*ಕಲ್ಲಡ್ಕದಲ್ಲಿ ಬಿಜೆಪಿ ಕರ‍್ಯರ‍್ತರಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಅರೋಪಿಗಳ ಮೇಲೆ ಇಲಾಖೆ ಯಾಕಾಗಿ ಕ್ರಮ ಕೈಗೊಳ್ಳತ್ತಿಲ್ಲ : ಎಸ್ ಡಿ ಪಿ ಐ*

Source: Press Release | By I.G. Bhatkali | Published on 15th May 2021, 2:45 PM | Coastal News | State News |

ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಇಂದು ಲಾಕ್ಡೌನ್ ಅವದಿ ಮುಗಿದ ನಂತರ ತೆರೆದಿದ್ದ ಅಂಗಡಿಗಳನ್ನು ಮುಚ್ಚಿಸುತ್ತಿದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯ ರ‍್ತವ್ಯ ನಿರತ ಸಹಾಯಕ ಉಪ ನಿರೀಕ್ಷಕರ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಮಹಾಬಲ ಆಳ್ವ ಹಾಗೂ ಆತನ ಚೇಲಾಗಳು ಹಲ್ಲೆ ನಡೆಸಿ ಆವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆಯನ್ನು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕರ‍್ಯರ‍್ಶಿ ಶಾಹುಲ್ ಹಮೀದ್ ಖಂಡಿಸಿದ್ದಾರೆ.

 ಕೋವಿಡ್ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಸಂದರ್ಭದಲ್ಲಿ  ಕೊರೋನಾ ವಾರಿರ‍್ಸಾಗಿ ರಾತ್ರಿ ಹಗಲು ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸುವ ಮೂಲಕ ಅವರ ಆತ್ಮ ಸ್ತರ‍್ಯವನ್ನು ಕುಗ್ಗಿಸುವ ಷಡ್ಯಂತ್ರ ವಾಗಿದೆ. ಸಾದಾರಣವಾಗಿ ಲಾಕ್ಡೌನ್ ಆರಂಭವಾದ ನಂತರ ದಿನನಿತ್ಯದ ಅಗತ್ಯಗಳಿಗಾಗಿ ಮನೆಯಿಂದ ಹೊರ ಬರುವ ಜನ ಸಾಮಾನ್ಯರ ಮೇಲೆ ಲಾಠಿ ಪ್ರಹಾರ ಮಾಡಿ, ದಂಡ ವಸೂಲಿ ಮಾಡಿ, ಕೇಸ್ ದಾಖಲಿಸುವ ಪೊಲೀಸ್ ಇಲಾಖೆ ಇಂದು ತಮ್ಮದೇ ಇಲಾಖೆಯ ಸಿಬ್ಬಂದಿಯ ಮೇಲೆ ಬಿಜೆಪಿ ಮುಖಂಡರು ಗೂಂಡಾಗಿರಿ ನಡೆಸುವಾಗ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಯಾಕಾಗಿ ಮೌನ ಪಾಲಿಸಿದೆ, ಜನಸಾಮಾನ್ಯರಿಗೆ ಒಂದು ಕಾನೂನು ಆಡಳಿತ ನಡೆಸುವ ಬಿಜೆಪಿ ಪಕ್ಷದ ನಾಯಕರು ಹಾಗೂ ಕರ‍್ಯರ‍್ತರಿಗೆ ಇನ್ನೊಂದು ರೀತಿಯ ಕಾನೂನು ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಹುಲ್ ಹಮೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

 ಏನಾದರೂ ಚಿಕ್ಕಪುಟ್ಟ ಘಟನೆಗಳು ಸಂಬವಿಸಿದಾಗ ಅಲ್ಪಸಂಖ್ಯಾತರ ಹಾಗೂ ವಿರೋಧ ಪಕ್ಷಗಳ ಕರ‍್ಯರ‍್ತರ, ನಾಯಕರ ಮನೆಗಳಿಗೆ ಬಾಗಿಲು ಒಡೆದು ರಾತ್ರೋರಾತ್ರಿ ನುಗ್ಗಿ ಮನೆಯಲ್ಲಿರುವ ವ್ರದ್ದರು ಮಹಿಳೆಯರನ್ನು, ಮಕ್ಕಳನ್ನು ನೋಡದೆ ಅವರ ವಿರುದ್ಧ ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಅನಾಗರಿಕವಾಗಿ ರ‍್ತಿಸಿ ಅಮಾಯಕರನ್ನ ಬಂದಿಸಿ ಕಠಿಣ ಸೆಕ್ಷನ್ ವಿಧಿಸುವ ಅದೇ ಪೊಲೀಸ್ ಅಧಿಕಾರಿಗಳ ಪೌರುಷ ಇದೀಗ ಏನಾಯಿತು. ರ‍್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂಧಿಯ ಮೇಲೆ ಅವ್ಯಾಚವಾಗಿ ನಿಂದಿಸುವ ವೀಡಿಯೊ ವೈರಲಾದರು ಕ್ರಮ ಕೈಗೊಳ್ಳಲು ಭಯವೇ ಎಂದು ಪ್ರಶ್ನಿಸಿದರು

ಇಲಾಖೆಯ ಉನ್ನತ ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಮಣಿಯದೇ ಅಪರಾದಿಗಳು ಎಷ್ಟೇ ಪ್ರಬಾವಿಗಳಾದರೂ ಈ ಕೂಡಲೇ ಅವರನ್ನು ಬಂದಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳವ ಮೂಲಕ ಸಿಬ್ಬಂದಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕೆಂದು SDPI ಜಿಲ್ಲಾ ಪ್ರಧಾನ ಕರ‍್ಯರ‍್ಶಿ  ಶಾಹುಲ್ ಹಮೀದ್ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದರು.

Read These Next

ಕಾರವಾರ: ಟ್ಯಾಬ್ ನೊಂದಿಗೆ ಭವಿಷ್ಯ ಕೂಡ ವಿದ್ಯಾರ್ಥಿ ಕೈಯಲ್ಲೇ ಇದೆ : ಶಾಸಕಿ ರೂಪಾಲಿ ನಾಯ್ಕ

“ಇಂದು ವಿತರಿಸಲಾಗುತ್ತಿರುವ ಟ್ಯಾಬ್‍ನೊಂದಿಗೆ ಭವಿಷ್ಯ ಕೂಡ ನಿಮ್ಮ ಕೈಯಲ್ಲೇ ಇದೆ, ವಿದ್ಯಾರ್ಥಿಗಳು ಸರಕಾರ ನೀಡಿರುವ ಟ್ಯಾಬ್ ಪಿಸಿ ...

ಕೋಲಾರ: ಡಿಸಿಸಿ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಸೇವೆಯ ಅನಾವರಣ, ಸಮಾಜದ ಕಟ್ಟಕಡೆ ವ್ಯಕ್ತಿಗೂ ಸೇವೆ; ಬ್ಯಾಲಹಳ್ಳಿ ಗೋವಿಂದಗೌಡ

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಬ್ಯಾಂಕಿಂಗ್ ಸೇವೆ ತಲುಪಿಸುವ ಸಂಕಲ್ಪದೊಂದಿಗೆ ಡಿಜಟಲೀಕರಣದ ಮೂಲಕ ಮೊಬೈಲ್ ಬ್ಯಾಂಕಿಂಗ್ ಸೇವೆಗೆ ...

ಬೆಂಗಳೂರು: ಕೋವಿಡ್ 3ನೇ ಅಲೆ ಆತಂಕ, ಮಧ್ಯಂತರ ವರದಿ ಸಲ್ಲಿಸಿದ ತಜ್ಞರ ಸಮಿತಿ, ಹಂತ ಹಂತವಾಗಿ ಶಾಲಾ-ಕಾಲೇಜು ತೆರೆಯಲು ಶಿಫಾರಸು

ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ...

ಶ್ರೀನಿವಾಸಪುರ: ಜನ ಪ್ರತಿನಿಧಿಗಳು ನಾಗರಿಕರ ಮನವೊಲಿಸಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಬೇಕು ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು.

ಜನ ಪ್ರತಿನಿಧಿಗಳು ನಾಗರಿಕರ ಮನವೊಲಿಸಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಬೇಕು ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಹೇಳಿದರು. ...

ಕೋಲಾರ: ಮಾವು ಬೆಳೆಗಾರರ ನೆರವಿಗೆ ಬರಲು ಸಿಎಂ, ಸಚಿವರಿಗೆ ಮನವಿ ಟನ್ ಮಾವಿಗೆ 10 ಸಾವಿರ ಬೆಂಬಲ ಬೆಲೆ ನೀಡಿ -ಡಾ ವೈ.ಎ. ನಾರಾಯಣಸ್ವಾಮಿ

ಬೆಲೆ ಕುಸಿತದಿಂದ ಸಂಕಷ್ಟಕ್ಕೊಳಗಾಗಿರುವ ಮಾವು ಬೆಳೆಗಾರರ ನೆರವಿಗೆ ಕೂಡಲೇ ರಾಜ್ಯ ಸರ್ಕಾರ ಧಾವಿಸಬೇಕು ಮತ್ತು ಪ್ರತಿ ಟನ್ ಮಾವಿಗೆ ...