ಕಾರವಾರ: ಕೋವಿಡ್-19 ಲಸಿಕೆಯ ಪ್ರಯೊಗದ ಅಣಕು ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ ಕೆ. ಅವರು ಶುಕ್ರವಾರ ಕಾರವಾರದಲ್ಲಿ ಚಾಲನೆ ನಿಡಿದರು.
ಕಾರವಾರದ ಜಿಲ್ಲಾ ಆಸ್ಪತ್ರೆ (ಕಿಮ್ಸ್)ಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹೂವಿನ ಗಿಡಕ್ಕೆ ನೀರುಣಿಸುವ ಮೂಲಕ ಲಸಿಕಾಕರಣದ ಅಣಕು ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನಿಡಿದರು.
ಚಾಲನೆ ಬಳಿಕ ಮಾತನಾಡಿದ ಅವರು ಕೋವಿಡ್-19 ಲಸಿಕೆಯನ್ನು ಹಂತ ಹಂತವಾಗಿ ನೀಡಿ ಪೋಲಿಯೊ ಮುಕ್ತ ಭಾರತ ಮಾಡಿದಂತೆ ಕರೋನಾ ಮುಕ್ತ ಭಾರತ ಮಾಡುವ ಗುರಿಯನ್ನು ಹೊಂದಲಾಗಿದೆ.
ಮೊದಲನೆಯ ಹಂತದಲ್ಲಿ ಆರೋಗ್ಯ ಕಾರ್ಯರ್ತರು ಮತ್ತು ವೈದ್ಯಾಧಿಕಾರಿಗಳಿಗೆ ಲಸಿಕೆ ನೀಡಲಾಗುವುದು. ಈ ಹಿನ್ನಲೆಯಲ್ಲಿ ಜಿಲ್ಲೆಯ 6 ಆರೋಗ್ಯ ಕೇಂದ್ರಗಳಲ್ಲಿ ಇಂದು ಲಸಿಕಾ ತಾಲೀಮು ನಡೆಸಲಾಗುತ್ತಿದೆ ಎಂದರು.
ನಂತರ ಲಸಿಕೆ ನಿಡಲು ಸ್ಥಾಪಿಸಲಾಗಿರುವ ಪ್ರವೇಶ ಮತ್ತು ನೊಂದಣಿ ಕೊಠಡಿ, ಲಸಿಕಾ ಕೊಠಡಿ ಮತ್ತು ನಿಗಾ ಕೊಠಡಿಗಳನ್ನು ಪರೀಶಿಲಿಸಿದರು. ಅಲ್ಲದೇ ಕೋವಿಡ್ ಸಾಫ್ಟವೇರ್ನಲ್ಲಿ ನೊಂದಣಿ ಮಾಡುವ ಕ್ರಮ ಲಸಿಕೆಯ ಸಂಗ್ರಹ, ಸಾಗಣೆ ಸೇರಿದಂತೆ ಇತರೆ ಸಿದ್ಧತೆಗಳನ್ನು ಮಾಡಿಕೊಂಡಿರುವ ತಾಲಿಮು ಕಾರ್ಯವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ , ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರಿ ಚಂದರಗಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಶರದ್ ನಾಯಕ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಿವಾನಂದ ಕುಡ್ತಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.