ಭಟ್ಕಳ: ಹುಯಿಲ್ಮಡಿ ಕಡಲತೀರದಲ್ಲಿ ಬೆಂಗಳೂರು ಮೂಲದ ತಾಯಿ,ಮಗನ ಶವ ಪತ್ತೆ

Source: SO NEWS | By MV Bhatkal | Published on 19th September 2021, 12:22 AM | Coastal News | Don't Miss |

ಭಟ್ಕಳ: ತಾಲೂಕಿನ ಸರ್ಪನಕಟ್ಟೆ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಹುಯಿಲ್ಮಡಿ ಕಡಲ ತೀರದ ಬಂಡೆಗಳ ಕೆಳಗೆ ಮಹಿಳೆ ಮತ್ತು ಪುರುಷನ ಶವವನ್ನು ಪತ್ತೆಯಾದ ಘಟನೆ ಶನಿವಾರ ನಡೆದಿದೆ.

ಪ್ರಸಿದ್ಧ ಪ್ರವಾಸಿ ತಾಣವಾದ ಹುಯಿಲ್ಮಡಿ ಬೀಚ್ ಹತ್ತಿರ ಎರಡು ಮೃತ ದೇಹ ಪತ್ತೆಯಾಗಿದ್ದು ಸ್ಥಳೀಯ ನಿವಾಸಿಗಳ ನಿದ್ದೆಗೆಡಿಸಿದೆ. 

ಮೃತಪಟ್ಟವರು ಬೆಂಗಳೂರು ಉತ್ತರದ ಮುತ್ಯಾಲ ನಗರ ಜೆಪಿ ಪಾರ್ಕ್ ಹತ್ತಿರದ ನಿವಾಸಿಗಳಾದ ಆದಿತ್ಯ ಬಿ,ಎನ್ ಹಾಗೂ ಲಕ್ಷ್ಮೀ ಬಿ ಇಬ್ಬರು ತಾಯಿ ಮಗ ಎಂದು ಗುರುತಿಸಲಾಗಿದೆ. ಮೃತಪಟ್ಟ ಸ್ಥಳದ ಸಮೀಪ ಆಧಾರ ಕಾರ್ಡ್, ಪಾನ್ ಕಾರ್ಡ್, ಡ್ರೆöವಿಂಗ್ ಲೈಸ್ಸ್ನ್ಸ್ ಸಂಪೂರ್ಣ ಹರಿದು ಹಾಕಿದ ಸ್ಥಿತಿಯಲ್ಲಿದ್ದ ಪತ್ತೆಯಾಗಿದೆ. 

ಮಹಿಳೆ ಶವವನ್ನು ಬಂಡೆ ಮೇಲೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪುರುಷನ ಶವ ಬಂಡೆಯ ಮದ್ಯ ಬಾಗದಲ್ಲಿ ನೇಣು ಬಿಗಿದು ಸ್ಥಿತಿ ಪತ್ತೆಯಾಗಿದೆ.ಸ್ಥಳಕ್ಕೆ ತೆರಳಿದ ಪೋಲಿಸರು ಆಧಾರ ಕಾರ್ಡ್ ಆದರಿಸಿ ಮೃತಪಟ್ಟ ಅವರ  ಸಂಬಂಧಿಕರನ್ನು ಸಂಪರ್ಕಿಸಿದಾಗ ಇಬ್ಬರು ತಾಯಿ ಮಗ ಎಂದು ತಿಳಿದು ಬಂದಿದ್ದು ಮಹಿಳೆಯನ್ನು ಕೊಲೆಯ ಮಾಡಿ ಪುರುಷ ಆತ್ಮಹತ್ಯೆ  ಮಾಡಿರ ಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇವರು ಬೆಂಗಳೂರಿನಿಂದ ಸೆ.14 ರಂದು ಮುರ್ಡೇಶ್ವರಕ್ಕೆ ಆಗಮಿಸಿದ್ದರು, ಸುಮುಖ ಲಾಡ್ಜಿನಲ್ಲಿ ತಂಗಿದ್ದರು. ಸೆ.15 ರಂದು ಲಾಡ್ಜಿನಿಂದ ತೆರವು ಮಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ಸುದ್ದಿ ತಿಳಿದು  ಸಾರ್ವಜನಿಕರು ಬೆಚ್ಚಿ ಬಿದಿದ್ದಾರೆ. ಸ್ಥಳಕ್ಕೆ ಡಿ.ವೈ.ಎಸ್.ಪಿ ಬೆಳ್ಳಿಯಪ್ಪ, ಸಿ.ಪಿ.ಐ ದಿವಾಕರ, ಗ್ರಾಮೀಣ ಠಾಣೆ ತನಿಕಾಧಿಕಾರಿ ರೇವತಿ  ಹಾಗೂ ಸಿಬ್ಬಂದಿಗಳು ಉಪಸ್ಥಿತಿ ಇದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...