ಹೊಸದಿಲ್ಲಿ: ಡಿಸೆಂಬರ್‌ನೊಳಗೆ ದೇಶದ ಎಲ್ಲರಿಗೂ ಕೋವಿಡ್ ಲಸಿಕೆ: ಪ್ರಕಾಶ್ ಜಾವಡೇಕರ್

Source: VB News | By S O News | Published on 29th May 2021, 8:07 PM | National News |

ಹೊಸದಿಲ್ಲಿ: ಈ ವರ್ಷದ ಡಿಸೆಂಬರ್‌ನೊಳಗೆ ದೇಶದ ಎಲ್ಲ ಜನರಿಗೆ ಕೋವಿಡ್ ಲಸಿಕೆ ವಿತರಣೆಯ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಶುಕ್ರವಾರ ಇಲ್ಲಿ ಘೋಷಿಸಿದರು.

ದೇಶದ 130 ಕೋಟಿ ಜನಸಂಖ್ಯೆಯ ಪೈಕಿ ಶೇ.3ಕ್ಕಿಂತ ಕಡಿಮೆ ಜನರಿಗೆ ಮಾತ್ರ ಲಸಿಕೆಯ ಎರಡು ಡೋಸ್ ಗಳನ್ನು ನೀಡಲಾಗಿದೆ ಎಂದು ಬೆಟ್ಟು ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಜಾವಡೇಕರ್ ತೀವ್ರ ತರಾಟೆಗೆತ್ತಿಕೊಂಡರು.

ಕೇಂದ್ರ ಆರೋಗ್ಯ ಸಚಿವಾಲಯವು ಸಿದ್ಧಪಡಿಸಿರುವ 'ನೀಲನಕ್ಷೆ'ಯತ್ತ ರಾಹುಲ್ ಗಮನ ಸೆಳೆದ ಅವರು, ಡಿಸೆಂಬರ್ ವೇಳೆಗೆ 108 ಕೋ.ಜನರಿಗೆ 216 ಕೋ.ಡೋಸ್ ಲಸಿಕೆ ನೀಡಿಕೆಯನ್ನು ಅದು ಖಚಿತಪಡಿಸಿದೆ ಎಂದರು.

ಭಾರತವು ತನ್ನ ಪ್ರಜೆಗಳಿಗೆ ಅತ್ಯಂತ ವೇಗವಾಗಿ ಲಸಿಕೆ ನೀಡುತ್ತಿರುವ ವಿಶ್ವದ ಎರಡನೇ ದೇಶವಾಗಿದೆ. ಈವರೆಗೆ 20 ಕೋಟಿಗೂ ಅಧಿಕ ಡೋಸ್‌ಗಳನ್ನು ವಿತರಿಸಲಾಗಿದೆ ಎಂದು ರಾಹುಲ್‌ಗೆ ನೆನಪಿಸಿದ ಸಚಿವರು, ರಾಹುಲ್‌ಜಿ, ನಿಮಗೆ ಲಸಿಕೆ ನೀಡಿಕೆಯ ಬಗ್ಗೆ ಅಷ್ಟೊಂದು ಕಳವಳವಿದ್ದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳತ್ತ ಗಮನ ಹರಿಸಿ. ಅಲ್ಲಿ ಲಸಿಕೆ ನೀಡಿಕೆಯು ಗೊಂದಲಮಯವಾಗಿದೆ. ಮೇ 1ರಿಂದ 18ರಿಂದ 44 ವರ್ಷ ವಯೋಮಾನದವರಿಗೆ ನೀಡಬೇಕಿದ್ದ ಲಸಿಕೆಗಳ ತಮ್ಮ ಕೋಟಾವನ್ನೂ ಆ ರಾಜ್ಯಗಳು ಸ್ವೀಕರಿಸುತ್ತಿಲ್ಲ. ಆದರೆ ಲಸಿಕೆ ಕೊರತೆಯ ಬಗ್ಗೆ ಕೂಗೆಬ್ಬಿಸುತ್ತಿವೆ ಎಂದರು.

ಭಾರತ ಬಯೋಟೆಕ್ ತಯಾರಿಕೆಯ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಪ್ರಶ್ನಿಸುತ್ತಿರುವುದಕ್ಕಾಗಿ ರಾಹುಲ್ ಮತ್ತು ಅವರ ಕಾಂಗ್ರೆಸ್ ಸಹೋದ್ಯೋಗಿಗಳ ವಿರುದ್ಧ ಜಾವಡೇಕರ್‌ ದಾಳಿ ನಡೆಸಿದರು.

ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿಯವರಿಗೆ ಕೋವಿಡ್ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಕುಟುಕಿದ್ದ ರಾಹುಲ್, ಲಸಿಕೆಗಳು ಮಾತ್ರ ಕೊರೋನ ವೈರಸ್ ವಿರುದ್ಧ ಶಾಶ್ವತ ಪರಿಹಾರವಾಗಿವೆ ಮತ್ತು ಸೂಕ್ತ ಕಾರ್ಯತಂತ್ರವಿಲ್ಲದಿದ್ದರೆ ಸೋಂಕಿನ ಹಲವಾರು ಅಲೆಗಳು ದೇಶವನ್ನು ಅಪ್ಪಳಿಸಲಿವೆ ಎಂದು ಹೇಳಿದ್ದರು.

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...