ದೇವರಾಜ ಅರಸು ಭೂ ಸುಧಾರಣೆಯ ಹರಿಕಾರ :  ಡಿಸಿ 

Source: sonews | By Staff Correspondent | Published on 21st August 2019, 12:04 AM | Coastal News |

ಡಿ. ದೇವರಾಜ ಅರಸು  104ನೇ ಜನ್ಮ ದಿನಾಚರಣೆ
 

ಕಾರವಾರ:  ಡಿ.ದೇವರಾಜ ಅರಸು ಅವರು ಭೂ ಸುಧಾರಣೆ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಹರಿಕಾರ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಹೇಳಿದರು.    

ಪ್ರಕೃತಿ ವಿಕೋಪ ಹಿನ್ನಲೆಯಲಿ ಜಿಲ್ಲಾಧಿಕಾರಿ ಕಚೇರಿ ಸಬಾಭವನದಲ್ಲಿ ಮಂಗಳವಾರ ದೇವರಾಜ್ ಅರಸುರವರ 104 ನೇ ಜನ್ಮ ದಿನಾಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಿ ಮಾತನಾಡಿದರು. 

ತೀರಾ ಸಂಕಷ್ಟದಲ್ಲಿದ್ದ ಗೇಣಿಯನ್ನು ನಂಬಿ ಬದುಕುತ್ತಿದ್ದ ಲಕ್ಷಾಂತರ ಕುಟುಂಬಗಳಿಗೆ ಸಾಮಾಜಿಕ ನ್ಯಾಯ ಒದಗಿಸಲು ಭೂ ಸುದಾರಣೆಯನ್ನು ಜಾರಿಗೆ ತಂದು ಉಳುವವನೇ ಭೂಮಿಯ ಒಡೆಯ ಕಲ್ಪನೆಗೆ ಕಾರಣಿಭೂತರಾದವರು   ದೇವರಾಜ ಅರಸು. ದೀನ ದಲಿತರ ಶೋಷಿತವರ್ಗದವರ  ಎಳ್ಗೆಗಾಗಿ ಶ್ರಮಿಸಿದ ವ್ಯಕ್ತಿ ದೇವರಾಜ್ ಅರಸರು. ಮನುಷ್ಯರು ಒಳ್ಳೆಯ ದಾರಿಗೆ ಬರಬೇಕಾದರೆ ಮನೋಸ್ತೈರ್ಯವನ್ನ ಒಳಗೊಂಡಿರಬೇಕು. ಸಮಾಜದಲ್ಲಿ ಇರುವ ವಿಘಟನೆ ಹೋಗುವುದೇ ಶಾಶ್ವತ ಬದಲಾವಣೆ ಅದನ್ನು ಹೋಗಲಾಡಿಸಲು ಕಾರಣೀಕರ್ತರಾದವರು  ಮತ್ತು ಸಮಾಜ ಸುಧಾರಣೆಯಲ್ಲಿ ಮುಂಚೂಣಿಯಲ್ಲಿದ್ದವರು ಅರಸರು ಎಂದರು. 

ಭೂ ಸುಧಾರಣೆಯ ಹರಿಕಾರ, ಕ್ರಾಂತಿಕಾರಿ ನಾಯಕ, ಬಾಲ್ಯದಿಂದಲೇ, ನಾಯಕತ್ವ ಸ್ವಭಾವ ಹೊಂದಿದ್ದ, ಹಿಂದುಳಿದ ಸಮಾಜದ ಕಲ್ಯಾಣಕ್ಕೆ ಶ್ರಮಿಸಿದ ಹಾಗೂ ಅಸ್ಪ್ರಶ್ಯತೆ ನರಳುತ್ತಿದ್ದ ಜನರಿಗೆ ಬೆನ್ನಲುಬಾಗಿ  ನಿಂತು, ಕೃಷಿ ಬ್ಯಾಂಕುಗಳ ಸ್ಥಾಪನೆಯಿಂದ, ಸುವರ್ಣ ಯುಗದ ರೂಪೂರೇಷ ಹಾಕಿದಂತಹ ದೇವರಾಜು ಅರಸರು ಮತ್ತೋಮ್ಮೆ ನಮ್ಮ ನಾಡಿನಲ್ಲಿ ಹುಟ್ಟಿ ಬರಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ. ರೋಶನ್ ಅವರು ಹೇಳಿದರು. 

ಸದ್ಭಾವನೆ ದಿನ ಅಂಗವಾಗಿ ಇದೇ ಸಂದರ್ಭದಲ್ಲಿ ಜಾತಿ ಧರ್ಮದ ಬೇಧಭಾವವಿಲ್ಲದೇ, ಭಾರತದ ಎಲ್ಲ ಜನತೆಯ  ಸೌಹಾರ್ದಕ್ಕಾಗಿ ಕಾರ್ಯನಿರ್ವಹಿಸುತ್ತೆವೆ ಎಂಬ ಪ್ರತಿಜ್ಞಾವಿದಿಯನ್ನು ಭೋದಿಸಲಾಯಿತು. 

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ ಬಡಿಗೇರ ಅವರು ಅರಸುರವರ ಜೀವನ ಶೈಲಿ ಹಾಗೂ ಬಡವರ ಬಗ್ಗೆ ಇದ್ದಂತಹ ಕಾಳಜಿ ಕುರಿತು ವಿವರಿಸಿದರು.  ಕಾರವಾರ ನಗರಸಭೆ ಪೌರಾಯುಕ್ತರಾದ ಎಸ್. ಯೋಗೇಶ್ವರ ಅವರು ಉಪಸ್ಥಿತರಿದ್ದರು. 
   
 

Read These Next