ಲಸಿಕಾ ಮೇಳದಲ್ಲಿ ಗುರಿ ತಲುಪಿದ ಉತ್ತರಕನ್ನಡ ಆರೋಗ್ಯ ಇಲಾಖೆ. ಯಶಸ್ಸಿಗೆ ಕಾರಣರಾದವರಿಗೆ ಡಿಸಿ ಅಭಿನಂದನೆ.

Source: SO News | By Laxmi Tanaya | Published on 21st September 2021, 8:34 AM | Coastal News |

ಕಾರವಾರ :  ದೇಶಾದ್ಯಂತ  ನಡೆದ ಬೃಹತ್ ಕೋವಿಡ್ ಲಸಿಕಾ ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ನೀಡಲಾದ 85000 ಗುರಿಯನ್ನು  ತಲುಪಿಸುವಲ್ಲಿ ಜಿಲ್ಲಾಡಳಿಯ ಯಶಸ್ವಿಯಾಗಿದೆ.

ಲಸಿಕಾ ಕಾರ್ಯಕ್ರಮದಲ್ಲಿ ಶ್ರಮಿಸಿದ ಜಿಲ್ಲೆಯ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು (DHO,RCHO/Consultants RCHO Office ), ಕಾರವಾರ ವೈದ್ಯಕೀಯ ಕಾಲೇಜಿನ ಸಂಬಂಧಪಟ್ಟ ಸಿಬ್ಬಂದಿಗಳು, ಎಲ್ಲಾ ತಾಲ್ಲೂಕು ಆರೋಗ್ಯ ಅಧಿಕಾರಿಗಳು, ಎಲ್ಲಾ ಆರೋಗ್ಯ ಸಂಸ್ಥೆಯ ವೈದ್ಯಾಧಿಕಾರಿಗಳು, ಶುಶ್ರೂಶಕ ಅಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಹಿರಿಯ/ಕಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಹಿರಿಯ ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳು ಹಾಗೂ ಗ್ರಾಮೀಣ ಆರೋಗ್ಯ ಸಂರಕ್ಷಣಾಧಿಕಾರಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಹಾಗೂ ಇತರೇ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ‌ಮುಲ್ಲೈ ಮುಗಿಲನ್  ಅಭಿನಂದನೆ ಸಲ್ಲಿಸಿದ್ದಾರೆ.

 ಮುಂಡಗೋಡ, ಶಿರಸಿ ,ಕಾರವಾರ, ಜೋಯಿಡಾ, ಸಿದ್ದಾಪುರ ಯಲ್ಲಾಪುರ ತಾಲೂಕುಗಳಲ್ಲಿ ಅಂದು  ರಾತ್ರಿ 9.30 ರವರೆಗೆ ಲಸಿಕಾ ಕಾರ್ಯಕ್ರಮವನ್ನು ನಡೆಸಿರುತ್ತಾರೆ. 150 ಕ್ಕೂ ಮಿಕ್ಕಿ ಫಲಾನುಭವಿಗಳಿಗೆ  ಲಸಿಕೆಯನ್ನು ನೀಡಲಾಗಿತ್ತು.

               ಶಿರಸಿ ತಾಲೂಕಿನ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಪ್ರಾಥಮಿಕ ಆರೋಗ್ಯ ನಿರೀಕ್ಷಣಾ ಸಂರಕ್ಷಣಾಧಿಕಾರಿ ಕಲಾವತಿ ನಾಯಕ ಅವರು 750 ಜನರಿಗೆ , ಬಿಸಿಲುಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ, ಶುಶ್ರೂಶಕ ಅಧಿಕಾರಿ 550,  UPHC ಶಿರಸಿಯ PCHO ಗಳಾದ ಶಾಹಿನ್, ಸುಷ್ಮಾ, ಶಾರದಾ, ಸುನೀತಾ, ಪವಿತ್ರ ನಾಯಕ ಅವರು ಹಾಗೂ ಉಪ ಆರೋಗ್ಯ ಕೇಂದ್ರ ಕಾರವಾರದ  ಗಾಯತ್ರಿ ಕಾಕಿ ಇವರೆಲ್ಲರೂ 500ಕ್ಕೂ ಹೆಚ್ಚು ಜನರಿಗೆ ಲಸಿಕೆಯನ್ನು ನೀಡುತ್ತಾರೆ ಎಲ್ಲಾ ಆಶಾ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಹೆಚ್ಚಿನ ಫಲಾನುಭವಿಗಳನ್ನು ಕರೆತರುವಲ್ಲಿ ಶ್ರಮಿಸಿರುತ್ತಾರೆ.  ಈಗಾಗಲೇ ನಮ್ಮ ಜಿಲ್ಲೆಯಲ್ಲಿ 85 % ಅರ್ಹ ಫಲಾನುಭವಿಗಳಿಗೆ ಪ್ರಥಮ ಡೋಸ್ ಹಾಗೂ ಸುಮಾರು 38 % ಫಲಾನುಭವಿಗಳಿಗೆ ಎರಡನೇ ಡೋಸ್ ಕೂಡ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಕೂಡ ತಾವೆಲ್ಲರೂ ಇದೇ ರೀತಿಯಲ್ಲಿ ಕಾರ್ಯನಿರ್ವಹಿಸಿ, ಲಸಿಕಾಕರಣ ಕಾರ್ಯವನ್ನು ಯಶಸ್ವಿಯಾಗಿಸುತ್ತೀರಿ ಎಂದು ಡಿಸಿ ಶ್ಲಾಘಿಸಿದ್ದಾರೆ‌

         ಕುಮಟಾ ತಾಲೂಕಿನ ಸಂತೆಗುಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮುಖ್ಯರಸ್ತೆಯಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ, ಯಾವುದೇ ಪಕ್ಕಾ ರಸ್ತೆಯಿಲ್ಲದ,  ದಟ್ಟ ಅಡವಿಯಲ್ಲಿ ಹಾದು ಹೋಗಬೇಕಾದ ಮೂಲಭೂತ ಸಂಪರ್ಕಗಳಿಂದ ವಂಚಿತವಾಗಿರುವ ಸಂವಹನ ಕೊರತೆ ಹಾಗೂ ಅಂತರ್ಜಾಲ ಸಂಪರ್ಕವಿಲ್ಲದ ಗ್ರಾಮಕ್ಕೆ ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಯವರು ಗ್ರಾಮದ ಜನರ ದ್ವಿಚಕ್ರ ವಾಹನಗಳಲ್ಲಿ ತೆರಳಿ ಸಪ್ಟೆಂಬರ್ ರಂದು 129 ಜನರಿಗೆ ಲಸಿಕೆಯನ್ನು ನೀಡಿರುತ್ತಾರೆ.  ಇದಲ್ಲದೆ ಇನ್ನೂ ದುರ್ಗಮ ಪ್ರದೇಶಗಳಾದ ಜೊಯ್ಡಾ ತಾಲೂಕಿನ ಕ್ಯಾಸಲ್ರಾಕ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ  ಕಾಮರಾಜ್ ಗ್ರಾಮ, ಕಾರವಾರ ತಾಲೂಕಿನ ವಿರ್ಜೆ ಹಾಗೂ ಹರ್ಟುಗಾ, ಹೊನ್ನಾವರ ತಾಲೂಕಿನ ಹಿರೇಬೈಲ್ ಹಾಗೂ ಹೊಸಗೋಡ ಯಲ್ಲಾಪುರ್ ತಾಲೂಕಿನ ನೆರೆಪೀಡಿತ ಗ್ರಾಮ ಕಳಚೆ ಗೆ ತೆರಳಿ ನೂರಕ್ಕೂ ಅಧಿಕ ಜನರಿಗೆ ಲಸಿಕೆಯನ್ನು ನೀಡಿದ್ದಾರೆ. 

         ಬೃಹತ್ ಕೊವಿಡ್ ಲಸಿಕಾ ಮೇಳವನ್ನು ಯಶಸ್ವಿಗೊಳಿಸಿದ ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ, ಸಹಾಯಕ ಆಯುಕ್ತರುಗಳಿಗೆ, ತಹಸೀಲ್ದಾರರಿಗೆ, ತಾಲೂಕಾ ಪಂಚಾಯತನ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ, ತಾಲೂಕಾ ಆರೋಗ್ಯಾಧಿಕಾರಿಗಳಿಗೆ, ವಿವಿಧ ಆಸ್ಪತ್ರೆಯ ಆಡಳಿತ  ವೈದ್ಯಾಧಿಕಾರಿಗಳಿಗೆ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ, ನೊಡೆಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ವಿಶೇಷವಾಗಿ ಆರೋಗ್ಯ ಇಲಾಖೆಯ ಹಿರಿಯ ಮತ್ತು ಕಿರಿಯ ಸಹಾಯಕರು, ಸಿಎಚ್ಓ ಗಳು, ಆಶಾ ಕಾರ್ಯಕರ್ತರಿಗೆ  ಜಿಲ್ಲಾಧಿಕಾರಿಗಳು ಅಭಿನಂದಿಸಿದ್ದಾರೆ.

Read These Next

ಕಾರವಾರ : ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ

ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಜಿಲ್ಲೆಯಾದ್ಯಂತ ...

ಕಾರವಾರ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನವ ಸಂಪನ್ಮೂಲ ಪಡೆಯಲು ಅಲ್ಪಾವಧಿ ಟೆಂಡರ

ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2021-22 ನೇ ಸಾಲಿನ ಕ್ರಿಯಾ ಯೋಜನೆ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಆರು ತಿಂಗಳ ಅವಧಿಗೆ ...

ದಸರಾ ರಜೆಗೆ ಮುರುಡೇಶ್ವರವನ್ನು ತುಂಬಿಕೊಂಡ ಪ್ರವಾಸಿಗರು; ಕಡಲತಡಿಯಲ್ಲಿ ಜನವೋ ಜನ; ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಸಾಹಸ

ಸರಣಿ ರಜೆಯಿಂದಾಗಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಪ್ರವಾಸಿಗರಿಂದ ತುಂಬಿ ಹೋಗಿದೆ. ಕಡಲ ತಡಿಯಲ್ಲಿ ಕಣ್ಣು ...