ಬೇಂಗ್ರೆ ಪಂಚಾಯತ್ ವ್ಯಾಪ್ತಿಯ 15ಅಂಗನವಾಡಿಗಳಿಗೆ ಕಸ ಸಂಗ್ರಹ ಪೆಟ್ಟಿಗೆ ವಿತರಣೆ

Source: sonews | By Staff Correspondent | Published on 23rd November 2020, 6:17 PM | Coastal News | Don't Miss |

ಭಟ್ಕಳ: 15ನೇ ಹಣಕಾಸು ಯೋಜನೆಯಡಿ ಘನತ್ಯಾಜ್ಯ ನಿರ್ವಾಹಣೆಗಾಗಿ ತಾಲೂಕಿನ ಬೇಂಗ್ರೆ ಗ್ರಾ.ಪಂ ವ್ಯಾಪ್ತಿಯ 15 ಅಂಗನವಾಡಿ ಕೇಂದ್ರಗಳಿಗೆ ಕಸ ಸಂಗ್ರಹಣಾ ಪಟ್ಟೆಗೆಯನ್ನು ವಿತರಿಸಲಾಯಿತು. 

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಭಟ್ಕಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್, ಬಾಲ್ಯದಲ್ಲಿ ಕಲಿಸುವ ಅಭ್ಯಾಸಗಳು ಪ್ರೌಢಾವಸ್ಥೆಯಲ್ಲೂ ಮುಂದುವರೆಯುತ್ತದೆ. ಅದೇ ರೀತಿ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ   ಅಭ್ಯಾಸ ಚಿಕ್ಕಂದಿನಿಂದಲೇ ಆಗುವಂತೆ ರೂಡಿಗತ ಮಾಡಬೇಕು ಎಂದು ಕರೆ ನೀಡಿದರು. 

ಈ ಸಂದರ್ಭದಲ್ಲಿ  ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯ ಬೊರಕರ, ಕಾರ್ಯದರ್ಶಿ ಮಂಜು ಎ ಗೌಡ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಶಂಕರ ದೇವಡಿಗ, ಅಂಗನವಾಡಿ ಮೇಲ್ವಿಚಾರಕಿÀ ಶ್ವೇತಾ ಬೊಮಕರ ಹಾಗೂ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...