ಭಟ್ಕಳದಲ್ಲಿ ಬೈಕ್ ಸವಾರನ ಸಾವು ಪ್ರಕರಣ. ನಿರ್ಲಕ್ಷ್ಯ ಮಾಡಿದ ಶಾಲಾ ಟೆಂಪೋ ಚಾಲಕನಿಗೆ ನ್ಯಾಯಾಲಯದಿಂದ ಶಿಕ್ಷೆ.

Source: SO News | By Laxmi Tanaya | Published on 8th September 2021, 8:14 AM | Coastal News | Don't Miss |

ಭಟ್ಕಳ: ಖಾಸಗೀ ಶಾಲಾ ವಾಹನವೊಂದರ ಚಾಲಕನ  ನಿರ್ಲಕ್ಷತನದಿಂದ ಚಾಲನೆ ಮಾಡಿ  ಓರ್ವರ ಸಾವಿಗೆ ಕಾರಣನಾಗಿದ್ದಲ್ಲದೇ ದ್ವಿಚಕ್ರ ವಾಹನ, ರಿಕ್ಷಾ ಮತ್ತು ಕಾರುಗಳಿಗೆ ಹಾನಿಯುಂಟು ಮಾಡಿದ್ದ ಪ್ರಕರಣವನ್ನು ತನಿಖೆ ನಡೆಸಿದ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಫವಾಜ್ ಪಿ.ಎ. ಅವರು ಆರೋಪಿತನಿಗೆ 8 ತಿಂಗಳು ಸಜೆ ಹಾಗೂ 3500 ರೂಪಾಯಿಗಳ ದಂಢ ವಿಧಿಸಿ ತೀರ್ಪು ನೀಡಿದ್ದಾರೆ. 

2015ರ ಜೂನ್ 18ರಂದು ಮಧ್ಯಾಹ್ನದ ಸಮಯ್ಲ್ಲಿ ಬಂದರ್ ರಸ್ತೆಯಿಂದ ಶಂಶುದ್ದೀನ್ ಸರ್ಕಲ್ ಕಡೆಗೆ ಬರುತ್ತಿದ್ದ ಶಾಲಾ ಟೆಂಪೋ ಚಾಲಕ ಸೈಫುಲ್ಲಾ ಮೊಹಿನುದ್ದೀನ್ ಕೊಜಾಪು ಶಾಬಂದ್ರಿ ಈತನು  ಬೈಕ್ ನಿಲ್ಲಿಸಿಕೊಂಡು ಕಾಯುತ್ತಿದ್ದ ವ್ಯಕ್ತಿಯೋರ್ವರಿಗೆ ಡಿಕ್ಕಿ ಹೊಡೆದಿದ್ದ. ಪರಿಣಾಮವಾಗಿ ಅವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದರು. ಘಟನೆಯಲ್ಲಿ  ಒಂದು ಬೈಕು, ಒಂದು ಆಟೋ ರಿಕ್ಷಾ, ಎರಡು ಮಾರುತಿ ವ್ಯಾನ್, ಒಂದು ಕಾರಿಗೆ ಜಖಂ ಗೊಳಿಸಿದ್ದಲ್ಲದೇ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದಲ್ಲದೇ ದೇವಸ್ಥಾನವೊಂದರ ಕಂಪೌಂಡ್ ಕೂಡಾ ಹಾನಿಯಾಗಿತ್ತು. 

ನಗರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ತನಿಖೆಯನ್ನು ನಡೆಸಿದ ನ್ಯಾಯಾಲಯ ಆರೋಪಿತನಿಗೆ ವಿವಿಧ ಸೆಕ್ಷನ್‍ಗಳಡಿಯಲ್ಲಿ ಒಟ್ಟೂ 8 ತಿಂಗಳು ಸಜೆ ಹಾಗೂ ರೂ.3,500-00 ದಂಡ ವಿಧಿಸಿ ತೀರ್ಪು ನೀಡಿದೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ವಿವೇಕ ಆರ್. ನಾಯ್ಕ ಅವರು ವಾದಿಸಿದ್ದರು.

Read These Next

ಕಾರವಾರ : ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ

ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಚುನಾವಣೆ 2022 ಕ್ಕೆ ಸಂಬಂಧಿಸಿದಂತೆ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯ ಜಿಲ್ಲೆಯಾದ್ಯಂತ ...

ಕಾರವಾರ: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾನವ ಸಂಪನ್ಮೂಲ ಪಡೆಯಲು ಅಲ್ಪಾವಧಿ ಟೆಂಡರ

ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯು 2021-22 ನೇ ಸಾಲಿನ ಕ್ರಿಯಾ ಯೋಜನೆ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಆರು ತಿಂಗಳ ಅವಧಿಗೆ ...

ದಸರಾ ರಜೆಗೆ ಮುರುಡೇಶ್ವರವನ್ನು ತುಂಬಿಕೊಂಡ ಪ್ರವಾಸಿಗರು; ಕಡಲತಡಿಯಲ್ಲಿ ಜನವೋ ಜನ; ವಾಹನ ದಟ್ಟಣೆ ನಿಭಾಯಿಸಲು ಪೊಲೀಸ್ ಸಾಹಸ

ಸರಣಿ ರಜೆಯಿಂದಾಗಿ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರ ಪ್ರವಾಸಿಗರಿಂದ ತುಂಬಿ ಹೋಗಿದೆ. ಕಡಲ ತಡಿಯಲ್ಲಿ ಕಣ್ಣು ...

ಭಟ್ಕಳ: ಶ್ರೀವಲಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪವಿತ್ರಾ ನಾಯ್ಕ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ

ಶ್ರೀವಲಿ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪವಿತ್ರಾ ಜಯಕರ ನಾಯ್ಕ ದಿಶಾ ಭಾರತ ಸಂಸ್ಥೆ ಹಾಗೂ ಈಸ್ಟ್ ವೆಸ್ಟ್ ...