಟ್ಕಳದಲ್ಲಿ ಬೇರೆ ಬೇರೆ ಕಾಯಿಲೆಗಳಿಂದ ಬಹಳಷ್ಟು ಜನರು ಬಳಲಿ ಬೆಂಡಾಗಿದ್ದರು. ಇದರಲ್ಲಿ ಮಾನಸಿಕ ಅಸ್ವಸ್ಥರಿಂದ ಹಿಡಿದು ಕಿಡ್ನಿ ರೋಗಿಗಳೂ ಇದ್ದರು. ಅವರೆಲ್ಲರೂ ಹೆಚ್ಚಿನ ಚಿಕಿತ್ಸೆಗಾಗಿ ಪರ ಊರಿಗೆ ಹೋಗಲೇ ಬೇಕಾಗಿತ್ತು. ಆದರೆ ಅವರೆಲ್ಲರಿಗೂ ಇಲ್ಲಿನ ವೈದ್ಯರ ಪ್ರಮಾಣ ಪತ್ರದ ಅವಶ್ಯಕತೆ ಇತ್ತು. ಕಷ್ಟದ ಭೀಕರತೆಯನ್ನು ಅರಿತಿದ್ದ ಡಾ.ಶರದ್ ಅವರೆಲ್ಲರೂ ಹೆಚ್ಚು ಕಾಲ  ಕಾಯುವಂತೆ ಮಾಡಲಿಲ್ಲ. ಮಾಹಿತಿ ಪಡೆದ ಮರುಕ್ಷಣವೇ ಆಸ್ಪತ್ರೆಗೆ ತೆರಳಿ ಪತ್ರವನ್ನು ನೀಡುತ್ತ ಬಂದರು. ಕೆಲವೊಮ್ಮೆ ಊಟವನ್ನು ಅರ್ಧದಲ್ಲಿಯೇ ಬಿಟ್ಟು ಆಸ್ಪತ್ರೆಗೆ ದೌಡಾಯಿಸಿ ಬಂದ ಉದಾಹರಣೆಯೂ ಇದೆ. ಆದರೆ ಶರತ್ ಮಾನವೀಯ ಗುಣಗಳ ಬಗ್ಗೆ ಕೇಳಿದರೆ ಹೆಚ್ಚು ಮಾತನಾಡಲು ಹೋಗುವುದಿಲ್ಲ!

ವಾಹನವನ್ನೂ ಚಲಾಯಿಸಿಕೊಂಡು ಹೋದರು:

ಭಟ್ಕಳದಲ್ಲಿ ಕೊರೊನಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಗಲಿರುಳೆನ್ನದೇ ದುಡಿಯುತ್ತಿರುವಾಗಲೇ ಡಾ.ಶರತ್‍ರನ್ನು ಕರೆದೊಯ್ಯುತ್ತಿದ್ದ ವಾಹನದ ಚಾಲಕ ಅನಾರೋಗ್ಯದಿಂದಾಗಿ ಊರಿನ ಹಾದಿ ಹಿಡಿದಿದ್ದ. ಆದರೆ ಡಾ.ಶರದ್ ಸುಮ್ಮನೇ ಕುಳಿತುಕೊಳ್ಳುವ ಹಾಗಿರಲಿಲ್ಲ. ಶನಿವಾರ ಸಂಜೆ ಬಟ್ಟೆ ಬರೆಗಾಗಿ ಊರಿಗೆ ಹೊರಟವರೇ ಸೋಮವಾರ ಭಟ್ಕಳದಲ್ಲಿ ಹಾಜರಾಗಿದ್ದರು. ತುರ್ತು ಕೆಲಸಕ್ಕೆ ವಾಹನ ಚಾಲಕನ ಕೆಲಸವನ್ನೂ ತಾವೇ ಮಾಡಿದರು. ನಿರಂತರ ಕೆಲಸದಲ್ಲಿರುವ ಡಾ.ಶರದ್ ಮುಖದಲ್ಲಿ ತಾನಿಷ್ಟು ಕೆಲಸ ಮಾಡಿದ್ದೇನೆ ಎಂಬ ಕಿಂಚಿತ್ ಗರ್ವವೂ ಕಾಣಿಸುವುದಿಲ್ಲ. `ಡಿ' ವರ್ಗದ ನೌಕರನಿಂದ ಹಿಡಿದು ಹಿರಿಯ ಅಧಿಕಾರಿಗಳವರೆಗೆ ಎಲ್ಲರ ಮುಂದೆಯೂ ಸೌಜನ್ಯದ ನಡವಳಿಕೆಯನ್ನು ತೋರುವ ಡಾ.ಶರದ್‍ರಂತಹ ಅಧಿಕಾರಿ ಕೊರೊನಾ ಸೋಂಕಿನ ಸಂಕಷ್ಟದ ಸಮಯದಲ್ಲಿ ಭಟ್ಕಳಕ್ಕೆ ದೊರೆತಿದ್ದು, ಮಹತ್ವದ ಗಳಿಗೆ ಎಂದರೆ ತಪ್ಪಾಗಲಾರದು!

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...