ಪತ್ರಕರ್ತರಿಗೆ ಆರೋಗ್ಯ ಸುರಕ್ಷತಾ ಕಿಟ್ ವಿತರಣೆ

Source: so news | Published on 17th June 2021, 7:02 PM | Coastal News | Don't Miss |

ಭಟ್ಕಳ: ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರು ಪರ್ತಕರ್ತರಿಗೆ ನೀಡಿದ ಆರೋಗ್ಯ ಕಿಟನ್ನು ಗುರುವಾರ ಭಟ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಣ ಸಂತೋಷ ನಾಯ್ಕ ತಾಲ್ಲೂಕಾ ಪತ್ರಕರ್ತರಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತಾನಾಡಿದ ಅವರು ಕರ್ನಾಟಕ ಕಾರ್ಯನಿರತ ಪರ್ತಕರ್ತ ಸಂಘದ ಜಿಲ್ಲಾ ಅಧ್ಯಕ್ಣ ರಾಧಕೃಷ್ಣ ಭಟ್ ಕೋರಿಗೆ ಮೇರೆಗ ದೇಶಪಾಂಡೆಯವರು ಜಿಲ್ಲೆಯ 250ಪತ್ರಕರ್ತರಿಗೆ ಅರೋಗ್ಯ ಕಿಟ್ ನೀಡಿದ್ದಾರೆ. ಕರೋನಾ ಸಂಕಷ್ಟ ಕಾಲದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಪತ್ರಕರ್ತರಿಗೆ ಸರ್ಕಾರ ಯಾವುದೇ ಪ್ಯಾಕೇಜ್ ಘೋಷಣೆ‌ ಮಾಡದೇ ಕಡೆಗಣಿಸಿರುವ ಬಗ್ಗೆ ಖಂಡಿಸಿದ ಅವರು ಮುಖ್ಯಮಂತ್ರಿಗಳು   ಕೂಡಲೇ ಪತ್ರಕರ್ತರಿಗೆ ಪ್ಯಾಕೇಜ್ ಘೋಷಿಸುವಂತೆ ಆಗ್ರಹಿಸಿದರು. ಕೋವಿಡ್ ನಲ್ಲಿ ಮರಣ ಹೊಂದಿದ ಬಡ ಕುಟುಂಬಗಳಿಗೆ ಪ್ರಕೃತಿ ವಿಕೋಪದಡಿ 4 ಲಕ್ಷ ಪರಿಹಾರ ನೀಡಲು ಅವಕಾಶವಿದ್ದರೂ ಸರ್ಕಾರ 1 ಲಕ್ಷ ಘೋಷಣೆ ಮಾಡಿರುವುದು ಹಾಸ್ಯಾಸ್ಪದ ಎಂದು ತಿಳಿಸಿದರು..  ಕಾಂಗ್ರೇಸ್ ಅಲ್ಪಸಂಖ್ಯಾತ ಜಿಲ್ಲಾ ಅಧ್ಯಕ್ಷ ಅಬ್ದುಲ್ ಮಜೀದ್, ಕಾಂಗ್ರೇಸ್ ಮುಖಂಡ ಸತೀಶ ಅಚಾರಿ ಇದ್ದರು.

Read These Next

ಕಾರವಾರ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಬೀಳ್ಕೊಡುಗೆ

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಧನಂಜಯ ಹೆಗಡೆ ಅವರಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸನ್ಮಾನಿಸಿ ಬೀಳ್ಕೊಡುಗೆ ...

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಶೀಘ್ರವೇ ಪರಿಹಾರ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ

ಮಂಡ್ಯ : ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ಬಂದಾಗ ಅವರ ಸಮಸ್ಯೆಗಳಿಗೆ ...