ಸಂಸತ್‌ನ 400 ಸಿಬ್ಬಂದಿಗೆ ಕೋವಿಡ್ ಸೋಂಕು

Source: Vb | By I.G. Bhatkali | Published on 10th January 2022, 9:12 AM | National News |

ಹೊಸದಿಲ್ಲಿ: ಬಜೆಟ್ ಅಧಿವೇ ಶನಕ್ಕಿಂತ ಮುನ್ನ ಸಂಸತ್ತಿನ 400ಕ್ಕೂ ಅಧಿಕ ಸಿಬ್ಬಂದಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಅಧಿಕೃತ ಮೂಲಗ ಳು ತಿಳಿಸಿವೆ.

ಜನವರಿ 4ರಿಂದ 8ರವರೆಗೆ ಸಂಸತ್ತಿನ 1,409 ಸಿಬ್ಬಂದಿಯ ಮಾದರಿಯನ್ನು ಜಿನೋಮ್ ಸೀಕ್ವೆನ್ಸ್‌ಗೆ ಕಳುಹಿಸಲಾಗಿತ್ತು. ಅವರಲ್ಲಿ 402 ಮಂದಿ ಸಿಬ್ಬಂದಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಜನವರಿ 4ರಿಂದ 8ರ ವರೆಗೆ 402 ಸಿಬ್ಬಂದಿಯ ವರದಿ ಪಾಸಿಟಿವ್ ಬಂದಿದೆ. ಈಗ ಎಲ್ಲ ಮಾದರಿಗಳನ್ನು ಒಮೈಕ್ರಾನ್ ಪ್ರಭೇದದ ದೃಢೀಕರಣಕ್ಕೆ ಜಿನೋಮ್ ಸೀಕ್ವೆನ್ಸ್ಗೆ ಕಳುಹಿಸಿ ಕೊಡ ಲಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸರಕಾರ ವಿಧಿಸಿದ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಸಿಬ್ಬಂದಿಗೆ ಸಲಹೆ ನೀಡಲಾಗಿದೆ ಎಂದು ಸಂಸತ್ತಿನ ಸಿಬ್ಬಂದಿಯ ಆಂತರಿಕ ಸಂದೇಶ ತಿಳಿಸಿದೆ.

“ಕೋವಿಡ್ ಸೋಂಕಿಗೆ ಒಳಗಾದ ಲೋಕಸಭೆಯ 200, ರಾಜ್ಯ ಸಭೆಯ 69 ಹಾಗೂ 133 ಸಹಾಯಕ ಸಿಬ್ಬಂದಿಯ ಕ್ರೋಡೀಕೃತ ಪಟ್ಟಿ ಮಾಡಲಾಗಿದೆ. ಆದರೆ, ನಾವೆಲ್ಲರೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು” ಎಂದು ಆಂತರಿಕ ಸಂದೇಶ ಹೇಳಿದೆ.

ಸಂಸತ್ತಿನ ಆವರಣದ ಹೊರಗೆ ಯಾರೆಲ್ಲ ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ ಎಂಬು ದನ್ನು ಈ ಪಟ್ಟಿ ಹೇಳಿಲ್ಲ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...