ಕೋವಿಡ್-19 ತಡೆಗಟ್ಟಲು ವರ್ಗಾವಣೆ ಮಾಡಿದರೂ ಪರವಾಗಿಲ್ಲ ಕಠಿಣ ಕ್ರಮ ಕೈಗೊಂಡು ಕೊರೊನ ನಿಯಂತ್ರಿಸಲು ಪ್ರಯತ್ನಿಸುತ್ತೇನೆ : ತಹಶೀಲ್ದಾರ ಮುಂದಲಮನಿ

Source: sonews | By Staff Correspondent | Published on 7th July 2020, 7:05 PM | Coastal News |

ಮುಂಡಗೋಡ : ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿದರು ಪರವಾಗಿಲ್ಲ ಕೋವಿಡ್ 19 ನಿಯಂತ್ರಣಕ್ಕೆ ನಾನು ಕಠಿಣ ಕ್ರಮ ಕೈಗೊಳ್ಳುತ್ತೇನೆ. ರಸ್ತೆಗಳಲ್ಲಿ ಗುಂಪು ಕಟ್ಟಿಕೊಂಡು ನಿಂತವರಿಗೆ ಲಾಠಿ ರುಚಿತೋರಿಸಬೇಕಾಗುತ್ತದೆ ಎಂದು ತಹಶೀಲ್ದಾರ ಮುಂದಲಮನೆ ಹೇಳಿದರು ಅವರು ಕೋವಿಡ್-19 ನಿಯಂತ್ರಣ ಕುರಿತು ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಮಂಗಳವಾರ ಜರುಗಿದ ವರ್ತಕರ ಮತ್ತು ವಾರ್ಡ್ ಸದಸ್ಯರ ಸಭೆಯಲ್ಲಿ ಹೇಳಿದರು.

ತಾಲೂಕಿನಲ್ಲಿ ಎಲ್ಲ ಇಲಾಖೆಗಳ ಮತ್ತು ಸಮುದಾಯದವರ ಸಹಾಯದಿಂದ ಬರುವ 6 ತಿಂಗಳವರೆಗೆ ಎಚ್ಚರಿಕೆಯಿಂದ ಕೋವಿಡ್-19 ವಿರುದ್ಧ ಹೊರಾಡಬೇಕಿದೆ ಸಾಮಾಜಿಕ ವರದಿ ಸಲ್ಲಿಸುವಲ್ಲಿ ಇಡಿ ಜಿಲ್ಲೆಯಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಎಂದು ಹೇಳಿದರು.

ಇನ್ನೆರಡು ದಿನಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗುವುದು. ಇಲ್ಲಿನ ಕೋವಿಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ 13 ಬೆಡ್‍ಗಳು, ಐಸೋಲೇಷನ್ ವಾರ್ಡ್‍ನಲ್ಲಿ 6 ಬೆಡ್‍ಗಳ ವ್ಯವಸ್ಥೆ ಮಾಡಲಾಗಿದ್ದು ಬೇರೆ ಜಿಲ್ಲೆಗಳಿಂದ ಬಂದವರು ನೇರವಾಗಿ ಜ್ವರ ತಪಾಸಣೆ ಕೇಂದ್ರಕ್ಕೆ ಹೋಗಬೇಕು. ಇಲ್ಲದಿದ್ದರೆ ಅವರ ಮೇಲೆ ಪ್ರಕರಣ ದಾಖಲಿಸಲಾಗುವುದು.    ವಿಶೇಷವಾಗಿ ಬೆಂಗಳೂರಿನಿಂದ ಬಂದವರ ಗಂಟಲ ದ್ರವ ಪರೀಕ್ಷೆಗೆ ಒಳಡಿಸಲಾಗುವುದು

ಇವರ ಮೇಲೆ ಹೆಚ್ಚಿನ ಗಮನ ವಹಿಸಬೇಕಾಗಿದೆ. ತಾಲೂಕಾಡಳಿತ ಸಿಬ್ಬಂದಿಗೆ ವಿನಾ ಕಾರಣ ತೊಂದರೆ ನೀಡಿದವರ ಬಗ್ಗೆ ತಹಶೀಲ್ದಾರ ಗರಂ ಆಗಿದ್ದರು.  ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಂಗಡಿಕಾರರು ನಮಗೆ ಸಹಕಾರ ನೀಡುತ್ತಿಲ್ಲ ಅಂಗಡಿಕಾರರು ಮಾಸ್ಕ್ ಧರಿಸುವುದಾಗಲೀ, ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ತಿಳಿಸುವುದಾಗಲೀ ಅಥವಾ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ ಬಂದ ಗ್ರಾಹಕರಿಗೆ ಸೈನಿಟೈಸೆರ ನೀಡುತ್ತಿಲ್ಲ ಎಂಬ ಬೇಸರ ವ್ಯಕ್ತಪಡಿಸಿ   ಮುಂದಿನ ದಿನಗಳಲ್ಲಿ ನನ್ನ ಅಧಿಕಾರ ಬಳಸಿಕೊಂಡು ವರ್ಗಾವಣೆಯಾದರೂ ಸರಿ ನಾನು ಮುಲಾಜಿಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.  

ಇದೇ ವೇಳೆ ಮಾತನಾಡಿದ ವರ್ತಕ ಉಮೇಶ ರಾಯ್ಕರ ಹೋಟೆಲ್, ಖಾನಾವಳಿ ಮತ್ತು ಬೇಕರಿಗಳನ್ನು ರಾತ್ರಿ 8 ಗಂಟೆವರೆಗೆ ತೆರೆಯಲು ಅವಕಾಶ ನೀಡಬೇಕೆಂದರು. ಕೆಲವರು ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿಗಳನ್ನು ತೆರೆಯಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಉಪ್ಪುಂದ ಮಾತನಾಡಿ 10-12 ದಿನಗಳವರೆಗೆ ಖಾಯಂ ಆಗಿ ಲಾಕ್‍ಡೌನ್ ಮಾಡಿ ಎಲ್ಲ ಅಂಗಡಿಗಳನ್ನು ಮುಚ್ಚಿಸುವಂತೆ ಸಲಹೆ ನೀಡಿದರು. ನಂತರ ಸಲಹೆ ಪಡೆದ ತಹಸೀಲ್ದಾರ್ ಮಾತನಾಡಿ ಇದು ನಿಮ್ಮೆಲ್ಲರ ಸ್ವಯಂ-ಪ್ರೇರಣೆಯಿಂದ ಆಗಬೇಕಾದ ಕೆಲಸ. ಈ ಬಗ್ಗೆ ಪ.ಪಂ. ಮುಖ್ಯಾಧಿಕಾರಿ ಜೊತೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದರು.ತಮಗೆ  ಸಹಕಾರ ನೀಡುತ್ತಿರುವ ಮಾಧ್ಯಮ ಮಿತ್ರರಿಗೆ ಅಭಿನಂದನೆ ಸಲ್ಲಿಸಿದರು.

ಈ ವೇಳೆ ಪ.ಪಂ. ಮುಖ್ಯಾಧಿಕಾರಿ ಸಂಗನಬಸಯ್ಯಾ, ಎಸ್.ವೈ. ಗೋಣೆಪ್ಪನವರ, ಪ.ಪಂ. ಸದಸ್ಯರು, ವರ್ತಕರು ಇದ್ದರು.

ಶ್ರೀಧರ ಮುಂದಲಮನಿ, ತಹಸೀಲ್ದಾರ್ : ವಾರ್ಡ್ ಸದಸ್ಯರು ಸಕ್ರೀಯಗೊಳ್ಳಬೇಕು. ನಿಮ್ಮ-ನಿಮ್ಮ ವಾರ್ಡ್‍ನಲ್ಲಿ 60 ವರ್ಷ ಮೇಲ್ಪಟ್ಟವರ ವರದಿ, ಇವರಲ್ಲಿ ಇರುವ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ವರದಿ, ವಯಸ್ಸಿನ ನಿರ್ಬಂಧವಿಲ್ಲದೆ ಕಾಯಿಲೆ ಇರುವ ಎಲ್ಲರ ಚಿಕಿತ್ಸೆ ವರದಿ ಮತ್ತು 10ವರ್ಷದ ಒಳಗಿನ ಮಕ್ಕಳ ಪಟ್ಟಿ ಮಾಡಬೇಕು. ಇದಕ್ಕೆ ನೀವು ಆಶಾ ಕಾರ್ಯಕರ್ತೆಯರ ಸಹಾಯ ಪಡೆದುಕೊಳ್ಳಿ ಎಂಬ ಟಾಸ್ಕ್ ನೀಡಿದರು.

ಎಚ್.ಎಫ್. ಇಂಗಳೆ, ತಾಲೂಕು ಆಡಳಿತ ವೈದ್ಯಾಧಿಕಾರಿ : ತಾಲೂಕು ಆಸ್ಪತ್ರೆ ಸಿಬ್ಬಂದಿ ಬಾಡಿಗೆ ಇರುವ ಮಾಲೀಕರು ಕೋವಿಡ್ ಸೋಂಕಿತರಿಗೆ ನೀವು ಚಿಕಿತ್ಸೆ ನೀಡುತ್ತೀರಿ. ನಮ್ಮ ಮನೆಯಲ್ಲಿ ವಯಸ್ಸಾದವರು ಇದ್ದಾರೆ. ನಿಮ್ಮಿಂದ ನಮಗೆ ಸೋಂಕು ತಗುಲುವ ಕಾರಣ ಮನೆ ಬಿಟ್ಟು ಹೋಗಿ ಎನ್ನುತ್ತಿದ್ದಾರೆ. ಇದರಿಂದ ನಮ್ಮ ಸಿಬ್ಬಂದಿ ಆತ್ಮ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ನನ್ನ ಮನಸ್ಸಿಗೂ ನೋವಾಗಿದೆ ಎಂದು ನೊಂದುಕೊಂಡರು.
      

       
 

Read These Next