1 ರಿಂದ 10 ನೇ ತರಗತಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಅಹಾರಧಾನ್ಯ ವಿತರಣೆ

Source: SO News | By Laxmi Tanaya | Published on 19th June 2021, 9:10 PM | State News | Don't Miss |

ಧಾರವಾಡ : 1 ರಿಂದ 10 ನೇ ತರಗತಿಗಳ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ನವೆಂಬರ್ 2020 ರಿಂದ ಎಪ್ರಿಲ್ 2021 ರ ಅವಧಿಯ ಒಟ್ಟು 132 ದಿನಗಳ (ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ)  ಬಿಸಿಯೂಟದ ಬದಲಾಗಿ ಆಹಾರ ಭಧ್ರತಾ ಭತ್ಯೆಯಾಗಿ ನಿಗದಿ ಪಡಿಸಿದ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಮತ್ತು ಪದಾರ್ಥಗಳನ್ನು ಶಾಲಾ ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ಹಂಚಾಟೆ ಹೇಳಿದರು.

 ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಮಕ್ಕಳ ಪೋಷಕರನ್ನು ಶಾಲೆಗೆ ಕರೆದು ಆಹಾರ ಧಾನ್ಯ ಹಂಚಿಕೆ ಮಾಡಲು ತಿಳಿಸಲಾಗಿದೆ.
1 ರಿಂದ 5ನೇ ತರಗತಿಯ ಮಕ್ಕಳಿಗೆ: 11 ಕೆ.ಜಿ ಅಕ್ಕಿ, 2 ಕೆ.ಜಿ 200 ಗ್ರಾಂ ಗೊದಿ,  2 ಲೀಟರ್ ಸೂರ್ಯಕಾಂತಿ ಎಣ್ಣೆ, 1 ಕೆ.ಜಿ ಉಪ್ಪು, 3 ಕೆ.ಜಿ 380 ಗ್ರಾಂ. ತೊಗರಿಬೇಳೆ. 
6 ರಿಂದ 8ನೇ ತರಗತಿಯ ಮಕ್ಕಳಿಗೆ:  16 ಕೆ.ಜಿ 500 ಗ್ರಾಂ ಅಕ್ಕಿ, 3 ಕೆ.ಜಿ 300 ಗ್ರಾಂ ಗೋಧಿ, 2 ಲೀಟರ್ ಸೂರ್ಯಕಾಂತಿ ಎಣ್ಣೆ , 1 ಕೆ.ಜಿ  ಉಪ್ಪು ಹಾಗೂ 6 ಕೆ.ಜಿ 800 ಗ್ರಾಂ  ತೊಗರಿಬೇಳೆ.
9 ರಿಂದ 10ನೇ ತರಗತಿಯ ಪ್ರೌಢಶಾಲಾ ಮಕ್ಕಳಿಗೆ: 19 ಕೆ.ಜಿ 800 ಗ್ರಾಂ ಅಕ್ಕಿ, 2 ಲೀಟರ್ ಸೂರ್ಯಕಾಂತಿ ಎಣ್ಣೆ , 1 ಕೆ.ಜಿ ಉಪ್ಪು  ಹಾಗೂ 6 ಕೆ.ಜಿ 800 ತೊಗರಿಬೇಳೆ.
 ಈ ರೀತಿಯಾಗಿ ಅಹಾರಧಾನ್ಯಗಳ ಪ್ರಮಾಣವನ್ನು ಸರ್ಕಾರದ ಹಂತದಲ್ಲಿ ನಿಗದಿಪಡಿಸಲಾಗಿದ್ದು ಅದರಂತೆ ಹಂಚಿಕೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳಾದ ದಿ ಅಕ್ಷಯ ಪಾತ್ರೆ ಫೌಂಡೇಶನ್ ಹಾಗೂ ಅದಮ್ಯಚೇತನ ಫೌಂಡೇಶನ್ ಸಂಚಾಲಕರುಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.

     ಈಗಾಗಲೇ ಕೆ.ಎಫ್.ಸಿ.ಎಸ್.ಸಿ ಗೋದಾಮುಗಳಲ್ಲಿ ಸಂಗ್ರಹಿಸಿರುವ ಅಹಾರಧಾನ್ಯ ಖಾದ್ಯ ತೈಲಗಳನ್ನು ಜಿಲ್ಲಾಗುಣಮಟ್ಟ ಪರಿಶೀಲನಾ ಸಮಿತಿಯ ನೇತೃತ್ವದಲ್ಲಿ ಗುಣಮಟ್ಟ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಸ್ವಯಂ ಸೇವಾ ಸಂಸ್ಥೆಗಳು ಅವುಗಳನ್ನು ತಕ್ಷಣ ಸ್ವೀಕರಿಸಿ ತಮ್ಮ ಸ್ವಂತ ಸಾಗಾಣಿಕಾ ವೆಚ್ಚದಲ್ಲಿ ಶಾಲೆಗಳಿಗೆ ವಿತರಣೆ ಮಾಡುವರು.

 ಶಾಲೆಗಳಲ್ಲಿ ವಿತರಣೆ ಆಗುತ್ತಿರುವ ಅಹಾರ ಧಾನ್ಯದ ಪ್ರಮಾಣ ವಿತರಣೆ ವಹಿ, ಪೋಷಕರಿಂದ ಸ್ವೀಕೃತಿ ಪಡೆದ ವಹಿಗಳನ್ನು ತಪಾಸಣೆ ಮಾಡುವುದು. ಅಕ್ಷರ ದಾಸೋಹ ತಾಲೂಕು ಸಹಾಯಕ ನಿರ್ದೇಶಕ ಅಹಾರಧಾನ್ಯ ವಿತರಣೆ ಸಂಬಂಧ ಎಲ್ಲಾ ಶಾಲೆಗಳಿಗೆ ಅಹಾರಧಾನ್ಯ ವಿತರಣೆ ಮಾಡಿದ ಬಗ್ಗೆ ಪೋಟೊ ವರದಿಯನ್ನು ಸಂಗ್ರಹಿಸಿ, ಪುಸ್ತಕ ರೂಪದಲ್ಲಿ ತಯಾರಿಸಿ ಧಾರವಾಡ ಜಿಲ್ಲಾ ಪಂಚಾಯತ ಅಕ್ಷರದಾಸೋಹ ಶಿಕ್ಷಣಾಧಿಕಾರಿಗಳು  ಇವರಿಗೆ ಎಲ್ಲಾ ಸರಬರಾಜು ಕಾರ್ಯ ಮುಗಿಸಿ ಜೂನ್ 30 ರ ಒಳಗೆ  ವರದಿ ನೀಡುವಂತೆ ತಿಳಿಸಿದೆ.

 ಶಿಕ್ಷಣಾಧಿಕಾರಿಗಳು ಅಕ್ಷರದಾಸೋಹ ಕಾರ್ಯಕ್ರಮ ಜಿಲ್ಲಾ ಪಂಚಾಯತ ಇವರು  ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿತರಣಾ ಪ್ರಗತಿ ವರದಿಯನ್ನು ಸಲ್ಲಿಸುವುದು. ವಿತರಣೆಯಲ್ಲಿ ಯಾವುದೇ ಗೊಂದಲ ಅಥವಾ ದೂರುಗಳು ಇದ್ದಲ್ಲಿ ಶಿಕ್ಷಣಾಧಿಕಾರಿಗಳು ಅಕ್ಷರದಾಸೋಹ ಕಾರ್ಯಕ್ರಮ ಜಿಲ್ಲಾ ಪಂಚಾಯತ (ಮೊ: 7899809967, 9164455598) ಇವರನ್ನು ಸಂರ್ಕಿಸಲು ತಿಳಿಸಿದ್ದಾರೆ.

ಶಾಲಾ ಮುಖ್ಯ ಶಿಕ್ಷಕರು ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳು 
ಕೋವಿಡ್ -19 ವೈರಾಣು ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಅಹಾರ ಸಾಮಗ್ರಿಗಳನ್ನು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರ ಸಹಕಾರದೊಂದಿಗೆ ಪಾಲಕ,ಪೋಷಕರಿಗೆ ವಿತರಿಸುವುದು. ಅಹಾರಧಾನ್ಯ ವಿತರಿಸುವ ಸಿಬ್ಬಂದಿಗಳು ಮತ್ತು ಸ್ವೀಕರಿಸಲು ಬರುವ ಪೋಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಹಾಗೂ ಸ್ಯಾನಿಟೈಜರ್ ಬಳಸಬೇಕು. ಸಾಲಾಗಿ ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾಳಜಿಯೊಂದಿಗೆ ಅಹಾರ ವಿತರಣೆ ಕಾರ್ಯವನ್ನು ಮುಖ್ಯ ಶಿಕ್ಷಕರು ನೋಡಿಕೊಳ್ಳುವುದು. ವಿತರಿಸಿದ ಬಗ್ಗೆ ಪೋಟೊ ವರದಿ ಹಾಗೂ ವಿತರಣಾ ವಹಿಯಲ್ಲಿ ಪೋಷಕರ ಸಹಿ ಪಡೆದು ದಾಖಲೆಯನ್ನು ಕಡ್ಡಾಯವಾಗಿ ನಿರ್ವಹಣೆ ಮಾಡುವುದು. 

ಪ್ರತಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಅಹಾರ ಧಾನ್ಯಗಳ ಪ್ರಮಾಣವನ್ನು ಸಾರ್ವಜನಿಕರಿಗೆ, ಪೋಷಕರಿಗೆ ಗಮನಕ್ಕಾಗಿ ಶಾಲಾ ಸೂಚನಾ ಫಲಕದಲ್ಲಿ ನಮೂದಿಸಿ ಸೂಕ್ತ ಸ್ಥಳದಲ್ಲಿ ಪ್ರದರ್ಶಿಸಬೇಕು.ಅಹಾರ ವಿತರಣೆಯನ್ನು ಶಾಲಾ ಸಮಯದಲ್ಲಿ ಮಾತ್ರ ವಿತರಿಸುವುದು. ಶಾಲೆಯಲ್ಲಿ ಅಹಾರ ಧಾನ್ಯಗಳ ವಿತರಣೆ ಮಾಡುತ್ತಿರುವ ಕುರಿತು ಶಾಲಾಭಿವೃದ್ದಿ ಸಮಿತಿ ಸದಸ್ಯರ ಮೂಲಕ ಪೋಷಕರಿಗೆ ಸಕಾಲದಲ್ಲಿ ಮಾಹಿತಿಯನ್ನು ನೀಡಲು ಕ್ರಮವಹಿಸುವುದು. ಅಹಾರಧಾನ್ಯಗಳನ್ನು ವಿತರಣೆಯ ಸಂದರ್ಭದಲ್ಲಿ ಶಾಲಾಭಿವೃದ್ಧಿಯ ಸಮಿತಿ ಸದಸ್ಯರು ಅಹಾರ ಪ್ರಮಾಣವನ್ನು ಪರಿಶೀಲಿಸಲು ತಪ್ಪದೇ ಉಪಸ್ಥಿತರಿರುವಂತೆ ನೋಡಿಕೊಳ್ಳುವುದು.

ಆಹಾರ ಧಾನ್ಯಗಳ ವಿತರಣಾ ಕಾರ್ಯಕ್ಕೆ ಅಡುಗೆ ಸಿಬ್ಬಂದಿಯನ್ನು ಬಳಸಿಕೊಳ್ಳುವುದು. ವಿದ್ಯಾರ್ಥಿಗಳಿಗೆ ವಿತರಿಸುವ ಅಹಾರಧಾನ್ಯಗಳ ಪ್ರಮಾಣದಲ್ಲಿ ಹಾಗೂ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು.
 ಶಾಲೆಗೆ ದಾಖಲಾಗಿಗೈರು ಹಾಜರಾದ ಶಾಲಾ ಮಕ್ಕಳಿಗೆ ಕೂಡಲೇ ಮಾಹಿತಿ ನೀಡಿ ಅವರಿಗೂ ಅಹಾರಧಾನ್ಯ ವಿತರಿಸಲು ಕ್ರಮವಹಿಸಿ ಸ್ವೀಕೃತಿ ಪಡೆಯುವುದು. ಅಹಾರ ಧಾನ್ಯಗಳು ಯಾವುದೇ ಕಾರಣಕ್ಕೂ ಶಾಲೆಯಲ್ಲಿ ಉಳಿಕೆಯಾಗದಂತೆ ಕ್ರಮಹಿಸುವುದು. ಕಡ್ಡಾಯವಾಗಿ SಂಖಿS ತಂತ್ರಾಂಶದಲ್ಲಿ ಇರುವ ಮಕ್ಕಳಿಗೆ ಮಾತ್ರ ಸ್ವಯಂ ಸೇವಾ ಸಂಸ್ಥೆಗಳಿಂದ ಸರಬರಾಜಾಗುವ ಅಹಾರಧಾನ್ಯಗಳನ್ನು ನೀಡುವುದು.ತಂತ್ರಾಂಶದಲ್ಲಿ ಇಲ್ಲದೇ ಇದ್ದಲ್ಲಿ ತಕ್ಷಣ ಸಂಬಂಧಿಸಿದ ಬಿ.ಇ.ಓ ಅಥವಾ ಸಹಾಯಕ ನಿರ್ದೇಶಕರಿಗೆ ಲಿಖಿತವಾಗಿ ಗಮನಕ್ಕೆ ತಂದು ಅಹಾರಧಾನ್ಯ ನೀಡುವುದು. ತಪ್ಪಿದಲ್ಲಿ ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರ ಮೇಲೆ ನಿಯಮಾನುಸಾರ ಶಿಸ್ತು ಕ್ರಮವಹಿಸಲಾಗುವುದು.

ತಾಲ್ಲೂಕು ಮಟ್ಟದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಸಹಾಯಕ ನಿರ್ದೇಶಕರು ಅಕ್ಷರದಾಸೋಹ ಇವರು ನಿರ್ವಹಿಸಬೇಕಾದ ಕರ್ತವ್ಯ ಮತ್ತು ಜವಾಬ್ದಾರಿಗಳು : ರಾಜ್ಯದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿಯೂ ಶಿಕ್ಷಕರು ಮತ್ತು ಅಡುಗಡೆ ಸಹಾಯಕರ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿರುವ ಕುರಿತು ಪರಿಶೀಲಿಸುವುದು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಹಾಯಕ ನಿರ್ದೇಶಕರು ಸಮನ್ವಯದೊಂದಿಗೆ ಎಲ್ಲಾ ಶಾಲೆಗೆ ವಿತರಣೆಯಾದ ಅಹಾರಧಾನ್ಯ ಹಾಗೂ SಂಖಿS ತಂತ್ರಾಂಶದ ಮಕ್ಕಳ ಸಂಖ್ಯೆಗೆ ತಾಳೆಯಾಗುವುದನ್ನು ಖಚಿತಪಡಿಸಿಕೊಳ್ಳ ಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...