ಉತ್ತರಕನ್ನಡ ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ ಅವಧಿ ವಿಸ್ತರಣೆ

Source: sonews | By Staff Correspondent | Published on 28th October 2020, 5:47 PM | Coastal News |

ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಪ್ರವಾದಿ ಮುಹಮ್ಮದ್ ಪೈಗಂಬರ ಜನ್ಮದಿನಾಚರಣೆಯ ಅಂಗವಾಗಿ ಅ.23 ರಿಂದ ನ.5ರ ವರೆಗೆ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ಉತ್ತರಕನ್ನಡ ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು ಅ.೩೧ ಅಂತಿಮ ಎಂದು ಈ ಹಿಂದೆ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಆದರೆ ದಸರಾ ರಜೆ ಬಂದಿರುವದರಿಂದಾಗಿ ಪ್ರಬಂಧವನ್ನು ನ.೫ ರ ಒಳಗೆ ಕಳುಹಿಸಿಕೊಡುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಪ್ರಬಂಧವು ಕೈಬರಹದಲ್ಲಿದ್ದು ಎ4 ಅಳತೆಯ 6ಪುಟಕ್ಕೆ ಮೀರದಂತಿರಬೇಕು. ಕನ್ನಡದಲ್ಲಿ ಬರೆದ ಪ್ರಬಂಧ ಬರಹವನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಆಸಕ್ತರು ತಮ್ಮ ಪಿಪಿ ಅಳತೆಯ ಭಾವಚಿತ್ರ, ಮೊಬೈಲ್ ಸಂಖ್ಯೆ, ಈಮೇಲ್ ವಿಳಾಸದೊಂದಿಗೆ, ನ.೫ ರ ಒಳಗೆ ತಲುಪುವಂತೆ ‘ಸಂಚಾಲಕರು ಸೀರತ್ ಪ್ರಬಂಧ ಸ್ಪರ್ಧೆ, 321ದಾವತ್ ಸೆಂಟರ್ ಸುಲ್ತಾನ್ ಸ್ಟ್ರೀಟ್ ಭಟ್ಕಳಕ್ಕೆ ಕಳುಹಿಸಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ವಯಸ್ಸು, ಉದ್ಯೋಗದ ಮಿತಿ ಇರುವುದಿಲ್ಲ. ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು, ವ್ಯಾಪರಸ್ಥರು,ಸಾರ್ವಜನಿಕ ಸ್ತ್ರೀ ಮತ್ತು ಪುರುಷರು ಭಾಗಹಿಸಬಹುದಾಗಿದೆ. ವಿಜೇತರಿಗೆ ಪ್ರಥಮ ಬಹುಮಾನ 5000, ದ್ವತೀಯ 3000, ತೃತೀಯ 2000 ಹಾಗೂ ತಲಾ ಒಂದು ಸಾವಿರ ರೂಪಾಯಿಯ 3 ಸಮಧಾನಕರ ಬಹುಮಾನಗಳಿದ್ದು ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ 9886455416(ಎಂ.ಆರ್.ಮಾನ್ವಿ) ಗೆ ಕರೆ ಮಾಡಿ ಪಡೆದುಕೊಳ್ಳಬಹುದಾಗಿದೆ.

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...