ಶ್ರೀ ಗುರು ಸುಧೀಂದ್ರ ಕಾಲೇಜು ವತಿಯಿಂದ ಡಿಜಿಟಲ್ ತರಬೇತಿ ಕಾರ್ಯಾಗಾರ

Source: so news | By MV Bhatkal | Published on 17th June 2021, 8:00 PM | Coastal News | Don't Miss |


ಭಟ್ಕಳ: ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಸಿ, ಉದ್ಯೋಗದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ನೆರವಾಗುವಂತೆ ಹಲವು ವೆಬಿನಾರಗಳನ್ನು ಆಯೋಜಿಸಲಾಗಿತ್ತು. ಕೊಂಕಣ ರೇಲ್ವೆ ಸಹಯೋಗದೊಂದಿಗೆ ಎರಡು ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ವ್ಯಕ್ತಿತ್ವ ವಿಕಸನ, ಸಂದರ್ಶನ ಕೌಶಲ್ಯ, ರೈಲ್ವೆಯಲ್ಲಿ ಉದ್ಯೋಗಾವಕಾಶ ಮುಂತಾದ ವಿಷಯದ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದರು.
ಲೋಟಸ್ ನೋವೆಲ್ ವೆಲ್ತ್, ಬಾಂಬೆ ಸ್ಟಾಕ್ ಎಕ್ಸಚೇಂಜ್ ಸಹಯೋಗದೊಂದಿಗೆ ಬಂಡವಾಳ ಮಾರುಕಟ್ಟೆಯ ಕುರಿತ ವೆಬಿನಾರ ಸರಣಿ ಮಾಹಿತಿ ಕಾರ್ಯಾಗಾರವು ವಿಷಯ ತಜ್ಞರಿಂದ ನೆರವೇರಿತು. ಅಭಿಮೋ ಟೆಕ್ನಾಲಜಿಸ್ ಮಂಗಳೂರು ಇವರ ಸಹಯೋಗದೊಂದಿಗೆ ‘ಒರಾಕಲ್ ಪಿ ಎಲ್ ಎಸ್ ಕ್ಯು ಎಲ್’ ತಂತ್ರಜ್ಞಾನದ ಕುರಿತು ಡಿಜಿಟಲ್ ತರಬೇತಿ ಕಾರ್ಯಾಗಾರವು ನುರಿತ ತಜ್ಞರ ನೀಡಿದರು.
ಅಲ್ಲದೇ ಆರೋಗ್ಯ ಭಾರತಿ ಸಹಯೋಗದೊಂದಿಗೆ ಒಂದು ವಾರದ ಆನ್ಲೈನ್ ಯೋಗ ತರಬೇತಿ ಕಾರ್ಯಕ್ರಮವೂ ಜರುಗಿತು. ವಿದ್ಯಾರ್ಥಿಗಳು, ಉಪನ್ಯಾಸಕರು ಬದಲಾದ ಸನ್ನಿವೇಶದಲ್ಲಿ ಆನ್ಲೈನ್ ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.
ವಿದ್ಯಾರ್ಥಿಗಳಲ್ಲಿ ಕೌಶಲ್ಯ ವೃದ್ಧಿಸಿ, ಉದ್ಯೋಗದ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಲು ನೆರವಾಗುವಂತೆ ಹಲವು ವೆಬಿನಾರಗಳನ್ನು ಶ್ರೀ ಗುರು ಸುಧೀಂದ್ರ ಕಾಲೇಜು ವತಿಯಿಂದ ಆಯೋಜಿಸಲಾಗಿತ್ತು

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...