ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

Source: sonews | By Staff Correspondent | Published on 18th July 2019, 11:02 PM | State News | Don't Miss |

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಹಾಗೂ ಪರವಾನಗಿ ಇಲ್ಲದ ನರ್ಸರಿಗಳು ವಿರುದ್ದ ಕ್ರಮ ಕೈಗೊಂಡು ಕಡ್ಡಾಯವಾಗಿ ರೈತರು ಕೊಂಡುಕೊಳ್ಳುವ ಸಸಿಗಳಿಗೆ ಕಡ್ಡಾಯವಾಗಿ ರಸೀದಿ ನೀಡಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ತೋಟಗಾರಿಕೆ ಇಲಾಖೆಯ ಮುಂದೆ ಮೌನ ಹೋರಾಟ ಮಾಡಿ ಉಪ ನಿರ್ದೇಶಕರಿಗೆ ಮನವಿ ನೀಡಿ ಅಗ್ರಹಿಸಲಾಯಿತು.

ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಒಂದು ಕಡೆ ಬೀಕರವಾದ ಬರಗಾಲ ಮತ್ತೊಂದುಕಡೆ ಸಾಲ ಮಾಡಿ ಕೊಳವೆ ಭಾವಿ ಕೊರೆಸಿ ಬೆಳೇದ ಬೆಳೆ ನಕಲಿ ಬಿತ್ತನೆ ಬೀಜದ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಲಾಗುತ್ತಿದ್ದಾರೆ. ನೆಪ ಮಾತ್ರಕ್ಕೆ ಸಾವಿರಕ್ಕೆ ಒಬ್ಬ ರೈತರ ತೋಟದಲ್ಲಿ ಕಂಪನಿಗಳು ಹಾಗೂ ಏಜೆಂಟ್‍ಗಳು ಜನರನ್ನು ಯಾಮಾರಿಸಲು ಬೆಳೆ ಕ್ಷೇತ್ರೋತ್ಸವ ಮಾಡಿ ಸಾವಿರಾರು ಜನ ರೈತರನ್ನು ಯಾಮಾರಿಸುತ್ತಿದ್ದಾರೆ. ಇನ್ನೂ ಬೆಳೆ ನಾಶವಾದಾಗ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದರೆ ವಾತಾವರಣದ ನೆಪ ಹೇಳಿ ಕಂಪನಿಗಳ ಪರ ನಿಲ್ಲುತ್ತಾರೆ. ಹಾಗೂ ಲಕ್ಷಾಂತರ ಬಂಡವಾಳ ಹಾಕಿ ಬೆಳೆ ಕಳೆದು ಕೊಂಡ ರೈತ ಸಾಲಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗೂ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳು ನೂರಾರು ಬ್ರಾಂಡ್‍ಗಳ ಹೆಸರಿನಲ್ಲಿ ರೈತರನ್ನು ಯಾಮಾರಿಸಿ ಅವರ ಜೊತೆಗೆ ನರ್ಸರಿ ಮಾಲೀಕರು ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿದು ರೈತರ ಮರಣ ಶಾಸನ ಬರೆಯುತ್ತಿದ್ದಾರೆ. ಇಷ್ಟೇಲ್ಲಾ ಅವ್ಯವಸ್ಥೆ ಇದ್ದರೂ ಯಾವುದೇ ಅಧಿಕಾರಿಯೂ ಸಂಬಂಧಪಟ್ಟ ಕಂಪನಿಗಳ ಸಭೆ ಕರೆಯದ ಜೊತೆಗೆ ಎಷ್ಟು ಕಂಪನಿಗಳಿವೆ ಎಷ್ಟು ನರ್ಸರಿಗಳಿವೆಂದು ಅಧಿಕಾರಿಗಳಿಗೆ ಮಾಹಿತಿಯಿಲ್ಲದ ಇಲಾಖೆಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮಹಿಳಾ ಜಿಲ್ಲಾದ್ಯಕ್ಷೆ ಎ,ನಳಿನಿ ಮಾತನಾಡಿ ವ್ಯವಸಾಯ ನೀ ಸಾಯ ಎಂಬ ಗಾದೆಯಂತೆ ಜಿಲ್ಲೆಯಲ್ಲಿ ಕೃಷಿ ತೋಟಗಾರಿಕೆ, ರೇಷ್ಮೇ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ರೈತರ ಪಾಲಿಗೆ ಇಲ್ಲದಂತಾಗಿವೆ. ಜೊತೆಗೆ ಜಿಲ್ಲಾದ್ಯಂತ ನರ್ಸರಿಗಳು ಮತ್ತು ಬೀಜ , ಕೀಟ ನಾಶಕ ಕಂಪನಿಗಳು ಪರವಾನಗಿ ಮತ್ತು ನವೀಕರಿಸಿಕೊಂಡು ಕೃಷಿ ಇಲಾಖೆಯಲ್ಲಿ ನೊಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿಗಳು ಕಡ್ಡಾಯಗೊಳಿಸಿ ವರ್ಷಗಳೂ ಕಳೇದರೂ ಇದುವರೆಗೂ ನೊಂದಣಿ ಮಾಡಿಸಿಕೊಳ್ಳುತ್ತಿಲ್ಲ. ಜಿಲ್ಲಾದ್ಯಂತ ಮಾರಾಟವಾಗುವ ಎಲ್ಲಾ ಬಿತ್ತನೆ ಬೀಜ ಕಂಪನಿಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಕಡ್ಡಾಯವಾಗಿ ನೊಂದಣಿ ಮಾಡಿಸಿಕೊಳ್ಳಬೇಕೆಂದು ಆದೇಶಿಸಬೇಕು. ಜಿಲ್ಲಾದ್ಯಂತ ಸುಮಾರು ನೂರಾರು ನರ್ಸರಿಗಳಿದ್ದು, ಈ ನರ್ಸರಿಗಳಲ್ಲಿ ರೈತರು ತಂದ ಸಸಿಗಳಲ್ಲಿ ಬಿತ್ತನೆ ಬೀಜದ ರಶೀದಿ ಅಥವಾ ಸಸಿಗಳ ರಶೀಧಿ ಶೇ. 90ರಷ್ಟು ನೀಡುವುದಿಲ್ಲ. ರೈತನ ಬೆಳೆ ಹಾಳಾದಾಗ ಯಾರು ಜವಾಬ್ದಾರಿ ಹೊರಲು ಸಿದ್ದವಿಲ್ಲ.

 

ಸಸಿಕೊಂಡ ಪ್ರತಿ ರೈತನಿಗೂ ನರ್ಸರಿಯ ಹೆಸರು ಬೀಜದ ಲಾಟ್ ನಂ. ಕಂಪನಿಯ ಹೆಸರು ಉತ್ಪಾಧನೆಯ ದಿನಾಂಕ, ಅವಧಿ ಮುಗಿದ ದಿನಾಂಕದ ಸಂಪೂರ್ಣ ವಿವರದ ರಶೀದಿಯನ್ನು ರೈತರಿಗೆ ನೀಡದಿದ್ದಲ್ಲಿ ಆ ನರ್ಸರಿಯ ವಿರುದ್ದ ರೈತನ ಬೆಳೆ ನಷ್ಟವಾದಾಗ ನಷ್ಟವನ್ನು ನರ್ಸರಿ ಮಾಲೀಕ ಹಾಗೂ ಬೀಜ ಕಂಪನಿಯ ಮಾಲೀಕರು ನಷ್ಟ ತುಂಬಿಕೊಡಬೇಕು. ಇಲ್ಲವೇ ಅವರ ವಿರುದ್ದ ಕ್ರಿಮಿನಲ್ ಮೊಖದ್ದೊಮ್ಮೆ ಧಾಖಲಿಸಬೇಕು. ಈ ವಿಚಾರದಲ್ಲಿ ಮೀನಾಮೇಶವೆಣಿಸದೆ ಒಂದು ತಿಂಗಳು ಗಡವು ಕೊಟ್ಟು ನೊಂದಣಿ ಮಾಡಿಸಿಕೊಳ್ಳದ ನರ್ಸರಿಗಳು ಹಾಗೂ ಬೀಜ ಮತ್ತು ಕೀಟನಾಶಕ ಕಂಪನಿಗಳ ವಿರುದ್ದ ಪ್ರಕರಣ ದಾಖಲಿಸಿ ಆ ನರ್ಸರಿ ಕಂಪನಿಗಳನ್ನು ಮುಚ್ಚಿಸಬೇಕು. ರೈತರಿಗೆ ಯಾವುದೆ ರೀತಿಯ ಬೆಳೆ ನಷ್ಟವಾದರು ಸಮರ್ಪಕವಾಗಿ ಸಂಬಂಧಪಟ್ಟವರಿಂದ ಪರಿಹಾರ ಸಿಗುವಂತೆ ವ್ಯವಸ್ತೆ ಮಾಡಿ ಬೀಜಕಂಪನಿಗಳ ಮತ್ತು ನರ್ಸರಿಗಳಿಂದ ರೈತರು ನಷ್ಟಹೊಂದದ ರೀತಿ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕರಾದ ಗಾಯಿತ್ರಿರವರು ಮಾತನಾಡಿ ಈ ನಿಮ್ಮ ಮನವಿಯ ಬಗ್ಗೆ ಚರ್ಚೆ ಮಾಡುತ್ತೇನೆ. ನಾನು ಅಧಿಕಾರ ವಹಿಸಿಕೊಂಡು ಕೇವಲ 3 ದಿವಸಗಳಾಗಿವೆ ಆದಕ್ಕಾಗಿ 3-4 ದಿನಗಳ ಕಾಲವಕಾಶ ಕೊಡಿ ನಿಮ್ಮ ಬೇಡಿಕೆಗಳನ್ನು ಈಡೇರಿಸುವೆಂಧು ಭರವಸೆ ನೀಡಿದರು.

ಈ ಹೋರಾಟದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಈಕಂಬಳ್ಳಿ ಮಂಜುನಾಥ್, ರಂಜಿತ್, ರಾಮಕೃಷ್ಣಪ್ಪ, ಮಾಸ್ತಿ ವೆಂಕಟೇಶ್, ಮಂಗಸಂದ್ರ ವೆಂಕಟೇಶಪ್ಪ, ಮುನಿಯಪ್ಪ, ಚೆನ್ನರಾಯಪ್ಪ, ಸುಪ್ರೀಂಚಲ, ನಾರಾಯಣ್, ಮುಂತಾದವರಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...