ಧಾರವಾಡ ಮತ್ತು ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ: ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೌಂಟರ್ ಉದ್ಘಾಟನೆ

Source: SO News | By Laxmi Tanaya | Published on 3rd September 2021, 10:00 AM | State News | Don't Miss |

ಧಾರವಾಡ : ಅಂತರಾಷ್ಟ್ರೀಯ ಪತ್ರಗಳನ್ನು ಕಳುಹಿಸುವ ಗ್ರಾಹಕರ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಧಾರವಾಡ ಮತ್ತು ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೌಂಟರ್ (IMBC) ವನ್ನು ವಿಶೇಷವಾಗಿ ಪ್ರಾರಂಭಿಸಲಾಗಿದೆ. ಇದನ್ನು ಉತ್ತರ ಕರ್ನಾಟಕ ವಲಯದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಗಿದೆ. 

 ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೌಂಟರ್ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಆದ ಡಾ. ಎನ್. ವಿನೋದಕುಮಾರ್  ಗುರುವಾರದಂದು ಉದ್ಘಾಟಿಸಿದರು. ಇದರಲ್ಲಿ ಪಾರ್ಸಲ್ ಪ್ಯಾಕಿಂಗ್ ವ್ಯವಸ್ಥೆಯೂ ಇದ್ದು ಅಂಚೆ ಇಲಾಖೆಯಲ್ಲಿ ಉತ್ತಮ ಗುಣಮಟ್ಟದ ಪಾರ್ಸೆಲ್ ಸೇವೆ ಲಭ್ಯವಿರುವುದರಿಂದ ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಪೋಸ್ಟ್ ಮಾಸ್ಟರ್ ಜನರಲ್ ಡಾ. ಎನ್. ವಿನೋದ್ ಕುಮಾರ್ ವಿನಂತಿಸಿದರು.

 ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೇಂದ್ರವು ವಿದೇಶಗಳಿಗೆ ಪಾರ್ಸಲ್ ಕಳುಹಿಸುವ ಗ್ರಾಹಕರಿಗೆ ಪಾರ್ಸೆಲ್ ಪ್ಯಾಕಿಂಗ್, ಬುಕಿಂಗ್, ಟ್ರ್ಯಾಕಿಂಗ್ ಸೇವಾ ಸೌಲಭ್ಯ ಒದಗಿಸುವ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.

 ಕಾರ್ಯಕ್ರಮದಲ್ಲಿ ಎಸ್. ವಿಜಯನರಸಿಂಹ, ಸಹಾಯಕ ನಿರ್ದೇಶಕರು, ಉತ್ತರ ಕರ್ನಾಟಕ ವಲಯ, ಧಾರವಾಡ,  ವಿ.ಎಸ್.ಎಲ್. ನರಸಿಂಹ ರಾವ್, ಹಿರಿಯ ಅಂಚೆ ಅಧೀಕ್ಷಕರು, ಆಯ್.ಆರ್. ಮುತ್ನಾಳಿ, ಸಹಾಯಕ ಅಂಚೆ ಅಧೀಕ್ಷಕರು, ಧಾರವಾಡ,  ಆರ್.ಡಿ. ದುರ್ಗಾಯಿ,  ಸೀನಿಯರ್  ಪೆÇೀಸ್ಟ್ ಮಾಸ್ಟರ್, ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ ಹಾಗೂ ಸುಧಾ ಸತ್ಯನಾರಾಯಣ, ಪೋಸ್ಟ್ ಮಾಸ್ಟರ್ ಧಾರವಾಡ ಪ್ರಧಾನ ಅಂಚೆ ಕಚೇರಿ ಇವರು ಉಪಸ್ಥಿತರಿದ್ದರು.

 ಇದೇ ಸಂದರ್ಭದಲ್ಲಿ ಧಾರವಾಡ ಅಂಚೆ ವಿಭಾಗದ ಫೇಸಬುಕ್ ಪೇಜನ್ನು ಕೂಡ ಡಾ. ಎನ್. ವಿನೋದಕುಮಾರ್, ಪೋಸ್ಟ್ ಮಾಸ್ಟರ್ ಜನರಲ್, ಉತ್ತರ ಕರ್ನಾಟಕ ವಲಯ, ಧಾರವಾಡ ಇವರು ಧಾರವಾಡ ಪ್ರಧಾನ ಅಂಚೆ ಕಚೇರಿಯಲ್ಲಿ ಇಂದು ಲೋಕಾರ್ಪಣೆ ಮಾಡಿದರು. ಎಲ್ಲ ಗ್ರಾಹಕರಿಗೆ ಫೇಸ್‍ಬುಕ್ ಪೇಜ್ ಭೇಟಿ ನೀಡಿ ತಮ್ಮ ಅಭಿಪ್ರಾಯ ತಿಳಿಸಲು ವಿನಂತಿಸಲಾಗಿದೆ.

 ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಪೋಸ್ಟ್ ಮಾಸ್ಟರ್ ಅವರನ್ನು ಅಥವಾ IMBC ಹುಬ್ಬಳ್ಳಿ ಕಚೇರಿಯನ್ನು 0836-2221602 (ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ), 0836-2441806 (ಧಾರವಾಡ ಪ್ರಧಾನ ಅಂಚೆ ಕಚೇರಿ), 0836-2440442 (ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಧಾರವಾಡ) ದೂರವಾಣಿ ಮುಖಾಂತರ ಸಂಪರ್ಕಿಸಲು ತಿಳಿಸಲಾಗಿದೆ.

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...