ಮಾವು ಬೆಳೆಗೂ ಪರಿಹಾರ ಘೋಷಿಸಿ-ಮಾವು ಬೆಳೆಗಾರ ಸಂಘ ಅಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ ಒತ್ತಾಯ

Source: sonews | By Staff Correspondent | Published on 17th May 2020, 3:20 PM | State News |

ಶ್ರೀನಿವಾಸಪುರ : ಕೋಲಾರ ಜಿಲ್ಲೆಯಲ್ಲಿ ಸುಮಾರು 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಶ್ರೀನಿವಾಸಪುರ ತಾಲೂಕಿನಲ್ಲೇ ಒಟ್ಟು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಸರಕಾರ ದ್ರಾಕ್ಷಿ , ಕಲ್ಲಂಗಡಿ , ಕರಬೂಜ ಸೇರಿದಂತೆ 9 ರೀತಿಯ ಹಣ್ಣುಗಳಿಗೆ ಸರಕಾರ ಪರಿಹಾರ ಘೋಷಣೆ ಮಾಡಿರುವಂತೆ ಮಾವಿನ ಕೃಷಿಯನ್ನೇ ನಂಬಿ ಜೀವನ ಕಟ್ಟಿಕೊಂಡಿರುವ ಮಾವಿಗೂ ಪರಿಹಾರ ಘೋಷಿಸಬೇಕೆಂದು ಜಿಲ್ಲಾ ಮಾವು ಬೆಳೆಗಾರ ಸಂಘ ಅಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ ಒತ್ತಾಯಿಸಿದ್ದಾರೆ.

ಏಷ್ಯಾ ಖಂಡದಲ್ಲೇ ಮಾವಿಗೆ ಖ್ಯಾತಿ ಪಡೆದಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ರೈತರು ದೇಶ ವಿದೇಶಗಳಿಗೆ ಮಾವು ರವಾನಿಸುತ್ತಿದ್ದಾರೆ. ಮಾವು ಬೆಳೆಗಾರರ ಪರಿಶ್ರಮವನ್ನು ಸರಕಾರ ಗಳು ಅರಿಯಬೇಕು. ನಾನಾ 9 ಹಣ್ಣುಗಳಿಗೆ ಸರಕಾರ ಪರಿಹಾರ ಕೊಡುತ್ತಿರುವುದು ಸರಿ . ತಾಲೂಕಿನಲ್ಲಿ ಜೀವನಾಡಿಯಾಗಿ ಬೆಳೆ ಯುತ್ತಿರುವ ಮಾವಿನ ಕೃಷಿಗೆ ಈ ಕಷ್ಟ ಕಾಲದಲ್ಲಿ ಎಕರೆಗೆ 20 ಸಾವಿರ ರೂ . ಪರಿಹಾರ ಕೊಡಬೇಕೆಂದು ಆಗ್ರಹಿಸಿದ್ದಾರೆ.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ಅವಿಭಜಿತ ಜಿಲ್ಲೆಯ ಫ್ಯಾಕ್ಸ್‍ಗಳ ಗಣಕೀಕರಣಕ್ಕೆ ಜೂನ್ 30ರ ಕಾಲಮಿತಿ ತಪ್ಪಿದಲ್ಲಿ ಆರ್ಥಿಕ ಸೌಲಭ್ಯ ನಿಲುಗಡೆ-ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ

ಕೋಲಾರ: ಅವಿಭಜಿತ ಜಿಲ್ಲೆಯ ಎಲ್ಲಾ ಸೊಸೈಟಿಗಳ ಗಣಕೀಕರಣ ಕಾರ್ಯ ಜೂನ್ ಅಂತ್ಯದೊಳಗೆ ಮುಗಿಸಿರಬೇಕು ಇಲ್ಲವಾದಲ್ಲಿ ಯಾವುದೇ ಆರ್ಥಿಕ ...