ಮಳೆಗಾಲಕ್ಕೆ ಅಗತ್ಯವಿರುವ ರೈನ್‍ಕೋಟ್,ಛತ್ರಿ ಹಾಗೂ ಚಪ್ಪಲಿ ಮಾರಾಟಕ್ಕೆ ಅನುಮತಿ;ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್.

Source: S.O. News Service | By MV Bhatkal | Published on 6th June 2021, 9:03 PM | Coastal News | Don't Miss |

ಭಟ್ಕಳ: ಸರಕರದ ಹೊಸ ಮಾರ್ಗಸೂಚಿಯಂತೆ ಜಿಲ್ಲಾಧಿಕಾರಿಗಳು ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದು ಅದರಂತೆ ಸೋಮವಾರದಿಂದ ಗುರುವಾರದ ತನಕ ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯ ತನಕ ದಿನಸಿ, ಹಣ್ಣು-ತರಕಾರಿ ಹಾಗೂ ಹಾಲಿನ ಮಾರಾಟದ ಜೊತೆಗೆ ಮಳೆಗಾಲಕ್ಕೆ ಅಗತ್ಯವಿರುವ ರೈನ್‍ಕೋಟ್, ಛತ್ರಿ ಹಾಗೂ ಚಪ್ಪಲಿ ಮಾರಾಟಕ್ಕೆ ಅನುಮತಿಸಲಾಗಿದೆ ಎಂದು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಹೇಳಿದರು.

ಅವರು ಮಿನಿ ವಿಧಾನ ಸೌಧದಲ್ಲಿ ಕರೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. 

ದಿನನಿತ್ಯದ ಎಲ್ಲಾ ಅಗತ್ಯ ವಸ್ತುಗಳು ಹಾಲು ತರಕಾರಿ, ದಿನಸಿ ಛತ್ರಿ, ರೇನ್ ಕೊಟ್ ಮುಂತಾದ ಮಳೆಗಾಲಕ್ಕೆ ಅವಶ್ಯ ಇರುವ ವಸ್ತುಗಳ ಮಾರಾಟ ಮತ್ತು ಎಲ್ಲ ರೀತಿಯ ಅಧಿಕೃತ ಸನದುಗಳಲ್ಲಿ ಮಧ್ಯ / ಬೀಯರ್ ವೈನ್ ಮಾರಾಟಕ್ಕೆ ಕೋವಿಡ್ ಮಾರ್ಗಸೂಚಿಯ ಪಾಲನೆಯೊಂದಿಗೆ ಅವಕಾಶವಿರುತ್ತದೆ.ಮಾರಾಟದ ಸಮಯದಲ್ಲಿ ಸಾಮಾಜಿಕ ಆಂತರ, ಮಾಸ್ ಧರಿಸುವುದು ಮುಂತಾದ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಸ್ಥಳೀಯ ಆಡಳಿತ ಸಂಸ್ಥೆಗಳು ಹಾಗೂ ಪೊಲೀಸ್ ಅಧಿಕಾರಿಗಳು ಖಚಿತಪಡಿಸಿಕೊಳ್ಳತಕ್ಕದ್ದು, ಈ ಅವದಿಯಲ್ಲಿ ನಿಬಂಧಿತ ವಾಹನ ಸಮಚಾರಕ್ಕೆ ಅವಕಾಶ ಇರುವುದಿಲ್ಲ. ಉಳಿದ ದಿನಗಳಲ್ಲಿ ಸಂಪೂರ್ಣ ಲಾಕ್ ಡೌನ್ (ಔಷಧ ಮತ್ತು ಹಾಲು ಮಾರಾಟವನ್ನು ಹೊರತುಪಡಿಸಿ) ಇರುತ್ತದೆ. ಎಲ್ಲ ಖಾಸಗಿ ವಾಹನಗಳ ಸಂಚಾರವನ್ನು( ವೈದ್ಯಕೀಯ ಸೇವೆ ಅತಿ ತುರ್ತು ಸೇವೆಗಳನ್ನು ಹಾಗೂ ಸರಕಾರಿ ನೌಕರರನ್ನು ಅಧಿಕೃತ ಗುರುತಿನ ಚೀಟಿ ಹೊಂದಿರುವವರನ್ನು ಹೊರತು ಪಡಿಸಿ) ಸಂಪೂರ್ಣವಾಗಿ ನಿಷೇಧಿಸಿದೆ.ಎಂದೂ ಹೇಳಿದರು

ವಾಕ್ಸಿನೇಷನ್: 

ಭಟ್ಕಳ ತಾಲೂಕಿಗೆ ವಿಶೇಷವಾಗಿ 45 ವರ್ಷ ಮೇಲ್ಪಟ್ಟವರಿಗಾಗಿಯೇ 5000 ಡೋಸ್ ಲಸಿಕೆಯನ್ನು ನೀಡಲಾಗಿದ್ದು ದಿನಾಂಕ ಜೂ.7ರಿಂದ ಎಲ್ಲಾ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭಾ ಚುನಾಯಿತ ಪ್ರತಿನಿಧಿಗಳಿಗೆ, ಅಂಗಡಿಕಾರರಿಗೆ, ಹಾಲು ಮಾರಾಟ ಮಾಡುವವರಿಗೆ, ಪತ್ರಿಕೆ ಹಂಚುವವರಿಗೆ, ಕ್ಷೌರಿಕರಿಗೆ, ಎನ್.ಜಿ.ಓ. ಗಳಿಗೆ, ಮಾಜಿ ಸೈನಿಕರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ಲಸಿಕೆ ನೀಡುವ ಕಾರ್ಯವನ್ನು ಮಾಡಲಾಗುವುದು.` ಲಸಿಕಾ ಕಾರ್ಯಕ್ರಮವನ್ನು ರಾಬಿತಾ ಹಾಲ್, ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ಸಭಾ ಭವನ, ಸೊನಾರಕೇರಿ, ಶ್ರೀ ನಾಗಯಕ್ಷೆ ಸಭಾ ಭವನ ಮಣ್ಕುಳಿಯಲ್ಲಿ ಲಸಿಕೆ ನೀಡಲಾಗುತ್ತಿದ್ದು ರಾಬಿತಾ ಹಾಲ್‍ನಲ್ಲಿ ವಿಶೇಷವಾಗಿ ವಿದೇಶ ಪ್ರಯಾಣ ಮಾಡುವವರಿಗೆ ಲಸಿಕೆ ಹಾಕಲಾಗುವುದು ಅಧೀಕೃತ ದಾಖಲೆಯೊಂದಿಗೆ ಬಂದು ಲಸಿಕೆ ಪಡೆಯಬಹುದು ಎಂದೂ ಹೇಳಿದರು. 

ಒಂದೇ ಕಡೆಯಲ್ಲಿ ನೂಕು ನುಗ್ಗಲಾಗುವುದನ್ನು ತಡೆಯಲು ಗ್ರಾಮೀಣ ಭಾಗದವರಿಗೆ ಬೈಲೂರು, ಮುರ್ಡೇಶ್ವರ, ಬೆಳಕೆ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರಾಲಿಯಲ್ಲಿ, ತಾಲೂಕಾ ಆಸ್ಪತ್ರೆಯ ವ್ಯಾಪ್ತಿಯವರಿಗೆ ಬಿ.ಸಿ.ಎಂ. ಹಾಸ್ಟೇಲ್‍ನಲ್ಲಿ ಲಸಿಕೆಯನ್ನು ಹಾಕಲಾಗುತ್ತಿದೆ ಎಂದೂ ಹೇಳಿದ ಅವರು ಹೆಚ್ಚಿನ ಕೇಂದ್ರಗಳ ಅಗತ್ಯವಿದ್ದಲ್ಲಿ ಜಾಲಿ, ಮಾವಿನಕುರ್ವೆ ಮತ್ತು ಹೆಬಳೆಗಳಲ್ಲಿ ಉಪಕೇಂದ್ರಗಳನ್ನು ತೆರೆದು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದೂ ಹೇಳಿದರು. 

ಪತ್ರಿಕಾಗೋಷ್ಟಿಯಲ್ಲಿ ತಹಸೀಲ್ದಾರ್ ಎಸ್. ರವಿಚಂದ್ರ, ತಾಲೂಕಾ ಆರೋಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ, ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಚಿಕ್ಕನಮನೆ, ಪುರಸಭಾ ಮುಖ್ಯಾಧಿಕಾರಿ ದೇವರಾಜು ಉಪಸ್ಥಿತರಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...