ಇ-ಸ್ವತ್ತು ನೀಡಲು ಗೊಂದಲ ಬೇಡ : ಡಾ. ಹರೀಶಕುಮಾರ ಕೆ. 

Source: sonews | By Staff Correspondent | Published on 20th September 2019, 12:04 AM | Coastal News |

ಕಾರವಾರ : ಜಿಲ್ಲೆಯ ನಗರ ಪ್ರದೇಶಗಳಲ್ಲಿ  ಶೇ. 95% ರಷ್ಟು  ತಂತ್ರಾಂಶದಲ್ಲಿ  ಇ-ಸ್ವತ್ತು ನೀಡಲು ಸಿದ್ದವಿದ್ದು, ಸ್ಥಳಿಯ ಅಧಿಕಾರಿಗಳು ಯಾವುದೇ ಗೊಂದಲ ಸೃಷ್ಟಿಸಿಕೊಳ್ಳದೇ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ಕೆ. ಅವರು ಸೂಚಿಸಿದರು. 
  
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಗುರುವಾರ ನಗರ ಯೊಜನಾ ಪ್ರಾಧಿಕಾರ ಅಧಿಕಾರಿ, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ, ಎಲ್ಲಾ ತಾಲೂಕುಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸ್ಥಳಿಯ ಸಂಸ್ಥೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ ಇ- ಸ್ವತ್ತಿಗೆ ಸಂಬಂಧಿಸಿದಂತೆ ಶೇ. 95% ರಷ್ಟು  ತಂತ್ರಾಂಶದಲ್ಲಿ ಸಿದ್ದವಿದ್ದು, ಇನ್ನುಳಿದ ಶೇ. 5% ರಲ್ಲಿ 3% ರಷ್ಟು ಕಾನೂನಿನÀಡಿಯಲ್ಲಿ ಮತ್ತು 2% ರಷ್ಟು ಸರಕಾರದ ಹಂತದಲ್ಲಿ ಕಾನೂನು ಬದಲಾವಣೆ ಮಾಡಿ ಪರಿಹರಿಸಿಕೊಳ್ಳಬಹುದಾಗಿದ್ದು, ಜನರನ್ನು ಅಲೆದಾಡಿಸದೇ ಕಾರ್ಯನಿರ್ವಹಿಸಬೇಕೆಂದು ಹೇಳಿದರು.   . 
  
ಸರಕಾರದ ಸುತ್ತೋಲೆ ಸ್ಪಷ್ಟವಾಗಿದ್ದರೂ ಕೂಡ ಅಧಿಕಾರಿಗಳು ವಿನಾಕಾರಣ ಸತಾಯಿಸಿ ಅಲೆದಾಡಿಸುತ್ತಿರುತ್ತಾರೆ ಎಂದು ಜನರು ದೂರುತ್ತಿದ್ದಾರೆ, ಅಲ್ಲದೇ ಎಲ್ಲದಕ್ಕೂ ಜನರು ಜಿಲ್ಲಾಧಿಕಾರಿಗಳ ಕಚೇರಿಗೆ ಬರುವಂತಹ ಸನ್ನಿವೇಶ ಸೃಷ್ಟಿಸದೆ,  ಸ್ಥಳಿಯ ಅಧಿಕಾರಿಗಳು ವಾರ್ಡಮಟ್ಟದಲ್ಲಿಯೇ ಫಾರ್ಮ ನಮೂನೆ 3 ರಲ್ಲಿ ಖಾತಾ ವಿತರಿಸುವ ಕಾರ್ಯ ಕೈಗೊಳ್ಳಿ ಎಂದು ಅವರು ಹೇಳಿದರು. 
  
ಜಿಲ್ಲೆಯಲ್ಲಿ ಶೇ. 80% ರಷ್ಟು ಕಾಡು ಇದ್ದು, 20% ರಷ್ಟು ಕೃಷಿ ಹಾಗೂ ಗೃಹ ನಿಮಾಣಕ್ಕೆ ಮಾತ್ರ  ಭೂಮಿ ಲಭ್ಯವಿರುವುದರಿಂದ ಜನರ ಆಶೋತ್ತರಕ್ಕೆ ಸ್ಪಂದಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕಾಗುತ್ತದೆ ಎಂದು ತಿಳಿಸಿದರು. 

ಅಧಿಕಾರಿಗಳು ಸರಿಯಾದ ಮಾಹಿತಿ ಇಟ್ಟುಕೊಳ್ಳದೆ, ಅದನ್ನು ಅರಿಯದೇ ಮತ್ತು ತಮ್ಮ ಕರ್ತವ್ಯದಲ್ಲಿ ತಮ್ಮನ್ನು ಸರಿಯಾಗಿ ತೊಡಗಿಸಿಕೊಳ್ಳದೇ ಇರುವುದರಿಂದ ಜನರು ದೂರುತ್ತಿದ್ದಾರೆ.  ಕಾನೂನು ಕಾರ್ಯಗಾರ ಹಮ್ಮಿಕೊಳ್ಳುವ ಮೂಲಕ ಅಧಿಕಾರಿವರ್ಗ ಮತ್ತು ಎಲ್ಲ ಸಿಬ್ಬಂದಿ ಕಾಯಿದೆ ಕಾನೂನುಗಳ ಬಗ್ಗೆ ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು, ಎಲ್ಲರೂ ತಮ್ಮ ತಮ್ಮ ಜವಾಬ್ಧಾರಿಗಳನ್ನು ಅರ್ಥಮಾಡಿಕೊಂಡು, ಸಂಯಮದಿಂದ ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಪಂದಿಸುವ ಕಾರ್ಯಮಾಡಬೇಕಾಗುತ್ತದೆ ಎಂದರು. 
  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...