ಕೋವಿಡ್ ಹಿನ್ನಲೆ: ಹಲ್ಲುನೋವು, ತಲೆನೋವಿಗೆಂದು ಆಸ್ಪತ್ರೆಗೆ ಹೋಗಬೇಡಿ, ತುರ್ತು ಚಿಕಿತ್ಸೆ ಇದ್ದಲ್ಲಿ ಮಾತ್ರ ತೆರೆಳಿಯಿಂದ ಸರಕಾರ

Source: KM News | By I.G. Bhatkali | Published on 16th January 2022, 1:34 PM | Coastal News |

ಕಾರವಾರ: ಕೇವಲ ಅನಾರೋಗ್ಯ ಪೀಡಿತರು ಹಾಗೂ ತುರ್ತು ಚಿಕಿತ್ಸೆ ಅವಶ್ಯಕತೆ ಇರುವವರು ಮಾತ್ರ ಆಸ್ಪತ್ರೆಗಳಿಗೆ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಿಗೆ, ಸ್ವಾಯತ್ತ ಸಂಸ್ಥೆಗಳಿಗೆ ಚಿಕಿತ್ಸೆಗೆ ಬರಬಹುದು. ರೋಗದ ಲಘು ಲಕ್ಷಣ ಇರುವವರು, ಹೊರ ರೋಗಿಗಳಾಗಿ ಚಿಕಿತ ಪಡೆಯಬಲ್ಲವರು, ಚಿಕಿತ್ಸೆಯ ಪಾಲೋ ಅಪ್‌ಗೆ ಬರುವವರು ಹಾಗೂ ವಿಶೇಷವಾಗಿ ದಂತ ಚಿಕಿತ್ಸೆಗೆ ಬರುವವರು ಮುಂದಿನ ಎರಡು ವಾರಗಳ ಕಾಲ ಆಸ್ಪತ್ರೆಗಳಿಗೆ ಬೇಟಿ ನೀಡದಂತೆ ಸರಕಾರ ಆದೇಶ ಮಾಡಿದೆ,

ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ ಕುಮಾರ ಅವರು ಶನಿವಾರ ಸಾರ್ವಜನಿಕ ಪ್ರಕಟನೆಯನ್ನು ಹೊರಡಿಸಿದ್ದು, ರೋಗದ ಲಘು ಲಕ್ಷಣ ಇರುವವರು, ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯಬಲ್ಲವರು, ಚಿಕಿತ್ಸೆಯ ಫಾಲೋ ಆಪ್‌ಗೆ ಬರುವವರು ಹಾಗೂ ವಿಶೇಷವಾಗಿ ದಂತ ಚಿಂತೆಗೆ ಬರುವವರು ಮುಂದಿನ ಎರಡು ವಾರಗಳ ಕಾಲ ಆಸ್ಪತ್ರೆಗಳಿಗೆ ಬೇಟಿ ನೀಡದಂತೆ ಸೂಚಿಸಿರುವುದಲ್ಲದೇ, ಕೋವಿಡ್ ಸೋಂಕು ಹರಡದಂತೆ ತಡೆಯಲು ಹಾಗೂ ಗುಂಪುಗೂಡುವಿಕೆಯನ್ನು ತಡೆಯುವ ದಿಶೆಯಲ್ಲಿ ಮಾಡಲಾಗುವ ಮುಂದಿನ ಆದೇಶದವರೆಗೂ ಆಸ್ಪತ್ರೆಗಳಿಗೆ ಬೇಟಿ ನೀಡದಂತೆ ಸೂಚಿಸಿದ್ದಾರೆ.

ಆಸ್ಪತ್ರೆಗಳಲ್ಲಿ ದಾಖಲಾಗುವ ಹೊರ ರೋಗಿಗಳಲ್ಲಿ ಕೋವಿಡ್ ಹೆಚ್ಚುತ್ತಿರುವ ಕಾರಣದಿಂದಾಗಿ ಆಸ್ಪತ್ರೆಗಳಿಗೆ ದಾಖಲಾಗಲು ಕರ್ನಾಟಕ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ, ಇದು ಮುಂದಿನ ಎರಡು ವಾರಗಳಿಗೆ ಅನ್ವಯವಾಗಲಿದೆ. ತುರ್ತು ಆರೈಕೆ, ಚಿಕಿತ್ಸೆ ಅಗತ್ಯವಿದ್ದರಷ್ಟೆ ಆಸ್ಪತ್ರೆಗಳಿಗೆ ತೆರಳಬೇಕು. ಸೌಮ್ಯ ಲಕ್ಷಣಗಳಿದದ್ದರೆ 
ಆಸ್ಪತ್ರೆಗಳಿಗೆ ಭೇಟಿ ನೀಡದಂತೆ ಸಲಹೆ ನೀಡಲಾಗಿದೆ. ಆಸ್ಪತ್ರೆಗಳಲ್ಲಿ ಜನದಟ್ಟಣೆ ತಪ್ಪಿಸಲು ರಾಜ್ಯ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಯವರು ಕೂಡ ಸೋಂಕು ಹರಡದಂತೆ ತಡೆಯಲು ಹಾಗೂ ಗುಂಪುಗೂಡುವಿಕೆಯನ್ನು ಡೆಯುವ ದಿಶೆಯಲ್ಲಿ ಇದೇ ಮಾದರಿಯಲ್ಲಿ ಕ್ರಮ ಜರುಗಿಸುವಂತೆ ಅವರು ಸೂಚಿಸಿದ್ದಾರೆ.

Read These Next

ಶಿರಸಿ: ಅರಣ್ಯ ಭೂಮಿ ಹಕ್ಕು ; ಜುಲೈಯಲ್ಲಿ ಸುಫ್ರೀಂ ಕೋರ್ಟ ತೀರ್ಮಾನ- ನಿರ್ಣಾಯಕ. ಸರಕಾರದ ಪ್ರಮಾಣ ಪತ್ರದ ಮೇಲೆ ಅರಣ್ಯವಾಸಿಗಳ ಭವಿಷ್ಯ.

ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಪಲ್ಯದಿಂದ ಭೂಮಿ ಹಕ್ಕಿನಿಂದ ವಂಚಿತರಾಗಿರುವ ಅರಣ್ಯವಾಸಿಗಳ ರಕ್ಷಣೆಗೆ ರಾಜ್ಯ ಸರಕಾರ ...

ಕಾರವಾರ: ಮೀನು ಪಾಶುವಾರು ಹಕ್ಕನ್ನು ಗುತ್ತಿಗೆ ಮೂಲಕ ವಿಲೇವಾರಿ; ಜೂ 4 ರೊಳಗೆ ಅರ್ಜಿ ಸಲ್ಲಿಕೆಗೆ ಅಹ್ವಾನ್

ತಾಲೂಕಿನ ಅರ್ಥಲಾವ್ ಕೆರೆ, ಹಣಕೋಣ ಕೆರೆ, ಹಾಗೂ  ಕಾಳಿ ನದಿ ಭಾಗದ ಮಾಡಸಾಯಿ, ಸಾವಂತವಾಡಾ, ಕಿನ್ನರ ,  ನಂದನಗದ್ದಾ, ಸದಾಶಿವಗಡ ಸೇರಿದಂತೆ ...

ಭಟ್ಕಳ: ಬಿಜೆಪಿಯಿಂದ ಎನ್‌ಇಪಿ ಮೂಲಕ ನಾಗ್ಪುರ್ ಗುಪ್ತ ಕಾರ್ಯಸೂಚಿ: ಬಿ.ಕೆ.ಹರಿಪ್ರಸಾದ್

ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜ್ಯವನ್ನೂ ಅದರಲ್ಲೂ ಕರಾವಳಿಯನ್ನು ಕೇಸರೀಕರಣ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು, ...