ಮಾಜಿ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ವಿರುದ್ಧ ಬಂಧನಾದೇಶ

Source: S O News | By I.G. Bhatkali | Published on 14th January 2022, 7:15 AM | National News |

ಸುಲ್ತಾನ್‌ಪುರ (ಉ.ಪ್ರ.): ಏಳು ವರ್ಷ ಹಳೆಯ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿ ಉತ್ತರಪ್ರದೇಶದ ಮಾಜಿ ಸಚಿವ ಸ್ವಾಮಿ ಪ್ರಸಾ ದ್ ಮೌರ್ಯ ಅವರ ವಿರುದ್ಧ ಸುಲ್ತಾನ್‌ಪುರದ ಸಂಸದ-ಶಾಸಕರ ನ್ಯಾಯಾಲಯ ಬುಧ ವಾರ ಬಂಧನಾದೇಶ ಜಾರಿಗೊಳಿಸಿದೆ.

ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರದ ಸಂಪುಟದ ಸಚಿವ ಸ್ಥಾನಕ್ಕೆ ಮೌರ್ಯ ಅವರು ರಾಜೀನಾಮೆ ನೀಡಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

2014ರಲ್ಲಿ ಈ ಪ್ರಕರಣ ದಾಖಲಾಗುವ ಸಂದ ರ್ಭ ಮೌರ್ಯ ಅವರು ಬಹುಜನ ಸಮಾಜ ಪಕ (ಬಿಎಸ್‌ಪಿ) ದಲ್ಲಿದ್ದರು.

“2014ರಲ್ಲಿ ನೀಡಿದ ಧಾರ್ಮಿಕ ಹೇಳಿಕೆಗೆ ಸಂಬಂಧಿಸಿ ಸ್ವಾಮಿ ಪ್ರಸಾದ್ ಮೌರ್ಯ ಅವರು ನ್ಯಾಯಾಲಯದ ಮುಂದೆ ಹಾಜರಾಗಿದ್ದರು.

ಅವರ ವಿರುದ್ಧದ ಜಾಮೀನು ರಹಿತ ಬಂಧನಾದೇಶಕ್ಕೆ ಅಲಹಾ ಬಾದ್ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಆ ತಡೆಯಾಜ್ಞೆಗೆ ಜನಮ 6ರ ವರೆಗೆ ಮಾನ್ಯತೆ ಇತ್ತು. ಅವರು ಬುಧವಾರ ನ್ಯಾಯಾಲ ಯದ ಮುಂದೆ ಹಾಜರಾಗಬೇಕಿತ್ತು. ಆದರೆ, ಹಾಜರಾಗಿರಲಿಲ್ಲ. ಆದು ದರಿಂದ ಅವರ ವಿರುದ್ಧ ಜಾಮೀನು ರಹಿತ ಬಂಧನಾದೇಶ ಜಾರಿಗೊಳಿ ಸಲಾಗಿದೆ. ಮುಂದಿನ ವಿಚಾರಣೆ ಜನವರಿ 24ರಂದು ನಡೆಯಲಿದೆ' ಎಂದು ನ್ಯಾಯವಾದಿ ಅನಿಲ್ ತಿವಾರಿ ತಿಳಿಸಿದ್ದಾರೆ.

ಅವರು ಸಮಾಜವಾದಿ ಪಕ್ಷ ಸೇರುವ ಸಾಧ್ಯತೆ ಇದ್ದು, ಶುಕ್ರವಾರ ತಮ್ಮ ಮುಂದಿನ ಕಾರ್ಯ ವೈಖರಿಯನ್ನು ಬಹಿರಂಗಪಡಿಸುವುದಾಗಿ ತಿಳಿಸಿದ್ದಾರೆ.

ದ್ವೇಷ ಭಾಷಣದ ಕುರಿತ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯ ದ ಮುಂದೆ ಹಾಜರಾಗಲು ವಿಫಲವಾದ ಬಳಿಕ ಮೌರ್ಯ ಅವರ ವಿರುದ್ಧ ಈ ಬಂಧನಾದೇಶ ಜಾರಿಗೊಳಿಸಲಾಗಿದೆ. ಜನವರಿ 24ಕ್ಕಿಂತ ಮುನ್ನ ನ್ಯಾಯಾಲಯಕ್ಕೆ ಅವರಿಗೆ ಸೂಚಿಸಲಾಗಿದೆ. ಮೌರ್ಯ ಅವರ ಈ ಪ್ರಕರಣ 2014ರ ಧಾರ್ಮಿಕ ದ್ವೇಷ ಭಾಷಣಕೆ ಸಂಬಂಧಿಸಿದ್ದಾಗಿದೆ. ಕಾರ್ಯಕ್ರಮವೊಂದರಲ್ಲಿ ಮೌರ್ಯ ಅವರು, “ವಿವಾಹದ ಸಂದರ್ಭ ಗಣೇಶ ಅಥವಾ ಗೌರಿಯನ್ನು ಆರಾಧಿಸಬೇಡಿ. ಹಿಂದುಳಿದವರು ಹಾಗೂ ದಲಿತರನ್ನು ದಾರಿತಪ್ಪಿಸುವ ಹಾಗೂ ಗುಲಾ ಮಗಿರಿಗೆ ತಳ್ಳಲು ಮೇಲ್ದಾತಿ ಪ್ರಭುತ್ವದ ವ್ಯವಸ್ಥೆ ರೂಪಿಸಿದ ಪಿತೂರಿ ಇದು'' ಎಂದು ದಲಿತರಿಗೆ ಕರೆ ನೀಡಿದ್ದರು.

2016ರಲ್ಲಿ ಅವರ ವಿರುದ್ಧ ಜಾರಿಗೊಳಿಸಲಾಗಿದ್ದ ಈ ಹಿಂದಿನ ಬಂಧನಾದೇಶಕ್ಕೆ ಅಲಹಾಬಾದ್ ಉಚ್ಚ ನ್ಯಾಯಾಲಯ ತಡೆ ವಿಧಿಸಿತ್ತು.

Read These Next

ಹೈದರಾಬಾದ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ; ಆರೋಪಿಗಳ ಎನ್‌ಕೌಂಟರ್‌ ನಕಲಿ. ಸುಪ್ರೀಂ ಕೋರ್ಟ್ ನೇಮಿತ ಆಯೋಗ

ದಿಶಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳ ಸಾವಿನ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನಿಂದ ...

ಶಾಲಾ ಪಠ್ಯ ಪುಸ್ತಕಗಳು ಆರೆಸಸ್ ಮಯ; ಕೇಜ್ರಿವಾಲ್, ಭಗವಂತ್ ಮಾನ್ ಸಹಿತ ಹಲವು ಮುಖಂಡರಿಂದ ಆಕ್ರೋಶ

ಪಠ್ಯ ಪುಸ್ತಕದಿಂದ ಭಗತ್ ಸಿಂಗ್ ರಂತಹ ರಾಷ್ಟ್ರ ಪ್ರೇಮಿಗಳ ಅಧ್ಯಾಯಗಳನ್ನು ಕಿತ್ತು ಹಾಕಿ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವೂ ...

ದೇಶದ್ರೋಹ ಕಾನೂನಿಗೆ ತಡೆ; ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು; ಪುನರ್‌ಪರಿಶೀಲನೆ ಪೂರ್ಣಗೊಳ್ಳುವವರೆಗೆ ವಿರಾಮ

ಸರಕಾರದಿಂದ ದೇಶದ್ರೋಹ ಕಾನೂನಿನ ಪುನರ್‌ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಈ ವಿವಾದಾತ್ಮಕ ಕಾನೂನಿನಿಂದ ಕೇಂದ್ರ ಮತ್ತು ರಾಜ್ಯ ...