ಕೊರೋನ ವೈರಸ್ ತಡೆ  ಸಿಬ್ಬಂದಿಗಳಿಗೆ ಕಾಂಗ್ರೆಸ್ ನಿಂದ ಹಣ್ಣು ಹಂಪಲ ವಿತರಣೆ 

Source: sonews | By Staff Correspondent | Published on 6th April 2020, 9:58 PM | Coastal News |

ಮುಂಡಗೋಡ : ಕೊರೋನ ವೈರಸ್ ತಡೆ ಮುಂಜಾಗ್ರತ ಕಾರ್ಯದಲ್ಲಿ ತೊಡಗಿರುವ ತಾಲೂಕಾಡಳಿತ ಕಚೇರಿ ಸಿಬ್ಬಂದಿ, ತಾಲೂಕ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸ ಇಲಾಖೆ ಸಿಬ್ಬಂದಿ ಗಳಿಗೆ ತಾಲೂಕ ಕಾಂಗ್ರೆಸ್ ಘಟಕದಿಂದ ಕಾರ್ಯಕರ್ತರಿಂದ ಹಣ್ಣು,ನೀರು,ಬಿಸ್ಕಟ್ ಇದ್ದ ಕಿಟ್ ಸುಮಾರು ಎರಡುನೂರ ಜನರಿಗೆ ಹಂಚಲಾಯಿತು. ಪೊಲೀಸ ಇಲಾಖೆಯವರಿಗೆ ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಸಂಚಾಲಕ ಮಹ್ಮದಗೌಸ್ ದುಂಡಶಿ ಊಟದ ವ್ಯವಸ್ಥೆ ಮಾಡಿದ್ದರು.

ಈ ಸಂದರ್ಭದಲ್ಲಿ ಪಿಐ ಶಿವಾನಂದ ಚಲವಾದಿ ಮಾತನಾಡಿ ಕೊರೋನ ತಡೆಯಲ್ಲಿ ಭಾಗವಹಿಸಿದವರ ಕುರಿತು  ಕಾಳಜಿ ವಹಿಸುತ್ತಿರುವವರಿಗೆ ತಮ್ಮ ಅಭಿನಂದನೆಗಳು ಎಂದರು.

ಈ ಸಂದರ್ಭದಲ್ಲಿ ಪಿಎಸ್‍ಆಯ್ ಬಸವರಾಜ ಮಬನೂರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರಳ್ಳಿ, ಮುಖಂಡರಾದ ಎಚ್.ಎಮ್.ನಾಯಕ್, ಎಂ.ಎನ್.ದುಂಡಶಿ, ಲಕ್ಷ್ಮಣ ಬನಸೋಡೆ, ಸೇರಿದಂತೆ ಧರ್ಮರಾಜ ನಡೆಗೇರ, ಅಲೆಹಸನ ಬೆಂಡಿಗೇರಿ, ಜೈನು ಬೆಂಡಿಗೇರಿ, ರಹಮತ್ ಪಠಾಣ, ಪ.ಪಂ ಸದಸ್ಯರಾದ ಮಹ್ಮದಗೌಸ ಮಕಾನದಾರ, ಮಹಮ್ಮದಜಾಫರ ಹಂಡಿ, ರಜಾ ಪಠಾಣ, ವಿಶ್ವನಾಥ ಪವಾಡಶೇಟ್ಟರ  ಜೆಡಿಎಸ್ ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ್ ಕುಟ್ರಿ ಸೇರಿದಂತೆ ಪೊಲೀಸ ಸಿಬ್ಬಂದಿ ಉಪಸ್ಥಿತರಿದ್ದರು.

Read These Next

ಭಟ್ಕಳದಲ್ಲಿ ಭಾರಿ ಮಳೆಗಾಳಿಗೆ 7 ವಿದ್ಯುತ್ ಕಂಬಗಳು ಧರಾಶಾಹಿ, 3 ಟ್ರಾನ್ಸ್‍ಫಾರ್ಮರ್ಸ್ ಗೆ ಬೆಂಕಿ ಅಂದಾಜು ರೂ.1.10 ಲಕ್ಷ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಾದ್ಯಂತ ಭಾರಿ ಬಿರುಗಾಳಿಯಿಂದ ಮಳೆ ಬೀಳುತ್ತಿದ್ದು ಪ್ರತಿ ಗಂಟೆಗೆ 50-60ಕಿ.ಮೀ ವೇಗದಲ್ಲಿ ಗಾಳಿ ಬೀಸುವ ...