ಮ್ಯಾಗ್ಸೆಸೆ ಪ್ರಶಸ್ತಿ ತಿರಸ್ಕರಿಸಿದ ಸಿಪಿಎಂ ನಾಯಕಿ ಕೆ ಕೆ.ಶೈಲಜಾ

Source: Vb | By I.G. Bhatkali | Published on 6th September 2022, 9:32 AM | National News |

ತಿರುವನಂತಪುರ: ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ರಾಮೋನ್ ಮ್ಯಾಗ್ನೆಸೆ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಕೇರಳದ ಆರೋಗ್ಯ ಸಚಿವೆಯಾಗಿ, ವಿಶೇಷವಾಗಿ ರಾಜ್ಯವು ನಿಫಾ ವೈರಸ್ ಮತ್ತು ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡಿದ್ದ ಸಂದರ್ಭದಲ್ಲಿ ಅವರ ಸಾಧನೆಯನ್ನು ಗಮನಿಸಿ 64ನೇ ಮ್ಯಾಗ್ನೆಸೆ ಪ್ರಶಸ್ತಿಗೆ ಅವರನ್ನು ಪರಿಗಣಿಸಲಾಗಿತ್ತು.

ಪಕ್ಷದಲ್ಲಿ ಚರ್ಚೆಯ ಬಳಿಕ ಮ್ಯಾಗ್ನೆಸೆ ಪ್ರಶಸ್ತಿಯನ್ನು ಸ್ವೀಕರಿಸದಿರಲು ನಿರ್ಣಯವನ್ನು ತೆಗೆದುಕೊಳ್ಳಲಾಯಿತು. ಎಂದು ಸಿಪಿಎಂ ನಾಯಕಿ ಶೈಲಜಾ ಹೇಳಿದರು. ಮ್ಯಾಗ್ನೆಸೆ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿಯ ಏಶ್ಯನ್ ಆವೃತ್ತಿಯೆಂದೇ ಪರಿಗಣಿಸಲಾಗಿದೆ.

ನನ್ನ ಹೆಸರನ್ನು ಪರಿಗಣಿಸಲಾಗಿದೆ ಎಂದು ಪ್ರಶಸ್ತಿ ಸಮಿತಿಯು ನನಗೆ ತಿಳಿಸಿತ್ತು. ನಾನು ರಾಜಕೀಯ ನಾಯಕಿಯಾಗಿದ್ದೇನೆ. ಈ ಪ್ರಶಸ್ತಿಯನ್ನು ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ನೀಡಲಾಗುವುದಿಲ್ಲ ಎಂದು ಶೈಲಜಾ ಹೇಳಿದರು.

'ನಾನು ಸಿಪಿಎಂ ಕೇಂದ್ರ ಸಮಿತಿಯ ಸದಸ್ಯೆಯಾಗಿದ್ದೇನೆ. ಪ್ರಶಸ್ತಿಯ ಕುರಿತು ಪಕ್ಷದ ನಾಯಕತ್ವದೊಂದಿಗೆ ನಾನು ಚರ್ಚಿಸಿದ್ದೇನೆ ಮತ್ತು ಅದನ್ನು ಸಾಮೂಹಿಕ ಸ್ವೀಕರಿಸದಿರಲು ನಾವು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಅದು ದೊಡ್ಡ ಪ್ರಶಸ್ತಿಯಾಗಿದೆ ನಿಜ, ಆದರೆ ಅದೊಂದು ಎನ್‌ಜಿಒ ಆಗಿದೆ ಮತ್ತು ಅವರು ಸಾಮಾನ್ಯವಾಗಿ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

1957ರಲ್ಲಿ ಸ್ಥಾಪನೆಗೊಂಡ ರಾಮೋನ್ ಮ್ಯಾಗ್ನೆಸೆ ಪ್ರಶಸ್ತಿಯು ಏಶ್ಯದ ಅತ್ಯುನ್ನತ ಗೌರವವಾಗಿದೆ. ಫಿಲಿಪೀನ್ಸ್‌ನ ಮೂರನೇ ಅಧ್ಯಕ್ಷರಾಗಿದ್ದ ರಾಮೋನ್ ಮ್ಯಾಗ್ನೆಸೆ ಅವರ ಸ್ಮರಣಾರ್ಥ ಮತ್ತು ಅವರ ನಾಯಕತ್ವದ ಗೌರವಾರ್ಥ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನಿಸ್ವಾರ್ಥ ಸೇವೆಗಾಗಿ ಏಷ್ಯದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ಪ್ರತಿವರ್ಷ ಪ್ರದಾನಿಸಲಾಗುತ್ತದೆ.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...