ಭಟ್ಕಳ ತಾಲೂಕಾ ಆಸ್ಪತ್ರೆಗೆ ಇ.ಸಿ.ಜಿ.ಯಂತ್ರ ನೀಡಿದ ಡಾ.ಪದ್ಮನಾಭ ಕಾಮತ

Source: so news | By MV Bhatkal | Published on 15th June 2019, 12:44 AM | Coastal News | Don't Miss |

ಭಟ್ಕಳ:ಗ್ರಾಮೀಣ ಭಾಗದ ಜನತೆಯೂ ಕೂಡಾ ಆರೋಗ್ಯ ಸೇವೆಯಿಂದ ವಂಚಿತರಾಗಬಾರದು ಎನ್ನುವ ಸೇವಾ ಮನೋಭಾವನೆಯಿಂದ ಮಣಿಪಾಲ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಪದ್ಮನಾಭ ಕಾಮತ ಅವರು ಆರಂಭಿಸಿದ ಗ್ರಾಮೀಣ ವೈದ್ಯರಿಗೆ ಇ.ಸಿ.ಜಿ. ಯಂತ್ರ ವಿತರಣಾ ಕಾರ್ಯಕ್ರಮದೊಂದಿಗೆ ಜನೌಷಧಿ ಕೇಂದ್ರಗಳಿಗೂ ಕೂಡಾ ಇ.ಸಿ.ಜಿ. ಯಂತ್ರಗಳನ್ನು ನೀಡಲಾಯಿತು.
ಇಲ್ಲಿಯ ತನಕ 9 ಜನೌಷಧಿ ಕೇಂದ್ರಗಳಿಗೆ ಇ.ಸಿ.ಜಿ. ಯಂತ್ರಗಳನ್ನು ಪೂರೈಸಿದ್ದು 10ನೇ ಯಂತ್ರವನ್ನು ಭಟ್ಕಳದ ಜನೌಷಧಿ ಕೇಂದ್ರದಕ್ಕೆ ನೀಡಲಾಯಿತು. ಜನೌಷಧಿ ಕೇಂದ್ರದ ಜಗದೀಶ ಮೊಗೇರ ಅವರು ಯಂತ್ರವನ್ನು ಪಡೆದುಕೊಂಡು ಮಾತನಾಡಿದರು. ಇಂತಹ ಕಾರ್ಯಕ್ರಮಗಳು ನೇರವಾಗಿ ಗ್ರಾಮೀಣ ಭಾಗದ ಜನರನ್ನು ತಲುಪಲು ಅನುಕೂಲವಾಗುತ್ತದೆ. ಅನೇಕ ಗ್ರಾಮೀಣ  ಜನತೆಗೆ ಎದೆ ನೋವು ಬಂದರೆ ಎನು ಮಾಡಬೇಕು ಎನ್ನುವುದೆ ತಿಳಿಯುವುದಿಲ್ಲ, ಅಂತಹ ಸಂದರ್ಭದಲ್ಲಿ ಈ ಯಂತ್ರ ಸಹಕಾರಿಯಾಗಲಿದೆ ಅಲ್ಲದೇ ಮಣಿಪಾಲ ವೈದ್ಯರ ತಂಡದಿಂದ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯ ಮಾರ್ಗದರ್ಶನ ದೊರೆಯುವುದು ಎಂದರು. 
ಜನೌಷಧಿ ಕೇಂದ್ರಕ್ಕೆ ಯಂತ್ರವನ್ನು ವಿತರಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಅವರು ಇ.ಸಿ.ಜಿ. ಯಂತ್ರದ ಪ್ರಾತ್ಯಕ್ಷಿತೆಯನ್ನು ವೀಕ್ಷಿಸಿದರು. 
ಬಿ.ಪಿ.ಎಲ್. ಕಂಪೆನಿಯ ಯಂತ್ರವನ್ನ ಹಲವಾರು ದಾನಿಗಳಿಂದ ಪಡೆದು ಬೇರೆ ಬೇರೆ ಕೇಂದ್ರಗಳಿಗೆ ವಿತರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದ ಕಂಪೆನಿಯ ಪ್ರತಿನಿಧಿ ಶಿವಕುಮಾರ್ ಅವರು ಬಿ.ಪಿ.ಎಲ್. ಕಂಪೆನಿಯೂ ಕೂಡಾ ಡಾ. ಪದ್ಮನಾಭ ಕಾಮತ ಅವರೊಂದಿಗೆ ಸಹಕರಿಸಿದೆ ಎಂದರು.

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...