ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆ ರಚನೆ

Source: SO News | By Laxmi Tanaya | Published on 20th April 2021, 9:24 AM | Coastal News | Don't Miss |

ಮಂಗಳೂರು : ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯ  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೈರ್ಮಲ್ಯದಡಿ ಸುಸ್ಥಿರತೆಯನ್ನು ಕಾಪಾಡುವುದು, ಗ್ರಾಮ ಪಂಚಾಯತ್‍ಗಳ ಪ್ರಮುಖ ಕರ್ತವ್ಯವಾಗಿದೆ. ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ಮನೆ ಹಂತದಲ್ಲಿಯೇ ನಿರ್ವಹಣೆ ಮಾಡಿಕೊಂಡು ಗೊಬ್ಬರ ಮಾಡಿಕೊಳ್ಳಲು ಹಾಗೂ ಒಣ ಕಸಗಳನ್ನು ಗ್ರಾಮ ಪಂಚಾಯತಿ ವತಿಯಿಂದ ಸಂಗ್ರಹಿಸಿಕೊಂಡು ವಿಲೇವಾರಿ ನಡೆಸಲು,  ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಲು ಮತ್ತು ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆಯನ್ನು ರಚಿಸಲಾಗಿದೆ.

  ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಪಡೆ ಜವಾಬ್ದಾರಿಗಳು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಪ್ರಕ್ರಿಯೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಬೇಕು. ರಾಷ್ಟ್ರೀಯ/ರಾಜ್ಯ ಹಾಗೂ ಸ್ಥಳೀಯ ರಸ್ತೆಗಳ ಅಂಚಿನಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯಗಳನ್ನು ತಂದು ರಾಶಿ ಹಾಕುವ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದರೊಂದಿಗೆ, ಸದರಿ ಸ್ಥಳಗಳಲ್ಲಿ ಹಗಲು ಮತ್ತು ರಾತ್ರಿ ಹೊತ್ತು ಪಾಳಿಗಳಲ್ಲಿ ಗಸ್ತು ತಿರುಗಿ ಕಸ ಬಿಸಾಡುವವರ ಮತ್ತು ವಾಹನದ ಮೇಲೆ ಶಿಸ್ತು ಕ್ರಮಗಳನ್ನು ಜರಗಿಸಬೇಕು. ಕಸ ತಂದು ಸುರಿಯುವ ವಾಹನದ ಮಾಲೀಕರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ತಪ್ಪಿತಸ್ಥರ ಮೇಲೆ ಗ್ರಾಮ ಪಂಚಾಯತ್ ನಿರ್ದಿಷ್ಟ ಮೊತ್ತದ ದಂಡವನ್ನು  ವಿಧಿಸಿ, ವಾಹನದ ನೋಂದಣಿ ರದ್ದು ಪಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.

ಕಸವನ್ನು ರಾಶಿ ಹಾಕಲಾಗಿರುವ ಪ್ರದೇಶವನ್ನು ಶುಚಿಗೊಳಿಸಿ ಗಿಡ ನೆಡೆವುದು, ಉದ್ಯಾನವನ ನಿರ್ಮಾಣ, ಗೋಡೆ ಬರಹದಿಂದ ಸುಂದರ ತಾಣವನ್ನಾಗಿ ಮಾರ್ಪಡಿಸಬೇಕು. ಬೃಹತ್ ತ್ಯಾಜ್ಯ ಉತ್ಪಾದಕರು (50 ಕೆಜಿಗಿಂತ ಹೆಚ್ಚಿನ/ವಾಣಿಜ್ಯ/ಮಾಂಸ ತ್ಯಾಜ್ಯ) ತಮ್ಮ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಬಗ್ಗೆ ನಿರ್ದೇಶನ ನೀಡಬೇಕು. ಸ್ವಚ್ಛತೆ ಮತ್ತು ನೈರ್ಮಲ್ಯ ಸಮಿತಿಯು 15 ದಿನಗಳಿಗೊಮ್ಮೆ ಸಭೆಯನ್ನು ನಡೆಸಿ, ಅನುಸರಣೆ ಕ್ರಮವನ್ನು ಕೈಗೊಳ್ಳಬೇಕು.

ದಂಡಗಳು ಮತ್ತು ಶಿಸ್ತು ಕ್ರಮಗಳು: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಎಸೆಯುವ ಮತ್ತು ಅವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಿಸುವ ತಪ್ಪಿತಸ್ಥರ ಮೇಲೆ ನಿಯಮಾನುಸಾರ ದಂಡನೆ ಮತ್ತು ಶಿಸ್ತು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ತಪ್ಪಿತಸ್ಥರ ಮೇಲೆ ಕರ್ನಾಟಕ ಪಂಚಾಯತ್ ರಾಜ್ (ಘನ ತ್ಯಾಜ್ಯ ನಿರ್ವಹಣೆ) ಮಾದರಿ ಉಪವಿಧಿಗಳು-2020ರ (ಅನುಸೂಚಿ-III) ರಂತೆ ಶಿಫಾರಸ್ಸು ಮಾಡಲಾದ ದಂಡನೆಗಳು: ತೆರೆದ ಸ್ಥಳಗಳಲ್ಲಿ ಕಸ ಸುರಿಯುವುದು, ಉಗಿಯುವುದು ಮತ್ತು ಮೂತ್ರವಿಸರ್ಜನೆ, ಬೃಹತ್ ತ್ಯಾಜ್ಯ ಉತ್ಪಾದಕರಲ್ಲದ ತ್ಯಾಜ್ಯೋತ್ಪಾದಕರಿಂದ ‘ಘನ ತ್ಯಾಜ್ಯವನ್ನು ವಿಂಗಡಣೆ ಮಾಡಿಸುವಲ್ಲಿ ಮತ್ತು/ ಅಥವಾ ತ್ಯಾಜ್ಯವನ್ನು ಬಟವಾಡೆ ಮಾಡುವಲ್ಲಿನ ವೈಫಲ್ಯ, ಬೃಹತ್ ತ್ಯಾಜ್ಯೋತ್ಪಾದಕನಲ್ಲದ ತ್ಯಾಜ್ಯೋತ್ಪಾದಕನಿಂದ ಘನ ತ್ಯಾಜ್ಯದ ಸುಡುವಿಕೆ, ಅಥವಾ ಕುಪ್ಪೆ ಹಾಕುವಿಕೆ ಅಥವಾ ಹೂಳುವ ಮೂಲಕ ವಿಲೇವಾರಿ ಮಾಡುವವರಿಗೆ (ಗ್ರಾ.ಪಂ-ನ ಜನಸಂಖ್ಯೆಯ ಪ್ರಮಾಣ 2,000 ರಿಂದ ಮೇಲ್ಪಟ್ಟು) ರೂ. 1,000 ದಂಡ ವಿಧಿಸಲಾಗುವುದು.
ಬೃಹತ್ ತ್ಯಾಜ್ಯ ಉತ್ಪಾದಕರು ಘನ ತ್ಯಾಜ್ಯ ವಿಂಗಡಣೆ ಮಾಡಲು ವಿಫಲರಾಗಿದ್ದಲ್ಲಿ ಅಥವಾ ಬೃಹತ್ ತ್ಯಾಜ್ಯೋತ್ಪಾದಕನಿಂದ ಘನ ತ್ಯಾಜ್ಯದ ಸುಡುವಿಕೆ, ಅಥವಾ ಕುಪ್ಪೆ ಹಾಕುವಿಕೆ ಮತ್ತು/ಅಥವಾ ಹೂಳುವ ಮೂಲಕ ವಿಲೇವಾರಿ ಮಾಡಿದ್ದಲ್ಲಿ ರೂ. 5,000 ದಂಡ ವಿಧಿಸಲಾಗುವುದು.
ಮೇಲಿನ ಯಾವುದೇ ವರ್ಗಕ್ಕೆ ಸೇರದ ಇತರ ಸ್ಥಳಗಳು/ ಚಟುವಟಿಕೆಗಳು ನಿಯಮಗಳು ಪಾಲನೆ ಮಾಡದಿರುವಲ್ಲಿ ಗ್ರಾಮಪಂಚಾಯತಿಯು ಒಂದು ಸಾಮಾನ್ಯ ಅಥವಾ ವಿಶೇಷ ಆದೇಶ/ ಅಧಿಸೂಚನೆಯ ಮೂಲಕ ತೀರ್ಮಾನಿಸಿದಂತೆ ದಂಡ ವಿಧಿಸಲಾಗುವುದು.

ಮೋಟರು ವಾಹನ ಕಾಯ್ದೆಯ ಸೆಕ್ಷನ್ 177 ರಡಿಯಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವ ವಾಹನದ ಮಾಲೀಕರಿಗೆ ದಂಡ ವಿಧಿಸಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ವಾಹನಗಳ ಛಾಯಾಚಿತ್ರವನ್ನು ಲಗತ್ತಿಸಿ ದೂರನ್ನು ದಾಖಲಿಸಲಾಗುವುದು. ಸಂಬಂಧಪಟ್ಟ ಉಪವಿಭಾಗದ ದಂಡಾಧಿಕಾರಿಗಳಿಗೆ ದಂಡಾನ ಕ್ರಮವನ್ನು  1973 ಕಲಂ ಸೆಕ್ಷನ್ 133 ರಡಿ ವಿಚಾರಣೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ದಾಖಲಿಸಲಾಗುವುದು. ತ್ಯಾಜ್ಯವನ್ನು ಸುರಿಯುವ ವ್ಯಕ್ತಿ/ವಾಹನದ ಮೇಲೆ ಕರ್ನಾಟಕ ಪೊಲೀಸ್ ಕಾಯ್ದೆ-1963ರ ಸೆಕ್ಷನ್ 92 ರಡಿ ಕ್ರಮ ಜರಗಿಸುವಂತೆ ಛಾಯಾಚಿತ್ರ ಸಹಿತ ದೂರನ್ನು ಆರಕ್ಷಕರಿಗೆ ನೀಡಬೇಕು.

  ತ್ಯಾಜ್ಯವನ್ನು ಅವೈಜ್ಞಾನಿಕವಾಗಿ ನಿರ್ವಹಿಸುವ ಅಂಗಡಿ/ವಾಣಿಜ್ಯ ವರ್ತಕರುಗಳ ಪರವಾನಿಗೆಯನ್ನು ನಿಯಮಾನುಸಾರ ರದ್ದುಗೊಳಿಸಲು ಕ್ರಮವಹಿಸಬೇಕು. ತ್ಯಾಜ್ಯವನ್ನು ಸುರಿಯುವ ವ್ಯಕ್ತಿ/ವಾಹನದ ಛಾಯಾಚಿತ್ರ ಮತ್ತು ಸಿ.ಸಿ ಕ್ಯಾಮರಾದ  ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಪ್ರಕಟಿಸಿ ಪ್ರಚಾರ ನೀಡಬೇಕು. ಗ್ರಾಮ ಪಂಚಾಯತಿನ ವ್ಯಾಪ್ತಿಗೆ ಬಾರದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಿಸಿದ ಗ್ರಾಮ ಪಂಚಾಯತಿಗೆ ದೂರನ್ನು ಲಿಖಿತವಾಗಿ ನೀಡಿ, ಈ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತ್ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು.

ಕರ್ನಾಟಕ ಪಂಚಾಯತ್ ರಾಜ್ (ಘನ ತ್ಯಾಜ್ಯ ನಿರ್ವಹಣೆ) ಮಾದರಿ ಉಪವಿಧಿಗಳು-2020ನ್ನು ಗ್ರಾಮ ಪಂಚಾಯತಿಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೈರ್ಮಲ್ಯದಡಿ ಸುಸ್ಥಿರತೆಯನ್ನು ಕಾಯ್ದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಡಾ. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...