ಸಂಘ ಸಂಸ್ಥೆಗಳು ಅವಶ್ಯವಿರುವ ಎಲ್ಲಾ ವ್ಯಕ್ತಿಗಳಿಗೆ ಆಹಾರ ವಿತರಿಸಿ : ಜಿಲ್ಲಾಧಿಕಾರಿ ಡಾ.ರಾಜೆಂದ್ರ ಕೆ.ವಿ.

Source: SO News | By Laxmi Tanaya | Published on 14th May 2021, 9:51 PM | Coastal News | Don't Miss |

ಮಂಗಳೂರು : ಸಂಘ ಸಂಸ್ಥೆಗಳು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ , ಅವಶ್ಯವಿರುವ ನಿರಾಶ್ರಿತರಿಗೆ ಹಾಗೂ ವಲಸೆ ಕಾರ್ಮಿಕರಿಗೆ ಆಹಾರ ವಿತರಣೆ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ತಿಳಿಸಿದರು.

ಅವರು ವೀಡಿಯೋ ಸಂವಾದದ ಮೂಲಕ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದರು.

ಕೊರೋನಾ ಕರ್ಫ್ಯೂನಿಂದಾಗಿ ಅನೇಕ ಜನರು ಉದ್ಯೋಗ ಸಿಗದೇ ಆರ್ಥಿಕವಾಗಿ ಕಷ್ಠದಲ್ಲಿರುವ ನಿರಾಶ್ರಿತರು ಸೇರಿದಂತೆ ವಲಸೆ ಕೂಲಿ ಕಾಮಿಕರುಗಳಿಗೆ ವಿವಿಧ ಸಂಘ ಸಂಸ್ಥೆಗಳು ಪ್ರಾಯೋಜತ್ವದಲ್ಲಿ ಸ್ವಯಂ ಪ್ರೇರಿತರಾಗಿ ಆಹಾರ ಪಾಕೆಟ್ ಗಳನ್ನು ವಿತರಿಸುತ್ತಿರುವ ಕಾರ್ಯವು ಶ್ಲಾಘನೀಯ ಎಂದರು.

ಅವಶ್ಯವಿರುವ ಪ್ರತಿಯೊಬ್ಬ ವ್ಯಕ್ತಿಗೂ ಆಹಾರ ಪಾಕೆಟ್ ಗಳು ತಲುಪಿಸಬೇಕು , ಸಂಘ ಸಂಸ್ಥೆಗಳು ನೀಡಿದವರಿಗೆ ಆಹಾರ ಪದಾರ್ಥಗಳನ್ನು ಪುನ: ನೀಡುತ್ತಿರುವುದು ಕಂಡು ಬರುವುದರ ಜೊತೆಗೆ ಆಹಾರ ಪದಾರ್ಥಗಳು ಸಾಕಷ್ಟು ಪ್ರಮಾಣದಲ್ಲಿ ವ್ಯರ್ಥವಾಗುತ್ತಿರುವುದು ಕಾಣುತ್ತಿದ್ದೇವೆ ಇದನ್ನು ತಪ್ಪಿಸಬೇಕಿದೆ ಎಂದರು.

ನಿರಾಶ್ರಿತರು ಹೆಚ್ಚಾಗಿ ನೆಹರು ಮೈದಾನದ ಹತ್ತಿರ , ಬಂದರು ಸಮೀಪ ಕಂಡುಬAದರೆ , ವಲಸೆ ಕಾರ್ಮಿಕರುಗಳು ಸುರತ್ಕಲ್ ಭಾಗದಲ್ಲಿ ಇದ್ದಾರೆ ಇವರುಗಳಿಗೆ ಸಂಘ ಸಂಸ್ಥೆಗಳು ಆಹಾರ ಪದಾರ್ಥಗಳ ಪಾಕೆಟ್ ಗಳನ್ನು ನೀಡುವುದು ಕಂಡುಬರುತ್ತಿದೆ.
 ಒಂದೊಂದು ಸಂಘ ಸಂಸ್ಥೆಗಳು ಒಂದು ಹೊತ್ತಿನ ಆಹಾರವನ್ನು , ಒಂದೊಂದು ಪ್ರದೇಶದಲ್ಲಿ ನೀಡಿದಾಗ ಮಾತ್ರ ಆಹಾರ ಪದಾರ್ಥ ಪೋಲಾಗುವುದನ್ನು ತಡೆಯಲು ಸಾಧ್ಯವಾಗುತ್ತದೆ ಎಂದ ಅವರು ಮುಂದಿನ ಭಾನುವಾರದಿಂದ ಸಂಘ ಸಂಸ್ಥೆಗಳು ಯಾವ ಯಾವ ಭಾಗದಲ್ಲಿ ನೀಡಬೇಕೆಂದು ಜಿಲ್ಲಾಡಳಿದೊಂದಿಗೆ ಸಮನ್ವಯ ಸಾಧಿಸಿ ವಿತರಣೆ ಮಾಡುವುದು ಒಳಿತು ಎಂದರು.

 ಅಲ್ಲದೇ ಬಡ ಜನರಿಗೆ ಆಹಾರ ದವಸ ಧಾನ್ಯಗಳನ್ನು ಸಹ ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳು ವಿತರಣೆಯನ್ನು ಮಾಡಲಾಗುತ್ತಿದೆ ಇದರಲ್ಲಿಯೂ ಸಹ ದೊರೆತವರಿಗೆ ಪುನಾರವರ್ತನೆಯಾಗುತ್ತಿದೆ. ತೀರ ಅವಶ್ಯಕತೆಯಿರುವ ಕೊನೆಯ ವ್ಯಕ್ತಿಗೂ ಸಹ ಇವುಗಳನ್ನು ತಲುಪಿಸುವ ಕಾರ್ಯವಾಗಬೇಕು ಎಂದರು.

 ಸಭೆಯಲ್ಲಿ ಉಪವಿಭಾಗಾಧಿಕಾರಿ ಮದನ್ ಮೋಹನ್, ಮಹಾನಗರ ಪಾಲಿಕೆ ಅಧಿಕಾರಿಗಳು , ಕಾರ್ಮಿಕ ಇಲಾಖೆ ಅಧಿಕಾರಿ, ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...