ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಣೆ

Source: sonews | By Staff Correspondent | Published on 28th February 2020, 6:31 PM | State News |

ಶ್ರೀನಿವಾಸಪುರ: ನಿಮ್ಮ ಶಕ್ತಿ ನನಗೆ ಸದಾ ಇರುತ್ತದೆ, 50 ಸಾವಿರದಿಂದ 1 ಲಕ್ಷ ರೂಗಳಿಗೆ  ಹೆಚ್ಚಿಗೆ ನೀಡಲು ಪ್ರಯತ್ನಿಸುತ್ತೇನೆ, ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಿಸಿ ನಡತೆಯನ್ನು ಕಲಿಸಲು ಮುಂದಾಗಿ ಎಂದು ಶಾಸಕ ರಮೇಶ್ ಕುಮಾರ್  ಹೆಣ್ಣು ಮಕ್ಕಳ ಸ್ವಾವಲಂಬಿಕ ಬದುಕಿಗಾಗಿ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ತಿಳಿಸಿದರು. 

ಯಲ್ದೂರಿನಲ್ಲಿ ಡಿ.ಸಿ.ಸಿ. ಬ್ಯಾಂಕ್ ಮೂಲಕ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘಕ್ಕೆ ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳಿಗೆ ಸಾಲ ವಿತರಣೆ ಮಾಡಿ ಮಾತನಾಡಿದ ರಮೇಶ್ ಕುಮಾರ್, 40 ವರ್ಷಗಳಿಂದ ನನ್ನನ್ನು ಬೆಂಬಲಿಸಿ ನನಗೆ ಶಕ್ತಿಯನ್ನು ತುಂಬಿದ್ದೀರ, ನಿಮ್ಮ ಶಕ್ತಿ ಇರುವ ತನಕ ನಾನು ನಿಮ್ಮ ಕಲ್ಯಾಣಕ್ಕೆ ದುಡಿಯುತ್ತೇನೆ.  50 ರಿಂದ 1 ಲಕ್ಷ ರೂಗಳು ಪ್ರತಿಯೊಬ್ಬ ಮಹಿಳಾ ಸದಸ್ಯರಿಗೂ ಸಿಗುವಂತೆ ಮುಂದಿನ ದಿನಗಳಲ್ಲಿ ಕಾರ್ಯ ರೂಪಕ್ಕೆ ಬರುತ್ತದೆ, ಇದನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ನಿಮ್ಮ ಮಕ್ಕಳಿಗೆ ಶಿಕ್ಷಣವನ್ನು ನೀಡಿ ಟಿ.ವಿ. ಮಾಧ್ಯಮಗಳನ್ನು ದೂರ ಮಾಡಿ ಒಳ್ಳೆಯ ನಡತೆಯನ್ನು ಕಲಿಸಿ ಎಂದು ತಿಳಿಸಿದರು. 

ಈ ಸಮಾಜದಲ್ಲಿ ಭೂ ದೇವಿ, ತಾಯಿ, ತಂಗಿ, ಮಹಿಳೆಯರಿಗೆ ಯಾರು ಗೌರವ ನೀಡುವುದಿಲ್ಲವೋ ಅವರು ಮನುಷ್ಯರಾಗಲು ಸಾಧ್ಯವಿಲ್ಲ, ಎಷ್ಟು ದೇಶಗಳು ಸುತ್ತಿದರೂ ಹಲವಾರು ಪುಸ್ತಕಗಳನ್ನು ಓದಿದರೂ ಅನಕ್ಷರಸ್ತರಾಗಿರುವ ನನ್ನ ಹೆತ್ತ ತಾಯಿ, ಹೇಳಿಕೊಟ್ಟಿರುವ ನೀತಿ ಪಾಠ ನನ್ನನ್ನು ಮನುಷ್ಯತ್ವವಾಗಿ ನಡೆದುಕೊಳ್ಳಲು ದಾರಿ ದೀಪವಾಗಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೀವಂತವಾಗಿದೆಯೆ ಎಂಬುದು ಪ್ರಶ್ನೆಯಾಗಿ ಉಳಿದಿದೆ, ಮಣಿಪುರಂ ಮತ್ತು ಮುತ್ತೂಟ್ ಫೈನಾನ್ಸ್‍ಗಳು ಬಡವರ ಒಡವೆಗಳನ್ನು ಆಧಾರವಾಗಿಟ್ಟುಕೊಂಡು 6 ತಿಂಗಳ ಬಳಿಕ ಪತ್ರಿಕೆಯಲ್ಲಿ ಪ್ರಕಟಿಸಿ ಮುಟ್ಟುಗೋಲು ಹಾಕುವ ಖಾಸಗಿ ಕಂಪನಿಗಳು ಹೆಚ್ಚಾಗುತ್ತಿವೆ ಎಂದರು. 

ಕೆಲವರಿಗೆ ಸಹಾಯ ಮಾಡುವ ಅವಕಾಶ ಇದ್ದರೂ ಮನಸ್ಸು ಇರುವುದಿಲ್ಲ, ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸಿದ್ದರೆ ಅವರಿಗೆ ಅವಕಾಶ ಸಿಗುವುದಿಲ್ಲ.  ಐ.ಎ.ಎಸ್. ಸ್ಪರ್ದಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ನಮ್ಮ ಭಾರತದ ಆಡಳಿತ ಸೇವಾ ಮಾಡಲು ಉಮಾ ಮಹದೇವನ್ ಪಂಚಾಯತ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಆದ ಇವರು ಈ ಸಭೆಗೆ ಆಗಮಿಸಿ ಮಹಿಳೆಯರನ್ನು ಕಂಡು ಹರ್ಷ ವ್ಯಕ್ತಪಡಿಸಿ ಸರ್ಕಾರದಿಂದ ಆಗುವಂತ ಕೆಲಸಗಳಿಗೆ ನಾವಿದ್ದೇವೆ ಎಂದು ಸಭೆಯಲ್ಲಿ ತಿಳಿಸಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು. 

ಪಂಚಾಯತ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಉಮಾ ಮಹದೇವನ್ ಮಾತನಾಡಿ, ಮಹಿಳೆಯರು ಆರ್ಥಿಕ ಸ್ವಾವಲಂಬಿಗಳಾಗಬೇಕು, ತಮ್ಮ ಬದುಕಿಗಾಗಿ ಹೋರಾಟ ಬಹಳ ಮುಖ್ಯವಾಗಿದೆ, ಪುರುಷ ಸಮಾಜದಲ್ಲಿ ಮಹಿಳೆಯರು ಸರಿ ಸಾಟಿಯಾಗಿ ನಿಂತು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಬಹಳಷ್ಟಿದೆ, ನಿಮ್ಮ ಕನಸು ನನಸಾಗಲು ನೀವೆಲ್ಲರೂ ಆಧಿನಿಕ ತಂತ್ರಜ್ನಾನವನ್ನು ಹಳವಡಿಸಿಕೊಂಡು ಗುಡಿ ಕೈಗಾರಿಕೆಗಳು ಇತರೆ ಕೆಲಸಗಳನ್ನು ಮಾಡಲು ಮುಂದಾಗಬೇಕು. ಡಿಸಿಸಿ. ಬ್ಯಾಂಕ್ ಮೂಲಕ ಸಾಲವನ್ನು ಪಡೆದು ಸಮಯಕ್ಕೆ ಮರು ಪಾವತಿ ಮಾಡಿ ನೀವು ಆರ್ಥಿಕ ಸ್ವಾವಲಂಬಿಗಳಾಗಿ ಬ್ಯಾಂಕ್ ಅನ್ನು ಕಾಪಾಡಿಕೊಂಡು ಹೋಗುತ್ತಿರುವ ನಿಮ್ಮ ಸೇವೆ ಮತ್ತು ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸ ಬ್ಯಾಂಕಿನ ನೆರವು ಶ್ಲಾಘನೀಯವಾಗಿದೆ ಎಂದರು. 

ಡಿ.ಸಿ.ಸಿ. ಬ್ಯಾಂಕ್ ಜಿಲ್ಲಾಧ್ಯಕ್ಷ ಗೋವಿಂದಗೌಡ ಮಾತನಾಡಿ, ಈ ತಾಲ್ಲೂಕಿನಲ್ಲಿ 70 ಸಾವಿರ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ  ಸಾಲವನ್ನು ನೀಡಿದ್ದೇವೆ.  ಹಾಗೆಯೆ ಮರು ಪಾವತಿಯನ್ನು ಮಾಡುತ್ತಿದ್ದೀರ.  ಈ ಬ್ಯಾಂಕಿನ ಆಸ್ತಿ ತಾಯಂದಿರಾದ ನೀವೆ ಆಗಿದ್ದೀರ.  ಈ ಎರಡೂ ಜಿಲ್ಲೆಗಳಲ್ಲಿ ಮಹಿಳಾ ಮಾತೆಯರು ಸಾಲವನ್ನು ಸಮರ್ಪಕವಾಗಿ ಕಟ್ಟುತ್ತಿದ್ದೀರ.  ನಿಮ್ಮ ಹೊಲಕ್ಕೆ ನೀವೆ ಗೊಬ್ಬರ ಹಾಕಿ ಬೇರೆ ವಾಣಿಜ್ಯ ಬ್ಯಾಂಕಿನಲ್ಲಿರುವ ಖಾತೆಗಳನ್ನು ಸ್ಥಗಿತ ಮಾಡಿ ಡಿ.ಸಿ.ಸಿ. ಬ್ಯಾಂಕಿನಲ್ಲಿ ಎಲ್ಲಾ ವಹಿವಾಟುಗಳನ್ನು ಮಾಡಲು ಮುಂದಾಗಬೇಕು.  ಹಾಗೆಯೆ ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ವಿವಿಧ ಖಾತೆಗಳನ್ನು ಡಿ.ಸಿ.ಸಿ. ಬ್ಯಾಂಕಿನಲ್ಲಿ ತೆರೆದು ಹಣದ ವಹಿವಾಟನ್ನು ಮಾಡಲು ಸಿ.ಇ.ಒ. ಮತ್ತು ಇ.ಒ. ರವರಿಗೆ ಮನವಿ ಮಾಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ  ಪಂಚಾಯಿತಿ ಸಿ.ಇ.ಒ. ದರ್ಶನ್, ಡಿ.ಸಿ.ಸಿ. ಬ್ಯಾಂಕಿನ ಸಿ.ಇ.ಒ. ರವಿ, ಜಿಲ್ಲಾ ಪಂಚಾಯಿತಿ ಸದಸ್ಯ ಗೋವಿಂದಸ್ವಾಮಿ, ಕೆ.ಎಂ.ಎಫ್, ನಿರ್ದೇಶಕ ಹನುಮೇಶ್, ಯಲ್ದೂರು ಗ್ರಾ.ಪಂ ಅಧ್ಯಕ್ಷಿಣಿ ಸೀತಮ್ಮ, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಅಶೋಕ್, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಶ್ಯಾಗತ್ತೂರು ಸುಧಾಕರ್, ಅಶೋಕ್, ಕೆ.ಕೆ. ಮಂಜುನಾಥ್, ಯಲ್ದೂರು ಸೊಸೈಟಿಯ ಅಧ್ಯಕ್ಷರಾದ ಹೆಚ್.ಎಂ. ನಾರಾಯಣಸ್ವಾಮಿ, ಇ.ಒ. ಆನಂದ್, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಸಿ.ಎಲ್. ಚಿನ್ನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀರಾಮಪ್ಪ, ಸೊಸೈಟಿಯ ಕಾರ್ಯದರ್ಶಿ ಪ್ರಭಾಕರ ರೆಡ್ಡಿ, ಯಲ್ದೂರು ಗೌರಮ್ಮ, ಉನಿಕಿಲಿ ಮಂಜಪ್ಪ,  ಮತ್ತಿತರರು ಹಾಜರಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...