ನಿತ್ಯೋತ್ಸವದ ಕವಿ ಪ್ರೋ.ಕೆ.ಎಸ್.ನಿಸಾರ್ ಆಹ್ಮದ್ ನಿಧನ

Source: sonews | By Staff Correspondent | Published on 3rd May 2020, 5:26 PM | Coastal News | State News | Don't Miss |

ಭಟ್ಕಳ: ಜೋಗದ ಸಿರಿ ಬೆಳಕಿನಲಿ ಎಂದು ಹಾಡಿ ನಿತ್ಯೋತ್ಸವದ ಕವಿ ಎಂದೆನೆಸಿಕೊಂಡಿದ್ದ ನಾಡಿನ ಹಿರಿಯ ಸಾಹಿತಿ ಪ್ರೊಪೆಸರ್ ಕೆಎಸ್ ನಿಸಾರ್ ಅಹಮ್ಮದ್(೮೪)  ಭಾನುವಾರ ಬೆಂಗಳೂರಿನಲ್ಲಿ ನಿಧರಾಗಿದ್ದು ಇದರಿಂದಾಗಿ ಹಿರಿಯ ತಲೆಮಾರಿನ ಸಾಹಿಯೊಬ್ಬರು ಈ ಲೋಕಕ್ಕೆ ವಿದಾಯ ಹೇಳಿದಂತಾಗಿದೆ.  

ಇತ್ತೀಚೆಗೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು.

ಸುಮಾರು 25 ಕೃತಿಗಳನ್ನು ರಚಿಸಿದ ಅವರು ಅನೇಕ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದವರು. ಗಾಂಧಿಬಜಾರ್ ಹಾಗೂ ನಿತ್ಯೋತ್ಸವದ ಮೂಲಕ ಜನರ ಮನದ ಬಾಗಿಲು ತೆರೆದವರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಗಳಂತಹ ಅನೇಕ ಪ್ರಶಸ್ತಿ ಪಡೆದವರು.

ಮನಸು ಗಾಂಧಿ ಬಜಾರು, ನೆನೆದವರ ಮನದಲ್ಲಿ, ಸುಮಹೂರ್ತ, ಸಂಜೆ ಐದರ ಮಳೆ, ನಾನೆಂಬ ಪರಕೀಯ, ಆಯ್ದ ಕವಿತೆಗಳು, ಸ್ವಯಂ ಸೇವೆಯ ಗಿಳಿಗಳು, ಅನಾಮಿಕ ಆಂಗ್ಲರು, ಬರಿರಂತರ, ಸಮಗ್ರ ಕವಿತೆಗಳು, ನವೋಲ್ಲಾಸ, ಆಕಾಶಕ್ಕೆ ಸರಹದ್ದುಗಳಿಲ್ಲ, ಅರವತ್ತೈದರ ಐಸಿರಿ, ಸಮಗ್ರ ಭಾವಗೀತೆಗಳು, ಪ್ರಾತಿನಿಧಿಕ ಕವನಗಳು, ನಿತ್ಯೋತ್ಸವ ಪ್ರಮುಖ ಕವನಸಂಕಲನಗಳು.

ಪ್ರಶಸ್ತಿ ಪುರಸ್ಕಾರಗಳು!
* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
* ಗೊರೂರು ಪ್ರಶಸ್ತಿ
* ಅನಕೃ ಪ್ರಶಸ್ತಿ
* ಕೆಂಪೇಗೌಡ ಪ್ರಶಸ್ತಿ
* ಪಂಪ ಪ್ರಶಸ್ತಿ
* 1981ರ ರಾಜ್ಯೋತ್ಸವ ಪ್ರಶಸ್ತಿ
* 2003ರ ನಾಡೋಜ ಪ್ರಶಸ್ತಿ
* 2006ರ ಅರಸು ಪ್ರಶಸ್ತಿ
* 2006ರ ಮಾಸ್ತಿ ಪ್ರಶಸ್ತಿ

ಭಟ್ಕಳದೊಂದಿಗಿನ ನಂಟು: ಹಿರಿಯ ಸಾಹಿತಿ ನಿಸಾರ್ ಆಹಮದ್ ಭಟ್ಕಳವನ್ನು ಅತ್ಯಂತ ಮೆಚ್ಚಿಕೊಂಡಿದ್ದು ಇಲ್ಲಿನ ಜನರನ್ನು ಅಗಾಧವಾಗಿ ಅವರು ಪ್ರೀತಿಸುತ್ತಿದ್ದರು. ಭಟ್ಕಳದ ಸಾಹಿತಿ ಲೇಖಕ ಸಂಶೋಧಕ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್ ರೊಂದಿಗೆ ಅವರು ನಿಕಟವಾದ ಸಂಪರ್ಕವನ್ನಿಟ್ಟುಕೊಂಡಿದ್ದರು. ೨೦೧೫ ರಲ್ಲಿ ಭಟ್ಕಳಕ್ಕೆ ಬಂದಿದ್ದ ಅವರು ಇಲ್ಲಿನ ಸಾಹಿಲ್ ಆನ್ ಲೈನ್ ಸುದ್ದಿತಾಣದ ಕಚೇರಿಗೂ ಭೇಟಿ ನೀಡಿ ಪ್ರಸಕ್ತ ಸನ್ನಿವೇಶದಲ್ಲಿ ಮುಸ್ಲಿಮ್ ಲೇಖಕರ ಹಾಗೂ ಪತ್ರಕರ್ತರ ಕರ್ತವ್ಯ ಕುರಿತಂತೆ ಹಾಗೂ ಮುಸ್ಲಿಮ್ ಸಮುದಾಯದೊಳಗಿನ ತುಳಿತಗಳನ್ನು ಕುರಿತು ಮನಬಿಚ್ಚಿ ಮಾತನಾಡಿದ್ದರು.

೨೦೧೭ ರಲ್ಲಿ ಭಟ್ಕಳ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ೨೫ನೇ ವಾರ್ಷೀಕೋತ್ಸ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅತ್ಯಮತ ಉತ್ಸಾಹದಿಂದ ಭಾಗವಹಿಸಿದ್ದಲ್ಲದೆ ಸಮಾರೂಪ ಸಮಾರಂಭದಲ್ಲಿಯೂ ಭಾಗವಹಿಸುವುದಾಗಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದು ಅದರಂತೆ ಅವರು ೨೦೧೮ರಲ್ಲಿ ನಡೆದ ಸಮಾರೋಪ ಸಮಾರಂಭಕ್ಕೂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಕುರಿತಂತೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಕೃಷ್ಣ ಭಟ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು ನಮ್ಮ ನಾಡಿನ ಹಿರಿಯ ಕವಿ ನಿಸ್ಸಾರ್ ಅಹಮ್ಮದ್ ಅವರ ನಿದನದ ಸುದ್ದಿಯಿಂದ ತುಂಬಾ ಆಘಾತವಾಗಿದೆ. ೨೦೧೭ರಲ್ಲಿ ನಮ್ಮ ತಾಲೂಕಾ ಸಂಘದ ಬೆಳ್ಳಿಹಬ್ಬ ಕಾರ್ಯಕ್ರಮ ಆಚರಣೆಯ ಉದ್ಘಾಟನಟಗೆ ಬಂದಿದ್ದ ಅವರು ನಂತರ ೨೦೧೮ರಲ್ಲಿಯ ಮುಕ್ತಾಯ ಸಮಾರಂಭಕ್ಕೆ ತಾವೇ ಬರುತ್ತೇನೆ ಎಂದು ಹೇಳಿ ಅತ್ಯಂತ ಖುಷಿಯಿಂದ ಬಂದಿದ್ದರು. ನಮ್ಮ ಆದರಾತಿಥ್ಯವನ್ನು ಸದಾ ನೆನಪಿಸುತ್ತಿದ್ದ ದೊಡ್ಡ ಗುಣ ಅವರದ್ದು. ನಮ್ಮ ಮನೆಗೂ ಬಂದಿದ್ದ ಅವರು ನಂತರ ಕರೆಮಾಡಿದಾಗಲೆಲ್ಲ ಮೊದಲು ನನ್ನ ಮಗಳ ಹೆಸರು ಹೇಳಿ ಹೇಗಿದ್ದಾಳೆ ಎನ್ನುವ ಅವರ ಸರಳತನ ಪ್ರೀತಿಗೆ ಸದಾ ಋಣಿಯಾಗಿದ್ದೇನೆ. ಅವರಿಗೆ ಭಗವಂತನು ಸ್ವರ್ಗದಲ್ಲಿ ಸ್ಥಾನವನ್ನು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

ಫೇಸ್ಬುಕ್ ನಿಂದ.....

ಭಾರತದಲ್ಲಿ ಮುಸ್ಲಿಂ ಸಮುದಾಯ ಎದುರಿಸುತ್ತಿರುವ ಪರಕೀಯ ಪ್ರಜ್ಞೆ , ಅನಾಥ ಭಾವವನ್ನ ಸಮರ್ಥವಾಗಿ ದನಿಸಿದ ಪ್ರೊ. ಕೆಎಸ್ . ನಿಸಾರ್ ಅಹಮದ್ ಅವರ ಒಂದು ಕವಿತೆ

ಕುಟುಂಬಕ್ಕೆ ಅಗಲಿಕೆಯ ದುಃಖ ತಾಳಿಕೊಳ್ಳುವ ಚೈತನ್ಯ ಸಿಗಲಿ ; ಹೋಗಿ ಬನ್ನಿ ಸರ್

#ನಿಮ್ಮೊಡನಿದ್ದೂ #ನಿಮ್ಮಂತಾಗದೆ

 

ನಿಮ್ಮೊಡನಿದ್ದೊ ನಿಮ್ಮಂತಾಗದೆ

ಜಗ್ಗಿದ ಕಡೆ ಬಾಗದೆ

ನಾನು ನಾನೇ ಆಗಿ. ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ

ಪರಕೀಯನಾಗಿ

ತಲೆಯೆತ್ತುವುದಿದೆ ನೋಡಿ

ಅದು ಬಲುಕಷ್ಟದ ಕೆಲಸ.

 

ವೃತ್ತದಲ್ಲಿ ಉನ್ಮತ್ತರಾದ

ನಿಮ್ಮ ಕುಡಿತ ಕುಣಿತ ಕೂಟಗಳು

ಕೆಣಕಿ ಎಸೆದಿದ್ದರೂ

ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ

ಸಂಯಮವನ್ನೇ ಪೋಷಿಸಿ ಸಾಕುತ್ತ

ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ

 

ಅದು ಬಲು ಕಷ್ಟದ ಕೆಲಸ.

 

ಒಳಗೊಳಗೆ ಬೇರುಕೊಯ್ದು

ಲೋಕದೆದುರಲ್ಲಿ ನೀರು ಹೊಯ್ದು

ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ

ಗೊತ್ತಿಲ್ಲದಂತೆ ನಟಿಸಿ

ಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿ

ಬಾಳ ತಳ್ಳುವುದಿದೆ ನೋಡಿ

 

ಅದು ಬಲು ಕಷ್ಟದ ಕೆಲಸ.

 

ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು

ಸಂಶಯದ ಪಂಜವೆತ್ತಿ

ನನ್ನ ನಂಬಿಕೆ ನೀಯತ್ತು ಹಕ್ಕು

ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ

ನೋವಿಗೆ ಕಣ್ಣು ತುಂಬಿದ್ದರೂ,

 

ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ

ನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನು

ಹುಸಿನಗುತ್ತ ಎದುರಿಸುವುದಿದೆಯಲ್ಲ

ಅದು ಬಲು ಕಷ್ಟದ ಕೆಲಸ.

 

            ಪ್ರೊ. ಕೆ. ಎಸ್. ನಿಸಾರ್ ಅಹಮದ್

.............From fb post

Read These Next

ಕಾರ್ಮಿಕ ಸಂಘಟನೆಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

ಭಟ್ಕಳ: ತಾಲೂಕಿನ ಕಾರ್ಮಿಕ ಸಂಘಟನೆಗಳ ಮುಖಂಡರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಶಾಸಕ ಸುನಿಲ್ ...

ಉಪ್ಪೋಣಿಯ ಶಾರದಾಂಬ ಪಿಯು ಕಾಲೇಜ್; ವಾಣಿಜ್ಯ ವಿಭಾಗದಲ್ಲಿ ಹೊನ್ನಾವರ ತಾಲೂಕಿಗೆ ಪ್ರಥಮ, ಉಮ್ಮೆ ರಿಹಾ ಟಾಪರ್

ಭಟ್ಕಳ: ಹೊನ್ನಾವರ ತಾಲೂಕಿನ  ಉಪ್ಪೋಣಿಯ ಶ್ರೀ ಶಾರದಾಂಬ ಪದವಿ ಪೂರ್ವ ಕಾಲೇಜ್ ವಾಣಿಜ್ಯ ವಿಭಾಗವು ಶೇ.100 ಫಲಿತಾಂಶ ದಾಖಲಿಸುವುದರ ಮೂಲಕ ...

ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು

ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು

ಕಾರ್ಮಿಕ ಸಂಘಟನೆಗಳಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

ಭಟ್ಕಳ: ತಾಲೂಕಿನ ಕಾರ್ಮಿಕ ಸಂಘಟನೆಗಳ ಮುಖಂಡರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗುರುವಾರ ಶಾಸಕ ಸುನಿಲ್ ...

ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು

ಗೃಹಿಣಿಯ ಕತ್ತಿನಿಂದ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದ ಸರಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾದ ಹೊನ್ನಾವರ,ಭಟ್ಕಳ ಪೊಲೀಸರು