ಅಂಕೋಲದಲ್ಲಿ ಜಿಲ್ಲಾ ಮಟ್ಟದ ಗ್ರಾಮ ಸಹಾಯಕರ ಸಭೆ

Source: so news | Published on 20th November 2019, 12:29 AM | Coastal News | Don't Miss |


ಅಂಕೋಲಾ:ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಉತ್ತರ ಕನ್ನಡ ಜಿಲ್ಲಾ ಗ್ರಾಮ ಸಹಾಯಕರ ಸಂಘದ ಸಭೆ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಗ್ರಾಮ ಸಹಾಯಕರ ಸಂಘದ ಜಿಲ್ಲಾಧ್ಯಕ್ಷ ಗೋಪಾಲ ನಾಯ್ಕ, `ಡಿ' ಗ್ರೂಪ್ ನೌಕರರ ನಾಲ್ಕು ದಶಕಗಳ ಬೇಡಿಕೆ ಕುರಿತು ಸರಕಾರದ ಗಮನವನ್ನು ಸೆಳೆಯಲು ಬೆಳಗಾವಿ ಸುವರ್ಣ ಸೌಧದ ಎದುರು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಅನಿರ್ದಿಷ್ಟವಾದಿ ಮುಷ್ಕರ ನಡೆಸಲಾಗಿದ್ದು ಜೊತೆಗೆ ಉತ್ತರ ಕನ್ನಡ ಜಿಲ್ಲೆ ಹಾಗೂ ರಾಜ್ಯದ ರಾಜಧಾನಿಯಲ್ಲಿ ಹಲವಾರು ಬಾರಿ ಮುಷ್ಕರ ಹಾಗೂ ಪಾದಯಾತ್ರೆ ನಡೆಸಲಾಗಿತ್ತು. ಆದರೂ ಸರಕಾರ ಗ್ರಾಮ ಸಹಾಯಕರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ ಅವರು 2013 ರ ಬೆಳಗಾವಿಯ ಸುವರ್ಣ ಸೌಧದಲ್ಲಿ ಜರುಗಿದ ಚಳಿಗಾಲದ ಅಧಿವೇಶನದಲ್ಲಿ ಗ್ರಾಮ ಸಹಾಯಕರ ಬೇಡಿಕೆಯನ್ನು ಘೋಷಣೆ ಮಾಡಲು ಸರಕಾರಕ್ಕೆ ಒತ್ತಾಯಿಸಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ಅವರು ಗ್ರಾಮ ಸಹಾಯಕರನ್ನು ಸರ್ಕಾರಿ ಕೆಲಸಗಳಿಗೆ ಹೊರತುಪಡಿಸಿ ಕಚೇರಿಯಲ್ಲಿ ರಾತ್ರಿ ವಾಚ್‍ಮನ್ ಕೆಲಸಕ್ಕೆ ಹಾಗೂ ಅಧಿಕಾರಿಗಳ ಮನೆಗೆಲಸಕ್ಕೆ ಬಳಸಿಕೊಳ್ಳಬಾರದು, ಹಾಲಿ ಇರುವ ಸ್ಥಳಕ್ಕಿಂತ ದೂರದ ಸ್ಥಳಗಳಿಗೆ ವರ್ಗಾವಣೆ ಮಾಡಬಾರದು, ಮೇಲಾಧಿಕಾರಿಗಳ ಅನುಮೋದನೆ ಇಲ್ಲದೆ ಸೇವೆಯಿಂದ ವಜಾಗೊಳಿಸಬಾರದು, ಗ್ರಾಮ ಸಹಾಯಕರು ಸೇವೆಯಲ್ಲಿರುವಾಗಲೇ ಮರಣವನ್ನಪ್ಪಿದರೆ ಅವರ ಮಕ್ಕಳಿಗೆ ಅನುಕಂಪದ ಆಧಾರದಲ್ಲಿ ಗ್ರಾಮಸಹಾಯಕ ಕೆಲಸ ನೀಡಬೇಕು. ಇನ್ನು ಮರಳು ಅಡ್ಡೆಯ ಮೇಲೆ ದಾಳಿ ವೇಳೆ ಏನಾದರು ಅನಾಹುತ ಸಂಭವಿಸಿದ್ದಲ್ಲಿ ಗ್ರಾಮ ಸಹಾಯಕ ಜೀವಕ್ಕೆ ಯಾರು ಜವಾಬ್ದಾರರಾರು. ಈ ಹಿಂದೆ ಮರಣ ಸಂಭವಿಸಿದ್ದ ಉದಾಹರಣೆ ಸಹ ಇದ್ದು ಈ ಬಗ್ಗೆ ಸರಕಾರವು ಯಾವುದೇ ಸೂಕ್ತ ಅನೂಕೂಲಕ್ಕೆ ಆಲೋಚಿಸುತ್ತಿಲ್ಲವಾಗಿದೆ ಎಂದರು.


ಜಿಲ್ಲಾ ಸಂಘದ ಗೌರವಾಧ್ಯಕ್ಷ ರಾಮಕೃಷ್ಣ ನಾಯ್ಕ ಮಾತನಾಡಿ ‘ಕಂದಾಯ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ 10,040 ಗ್ರಾಮ ಸಹಾಯಕರಿಗೆ ಸರ್ಕಾರ ಇಲ್ಲಿಯ ತನಕ ಖಾಯಂಮಾತಿ ಮಾಡಿಲ್ಲ. ಸರ್ಕಾರದ ಮಟ್ಟದಲ್ಲಿ ಹಲವಾರು ಬಾರಿ ಮುಷ್ಕರಗಳನ್ನು ಕೈಗೊಂಡು ಸರ್ಕಾರದ ಗಮನಕ್ಕೆ ತಂದರೂ ಕೂಡ ಖಾಯಂಮಾತಿ ಎನ್ನುವುದು ಗಗನಕುಸುಮದಂತಾಗಿದೆ. ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲದೆ ಪಿಂಚಣಿ ಅದಾಲತ್, ಕಂದಾಯ ಅದಾಲತ್, ಒಟಿಸಿ ಸರ್ವೆ, ನೆರೆ ಹಾವಳಿ, ಬೆಳೆ ಸರ್ವೆ ಇಂತಹ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಗ್ರಾಮ ಸಹಾಯಕರ ಪಾತ್ರ ಮಹತ್ವದ್ದಾಗಿರುತ್ತದೆ. ಪ್ರಸ್ತುತ ಗ್ರಾಮ ಸಹಾಯಕರಿಗೆ ಪ್ರತಿ ತಿಂಗಳಿಗೆ 12 ಸಾವಿರ ರೂ ವೇತನ ಬಟವಾಡೆಯಾಗುತ್ತಿದ್ದು, ಮೂರು ತಿಂಗಳಿಗೊಮ್ಮೆ ನಾಲ್ಕು ತಿಂಗಳಿಗೊಮ್ಮೆ ವೇತನ ಬಟವಡೆಯಾಗುವ ಹಿನ್ನೆಲೆ ಈ ಅಲ್ಪ ವೇತನದಿಂದ ಗ್ರಾಮ ಸಹಾಯಕರುಗಳು ಕುಟುಂಬದ ನಿರ್ವಹಣೆಯೂ ಕೂಡ ಕಷ್ಟದಾಯಕವಾಗಿದೆ. ಸರಕಾರದಿಂದ ದೊರೆಯುವ ಇತರೆ ಸವಲತ್ತುಗಳನ್ನು ಗ್ರಾಮ ಸಹಾಯಕರಿಗೆ ನೀಡಬೇಕು ಗ್ರಾಮ ಸಹಾಯಕರ ವೇತನ ಹೆಚ್ಚಳ ಮಾಡಬೇಕು ಈ ಮೇಲಿನ ವಿಷಯವನ್ನು ಪರಿಶೀಲಿಸಿ ಗ್ರಾಮ ಸಹಾಯಕರ ಖಾಯಂಮಾತಿಯನ್ನು ಬಗ್ಗೆ ಗ್ರಾಮ ಸಹಾಯಕರ ತಿಂಗಳ ವೇತನ ಹೆಚ್ಚಳ ಹಾಗೂ ಪ್ರತಿ ತಿಂಗಳು ಸರಿಯಾಗಿ ಬಟವಡೆಯಾಗುವಂತೆ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿ ಆಗ್ರಹಿಸಿದರು.

ಸಭೆಯ ಅಂತ್ಯದಲ್ಲಿ ಇನ್ನು ಒಂದು ತಿಂಗಳಲ್ಲಿ ಶಿರಸಿಯಲ್ಲಿ ಬೃಹತ ಸಭೆಯನ್ನು ಕರೆದು ಸಭೆಯಲ್ಲಿ ಸರಕಾರದ ಮಟ್ಟದಲ್ಲಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿರುವ ಬಗ್ಗೆ ಚರ್ಚೆ ಹಾಗೂ ತೀರ್ಮಾನ ಕೈಗೊಂಡು ಬಳಿಕ ಒಂದಾನು ವೇಳೆ ಯಾವುದೇ ಸ್ಪಂದನೆ ಸಿಗದಿದ್ದಲ್ಲಿ ಬೃಹತ ಪ್ರತಿಭಟನೆ ಅಥವಾ ಮುಷ್ಕರವನ್ನು ಹೋರಾಟಕ್ಕೆಗಿಳಿಯಲಿದ್ದೇವೆ ಎಂದು ನಿರ್ಣಯಿಸಲಿದ್ದೇವೆ. ಇದೇ ವೇಳೆ ಸಂಘಟನೆ ಬಲಪಡಿಸುವ ಉದ್ದೇಶದಿಂದ ಕೆಲವು ವಿಭಾಗದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಸಭೆಯಲ್ಲಿ ಉಪಾಧ್ಯಕ್ಷರಾದ ದೇವೆಂದ್ರ ಪಿ. ನಾಯ್ಕ ಶಿರಸಿ, ಚಂದ್ರಕಾಂತ ನಾಯ್ಕ, ಕಾರ್ಯದರ್ಶಿ ನಾರಾಯಣ ಕಲಾಲ್, ಖಜಾಂಚಿ ಮಾಸ್ತಯ್ಯ ನಾಯ್ಕ ಭಟ್ಕಳ, ಸಹ ಕಾರ್ಯದರ್ಶಿ ರೇಷ್ಮಾ ಫರ್ನಾಂಡಿಸ್, ರಾಘವೇದ್ರ ಶೆಟ್ಟಿ ಸೇರಿದಂತೆ 11 ತಾಲೂಕಿನ ಗ್ರಾಮ ಸಹಾಯಕ ಸಂಘದ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...