ಕಾರವಾರ: ‘ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ’: ಆರ್.ಅಶೋಕ್

Source: S O News Service | By Office Staff | Published on 22nd January 2020, 8:30 PM | Coastal News |

ಕಾರವಾರ: ದೇಶದ ಎಲ್ಲೆಡೆ ಡಿಸಿಯನ್ನು ಕಲೆಕ್ಟರ್ ಅಂತಲೇ ಕರೆಯುತ್ತಾರೆ. ಹೀಗಾಗಿ ಜಿಲ್ಲಾಧಿಕಾರಿ ಎಂಬ ಹೆಸರನ್ನು ಕಲೆಕ್ಟರ್ ಎಂದು ಬದಲಿಸುವ ಪ್ರಸ್ತಾವ ನಮ್ಮ ಮುಂದಿದೆ. ಇದರ ಜತೆಗೆ, ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರು ತಿಂಗಳಿಗೆ ಒಮ್ಮೆ ಹಳ್ಳಿಗಳಿಗೆ ತೆರಳಿ, ಅಲ್ಲಿನ ಸಮಸ್ಯೆಗಳನ್ನು ಅರಿಯಬೇಕು.

ಇದಕ್ಕಾಗಿ 'ಜಿಲ್ಲಾಧಿಕಾರಿಗಳೇ ಹಳ್ಳಿಗೆ ನಡೆಯಿರಿ' ಎಂಬ ಕರ್ಯಕ್ರಮ ರೂಪಿಸಲು ಸೂಚಿಸಲಾಗುವುದೆಂದು ಕಂದಾಯ, ಪೌರಾಡಳಿತ ಸಚಿವ ಆರ್.ಅಶೋಕ್ ಕುಮಟಾದ ಮಿನಿ ವಿಧಾನಸೌಧದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.

ಪ್ರತಿ ತಿಂಗಳಿಗೊಮ್ಮೆ ಡಿಸಿ, ಉಪವಿಭಾಗಧಿಕಾರಿ, ತಹಶೀಲ್ದಾರರು ಒಂದು ಗ್ರಾಮ ಪಂಚಾಯತಿಗೆ ಭೇಟಿ ನೀಡ್ಬೇಕು. ಬೆಳಗ್ಗೆ 11 ಗಂಟೆಗೆ ಹಳ್ಳಿಯಲ್ಲಿದ್ದು, ಸಂಜೆ 5 ಗಂಟೆಯವರೆಗೆ ಅಲ್ಲಿನ ಸಮಸ್ಯೆ ಪರಿಶೀಲಿಸ್ಬೇಕು. ದಲಿತರ, ರೈತರ ಮನೆಯಲ್ಲಿ ಊಟ ಮಾಡಬೇಕು. ಇದನ್ನು ಇಡೀ ರಾಜ್ಯದ ಜಿಲ್ಲಾಧಿಕಾರಿಗಳು ಅನುಸರಿಸಬೇಕೆಂದರು.

ಅಲ್ಲದೇ, ಶಾಲೆ, ಅಂಗನವಾಡಿಗಳು ಸೇರಿದಂತೆ ್ಕಾರಿ ಕಚೇರಿಗಳಿಗೆ ಭೇಟಿ ನೀಡಿ, ಭೇಟಿಯ ಸಮಯದಲ್ಲಿ ್ಕಾರಿ ಸಮಸ್ಯೆಗಳು, ಹಿರಿಯರ ಪಿಂಚಣಿ, ಖಾತಾ ಸಮಸ್ಯೆ, ರೈತರ ಸಮಸ್ಯೆಗಳ ಬಗ್ಗೆ ಪರಿಶೀಲಿಸ್ಬೇಕು. ಹಾಗೂ ಅಧಿಕಾರಿಗಳು ಕಚೇರಿಯಲ್ಲೇ ಕುಳಿತುಕೊಂಡಿದ್ರೆ, ಜನರ ಸಮಸ್ಯೆ ತಿಳಿಯುವುದಿಲ್ಲವೆಂದರು.

ಪ್ರವಾಹ ಸಂತ್ರಸ್ತರಿಗೆ ಸರ್ಕಾರದಿಂದ ತೊಂದರೆಯಾಗಬಾರದು. ಕೂಡಲೇ ಅವರು ಮನೆಗಳನ್ನು ಕಟ್ಟಿಕೊಳ್ಳಬೇಕು. ಪ್ರತಿ ಡಿಸಿ ಖಾತೆಯಲ್ಲಿ ಕನಿಷ್ಠ 5 ಕೋಟಿ ್ಬೆಕು. ಉತ್ತರ ಕನ್ನಡ ಡಿಸಿ ಖಾತೆಯಲ್ಲಿ 50 ಕೋಟಿ ಇದೆ. ಪ್ರವಾಹ ಸಂತ್ರಸ್ತರಿಗೆ ಮನೆ ಕಟ್ಟಿಕೊಡಬೇಕೆಂದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊಡ್ಡವರು. ಜನರು ಮನಸ್ಸು ಮಾಡಿದರೆ ನಮ್ಮನ್ನು ಲೀಡರ್ ಮಾಡುತ್ತಾರೆ, ಫುಟ್ ಪಾತ್ ಗೆ ಕೂಡ ನಿಲ್ಲಿಸುತ್ತಾರೆ. ಜನರಿಗೆ ಎಲ್ಲಿಯವರೆಗೆ ಗೌರವ ಕೊಡುತ್ತೇವೆ ಅಲ್ಲಿಯವರೆಗೆ ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಕರ್ಯಕ್ರಮಗಳು ಆಗುತ್ತವೆ ಎಂದರು.

ಹಿರಿಯ ನಾಗರಿಕರಿಗೆ 60 ್ಷ ಆಗುತ್ತಿದ್ದಂತೆ ಪಿಂಚಣಿ ್ಬೆಕು. ಹಿನ್ನೆಲೆ ಕರ್ಯಕ್ರಮ ರೂಪಿಸಿದ್ದು, ಶೀಘ್ರದಲ್ಲೇ ಉಡುಪಿಯಲ್ಲಿ ಇದಕ್ಕೆ ಚಾಲನೆ ನೀಡಲಾಗುವುದೆಂದರು.

ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಶೇ. 80ರಷ್ಟು ಅರಣ್ಯ, ಸಮುದ್ರ, ನದಿ, ಹಿನ್ನೀರಿನಿಂದ ಆವೃತವಾಗಿದೆ. ಸಿ ಆರ್ ಝೆಡ್ ಸಮಸ್ಯೆಯಿಂದಾಗಿ ಜನರಿಗೆ ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ನಮ್ಮಲ್ಲಿ ಜನರು ಎರಡ್ಮೂರು ಗುಂಟೆ ಜಾಗದಲ್ಲಿ ಜನರು ವಾಸಿಸುತ್ತಿದ್ದಾರೆ. -ಸ್ವತ್ತು ಎಂಬ ಭೂತದಿಂದ ಎಲ್ಲವೂ ಹಾಳಾಗಿದ್ದು, ಇದು ಬಹುದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದ್ದು, ಇದನ್ನು ನಿವಾರಿಸಿಕೊಡಬೇಕು. ಹಿಂದಿನ ಕಾಂಗ್ರೆಸ್, ಸಮ್ಮಿಶ್ರ ್ಕಾರದಲ್ಲಿ ನಿಯಮ ಸರಳೀಕರಣಗೊಳಿಸುವುದಾಗಿ ಹೇಳಿದ್ದರು. ಇದರಿಂದ ಪುರಸಭೆಗಾಗಲಿ, ಗ್ರಾಮ ಪಂಚಾಯತಿಗಾಗಲಿ ಆದಾಯವಿಲ್ಲ. ಮನೆ ಕಟ್ಟಿಕೊಳ್ಳಲು ಆಗದೇ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆಗಳು ಬರುತ್ತಿಲ್ಲವೆಂದರು.

 

್ಕಾರಿ ಕಾಲೇಜಿನ 409 ವಿದ್ಯರ್ಥಿಗಳಿಗೆ ಇಂದು ಸಾಂಕೇತಿಕವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಲಾಗುತ್ತದೆ ಎಂದರು.

 

ಕರ್ಯಕ್ರಮದಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ, ಕಾರವಾರ ಶಾಸಕಿ ರೂಪಾಲಿ ನಾಯ್ಕ, ಡಿಸಿ, ಡಾ.ಕೆ.ಹರೀಶಕುಮಾರ್, ಸಿಇಒ ಮೊಹಮ್ಮದ್ ರೋಶನ್, ಜಿಲ್ಲಾ ಪಂಚಾಯತಿ ಸದಸ್ಯರಾದ ರತ್ನಾಕರ್ ನಾಯ್ಕ, ಶ್ರೀಕಲಾ ಶಾಸ್ತ್ರಿ, ತಾಲೂಕು ಪಂಚಾಯತಿ ಅಧ್ಯಕ್ಷೆ ವಿಜಯಾ ಪಟಗಾರ ಸೇರಿದಂತೆ ಹಲವರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...