ಛಾಯಾಚಿತ್ರಗಾರರಿಂದ ರೋಗಿಗಳಿಗೆ ಹಣ್ಣು ಹಾಲು ವಿತರಣೆ

Source: so news | Published on 20th August 2019, 12:04 PM | Coastal News | Don't Miss |

ಭಟ್ಕಳ:180ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಭಟ್ಕಳ ತಾಲೂಕು ಫೋಟೋಗ್ರಾಫರ್ ಅಸೋಸಿಯೇಶನ್ ಅವರಿಂದ ಸೋಮವಾರದಂದು ತಾಲೂಕು ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಹಾಗೂ ಹಾಲು ವಿತರಣೆ ಮಾಡುವುದರ ಮೂಲಕ ಛಾಯಾಗ್ರಹಣ ದಿನಾಚರಣೆ ಆಚರಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ| ಸವಿತಾ ಕಾಮತ್‌,ಸಂಘದ ಗೌರವಾಧ್ಯಕ್ಷ ಈಶ್ವರ ಎಚ್ ನಾಯ್ಕ, ಅಧ್ಯಕ್ಷ ದೇವೇಂದ್ರ ಎಚ್. ನಾಯ್ಕ, ಕಾರ್ಯದರ್ಶಿ ಚಂದ್ರು ಕೆ. ನಾಯ್ಕ, ಸಹ ಕಾರ್ಯದರ್ಶಿ ದೇವೇಂದ್ರ ನಾಯ್ಕ, 
ಖಚಾಂಚಿ ಯೋಗೇಶ ನಾಯ್ಕ, 
ಸದಸ್ಯರಾದ ರಾಜೇಶ ಹರಿಕಾಂತ, ಮಂಜು ನಾಯ್ಕ, ಮೋಹನ ನಾಯ್ಕ, ವಿಷ್ಣು ಭಂಡಾರಿ, ಎಸ್ ಸ್ಟ್ಯಾನಿ, ರಮೇಶ್ ಕುಮಾರ್ ನಾಯ್ಕ, ಶ್ರೀಕಾಂತ ದೇವಾಡಿಗ, ಅರುಣ ನಾಯ್ಕ, ದತ್ತಾತ್ರೇಯ ಹಾಗೂ ಶಂಕರ ಗೊಂಡ ಉಪಸ್ಥಿತರಿದ್ದರು.

Read These Next