ಜಿಂಕೆ ಮಾಂಸ ವಶ: ಐವರ ಆರೋಪಿಗಳ ಬಂಧನ

Source: so news | By MV Bhatkal | Published on 24th June 2019, 7:44 PM | Coastal News | Don't Miss |

ಯಲ್ಲಾಪುರ:ಜಿಂಕೆ ಬೇಟೆಯಾಡಿ ಮನೆಯಲ್ಲಿ ಮಾಂಸ ಕತ್ತರಿಸಿ ತುಂಡು ತುಂಡು ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಚಿಕೇರಿ ಅರಣ್ಯ ಇಲಾಖೆಯ ಸಿಬ್ಬಂದಗಳು ಐವರು ಆರೋಪಿಗಳನ್ನು ಬಂಧೀಸಿ ಜಿಂಕೆ ಮಾಂಸ ವಶಪಡಿಸಿಕೊಂಡ ಘಟನೆ ತಾಲೂಕಿನ ಮಂಚಿಕೇರಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬಂದಿತರನ್ನು ಮಂಚಿಕೇರಿ ಗ್ರಾಮದ ನಿವಾಸಿಗಳಾದ ಇಸ್ಮಾಯಿಲ್ ಫಕೀರ ಶೇ(40), ಅಬ್ದಲ್‍ಖಾದರ ಬುಡನಸಾಬ್ ಶೇಖ್(20), ಬೊಮ್ನಳ್ಳಿಯ ಮಹ್ಮದಗೌಸ  ಮಹ್ಮದಹುಸೇನ ಶೇಖ, ಯಲ್ಲಾಪುರದ ನಿವಾಸಿಗಳಾದ ಮಹ್ಮದಗೌಸ ಮಹ್ಮದಹನೀಪ್ ಶೇಖ, ಮೌಸಿಮ ಅಬ್ದುಲ್‍ರಜಾಕ ಶೇಖ(24) ಎಂದು ಹೇಳಲಾಗಿದೆ. ಊ ಐವರು ಸೇರಿ ಶನಿವಾರ ರಾತ್ರಿ ತಾಲೂಕಿನ ಬೇಡ್ತಿನದಿಗೆ ಮೀನು ಹಿಡಿಯು ಹೋಗಿ ಜಿಂಕೆಯನ್ನು ಬೇಟೆಯಾಡಿ ಭಾನುವಾರ ಬೆಳಗ್ಗೆ ಮಂಚಿಕೇರಿಯ ಇಸ್ಮಾಯಿಲ್ ಫಕೀರಸಾಬ ಶೇಖ ಆರೋಪಿತನ ಮನೆಯಲ್ಲಿ ಮಾಂಸವನ್ನು ಪಾಲುದಾರಿಕೆ ಮಾಡಿಕೊಳ್ಳುತ್ತಿರುವಾಗ ವಲಯ ಅರಣ್ಯಾಧಿಕಾರಿ ಮಹೇಶ ಗೌಡ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿನಡೆಸಿ ಆರೋಪಿಗಳ ಸಹಿತ ಜಿಂಕೆಮಾಂಸ ಬೇಟೆಗೆ ಬಳಸಿದ ಹಾಗೂ ಮಾಂಸವನ್ನು ಕತ್ತರಿಸಲು ಸುಲಿಯಲು ಉಪಯೋಗಿಸಿದ ಪರಿಕರಗಳನ್ನು ಹಾಗೂ ಬೈಕ್ ನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಪಅರಣ್ಯ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ಟ, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪ್ರಶಾಂತ ಪಿ.ಕೆ.ಎಂ ಮಾರ್ಗದರ್ಶನದಲ್ಲಿ ದಾಳಿನಡೆಸಲಾಗಿದೆ. ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಮಹೇಶಗೌಡ, ಉಪವಲಯ ಅರಣ್ಯಾಧಿಕಾರಿಗಳಾದ ಗೋವಿಂದ ಬಸಾಪುರ ಪವನ ಲೋಕದ, ಅರಣ್ಯ ರಕ್ಷಕರಾದ ಫಕ್ಕಿರಪ್ಪ ನಾಯ್ಕರ, ಸತ್ಯಪ್ಪ ಉಪ್ಪಾರ, ಗಣೇಶ ಎನ್.ಜಿ. ವಾಹನ ಚಾಲಕರಾದ ಗಂಗಾಧರ, ಮಂಜು ಭಾಗವಹಿಸಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...