ಜಾನುವಾರು ಕಳ್ಳತನ ನಡೆಸುತ್ತಿದ್ದ ಏಳು ಜನರ ಬಂಧನ. ಹೊನ್ನಾವರ ಪೊಲೀಸರ ಕಾರ್ಯಾಚರಣೆ.

Source: SO News | By Laxmi Tanaya | Published on 25th August 2021, 10:15 PM | Coastal News |

ಹೊನ್ನಾವರ : ಅಕ್ರಮವಾಗಿ ಜಾನುವಾರು ಕಳ್ಳತನ ನಡೆಸುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ  ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪೊಲೀಸರು ಯಶಸ್ವಿಯಾಗಿದ್ದಾರೆ. 

ಹೊನ್ನಾವರ ಹಾಗೂ ಮಂಕಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಒಟ್ಟು ಆರು ಮಂದಿಯನ್ನ ವಶಕ್ಕೆ ಪಡೆಯಲಾಗಿದೆ. ಭಟ್ಕಳದ ಸಯ್ಯದ್ ಮುಸಾ(22), ಮಹ್ಮದ್ (34), ಪ್ರಣವ್ ಶೆಟ್ಟಿ(19), ಮಹ್ಮದ್ ಇಬ್ರಾಹಿಂ(42),  ನಜೀರ್ಉ ಹುಸೇನ್ ವಾಜಿದ್ ಜಾಫರ್(24), ದೃಶ್ಯ ಮೆಂಡನ್(20) ಬಂಧಿತರು. 

ಪ್ರಕರಣದಲ್ಲಿದ್ದ ಇನ್ನು ಮೂವರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡರಸಿದ್ದಾರೆ. ತಾಲೂಕಿನ ಗುಣವಂತೆ, ಮಾವಿನಕಟ್ಟೆ ವ್ಯಾಪ್ತಿಯಲ್ಲಿ ಆಗಸ್ಟ್ 3 ಮತ್ತು 22 ರಂದು ಗೋ ಕಳ್ಳತನ ನಡೆದಿತ್ತು. ಗೋಗಳ್ಳರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಗೋ ಸಾಗಾಟಕ್ಕೆ ಬಳಸಿದ್ದ ಎರಡು ವಾಹನ ಜಪ್ತಿ ಮಾಡಿದ್ದಾರೆ. ಕದ್ದ ಜಾನುವಾರುಗಳನ್ನ ಪೊಲೀಸರು  ಮಾಲೀಕರಿಗೆ ತಲುಪಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...