ಕೇಂದ್ರದ ಮುಂದಿನ ಗೈಡ್ ಲೈನ್ಸ್ ಬಳಿಕ ಕಂಬಳ ಆಯೋಜನೆಗೆ ನಿರ್ಧಾರ

Source: SO News | By Laxmi Tanaya | Published on 14th November 2020, 10:12 PM | Coastal News |

ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆ ಕಂಬಳ ಆಯೋಜನೆಗೆ ಕೇಂದ್ರ ಸರಕಾರದ ಮುಂದಿನ ಗೈಡ್‌ಲೈನ್ಸ್‌ ಬಳಿಕ ನಿರ್ಧರಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಭರವಸೆ ನೀಡಿದ್ದಾರೆ.

ಧಾರ್ಮಿಕ ನಂಬಿಕೆ ಮತ್ತು ಕೃಷಿ ಸಂಸ್ಕೃತಿಯನ್ನೊಳಗೊಂಡ ತುಳುನಾಡಿನ ಜಾನಪದ ಕ್ರೀಡೆ ಕಂಬಳ ನಡೆಸಲು ಜಿಲ್ಲಾಡಳಿತ ಉತ್ಸುಕವಾಗಿದೆ ಮತ್ತು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೋಟ ತಿಳಿಸಿದರು.

ದೇಶಾದ್ಯಂತ ಈಗಾಗಲೇ ಬಹುತೇಕ ಅನ್‌ಲಾಕ್‌ ಆಗಿದ್ದು, ವ್ಯಾಪಾರ-ವಹಿವಾಟು ಯಥಾಸ್ಥಿತಿಗೆ ಮರಳುತ್ತಿವೆ. ಸದ್ಯದ ಪರಿಸ್ಥಿತಿ ಅವಲೋಕಿಸಿ ಕೇಂದ್ರದಿಂದ ಮತ್ತೊಂದು ಗೈಡ್‌ಲೈನ್ಸ್‌ ಬರಲಿದ್ದು, ಆ ಮಾರ್ಗಸೂಚಿ ಬಂದ ಬಳಿಕ ಕಂಬಳವನ್ನು ಯಾವ ರೀತಿ ಆಯೋಜನೆ ಮಾಡಬಹುದು ಎಂಬುದನ್ನು ನಿರ್ಧರಿಸಲಾಗುವುದು ಎಂದರು.

ಜಾನಪದ ಕ್ರೀಡೆ ಕಂಬಳದ ಹಿಂದೆ ದೈವಾರಾಧನೆ, ಕೃಷಿ ವೈಭವವಿದ್ದು, ಇದನ್ನು ಪ್ರವಾಸೋದ್ಯಮದ ನೆಲೆಯಲ್ಲೂ ಪರಿಗಣಿಸಲಾಗುತ್ತಿದೆ. ಕರಾವಳಿ ಆರ್ಥಿಕತೆಗೂ ಕಂಬಳ ಸಹಕಾರಿಯಾಗಿದೆ. ಕಂಬಳ ಆಯೋಜನೆ ವಿಚಾರದಲ್ಲಿ ಕಂಬಳ ಸಮಿತಿಗೆ ಸಂಪೂರ್ಣ ಸಹಕಾರ ನೀಡಲು ನಾವು ಬದ್ಧರಾಗಿದ್ದೇವೆ ಎಂದು ಸಂಸದ ನಳಿನ್‌ ಕುಮಾರ್‌ ತಿಳಿಸಿದರು.

ಸಮಿತಿ ಬೇಡಿಕೆಯೇನು?: ಅನಾದಿ ಕಾಲದಿಂದ ದೈವ-ದೇವರ ಚಾರಿತ್ರಿಕ ಹಿನ್ನೆಲೆ, ಸಾಂಸ್ಕೃತಿಕ ಪರಂಪರೆ, ಸಾಮರಸ್ಯದ ಸಂಕೇತವಾಗಿರುವ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿಕಂಬಳ ಸಮಿತಿ ಶ್ರಮಿಸುತ್ತಿದೆ. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿಆಚರಣೆಗೆ ಅಡ್ಡಿಯಾಗಿದ್ದು, ಸರಕಾರದ ಷರತ್ತು ಪಾಲಿಸಿಕೊಂಡು ಸೀಮಿತ ಕಂಬಳ ಆಚರಣೆಗೆ ಅವಕಾಶ ನೀಡಬೇಕೆಂದು ಕಂಬಳ ಸಮಿತಿ ಆಗ್ರಹಿಸಿದೆ.

Read These Next

ಭಟ್ಕಳ ರಾ. ಹೆದ್ದಾರಿ ಪಕ್ಕದಲ್ಲಿ ಸಂಚಾರಕ್ಕೆ ತೊಂದರೆ. ಅಮ್ಯೂಸಮೆಂಟ್ ಫಾರ್ಕ್ ಬೇಡ: ಪುರಸಭಾ ಸದಸ್ಯ ಮನವಿ.

ಭಟ್ಕಳ : ರಾಷ್ಟ್ರೀಯ ಹೆದ್ದಾರಿ 66 ಜೈನ್ ‌ಲಾಡ್ಜ್ ಹಿಂಬದಿಯಲ್ಲಿ ಆಟಿಕೆ ವಸ್ತುಗಳ ಪ್ರದರ್ಶನಕ್ಕೆ ತಯಾರಿ ನಡೆದಿದ್ದು ಕರೋನಾ ...

ದಕ್ಷಿಣಕನ್ನಡ: ಕಾಲೇಜು ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು. ಹೋಂ ಕ್ವಾರೆಂಟೈನಲ್ಲಿರುವಂತೆ ಸೂಚನೆ.

ಮಂಗಳೂರು : ಕಾಲೇಜುಗಳು ಆರಂಭವಾಗಿ ವಾರವಾಗಿದ್ದು, ದ.ಕ.ದಲ್ಲಿ 29 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್‌ ಪತ್ತೆಯಾಗಿದೆ. ಇದರಲ್ಲಿ ...