'ಸರಕಾರಿ ತಾಲಿಬಾನ್ ಕೈಯಲ್ಲಿ ದೇಶ: ಟಿಕಾಯತ್ 'ಬಿಜೆಪಿ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ'

Source: VB News | By I.G. Bhatkali | Published on 30th August 2021, 1:56 PM | National News |

ಹೊಸದಿಲ್ಲಿ: ಹರ್ಯಾಣದ ಕರ್ನಾಲ್‌ನಲ್ಲಿ ಶನಿವಾರ ರೈತರ ಮೇಲೆ ಪೊಲೀಸರ ಲಾಠಿಪ್ರಹಾರಕ್ಕೆ ರವಿವಾರ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ಅವರು, ರೈತರ ತಲೆಗಳನ್ನು ಒಡೆಯುವಂತೆ ಆದೇಶಿಸುವ ಸರಕಾರಿ ತಾಲಿಬಾನ್‌ಗಳು ದೇಶವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯು ಭಾರತೀಯ ರಾಷ್ಟ್ರಧ್ವಜವನ್ನು ಗೌರವಿಸುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ.

ಸುದ್ದಿಸಂಸ್ಥೆಯು ಹಂಚಿಕೊಂಡಿರುವ ವೀಡಿಯೊವೊಂದರಲ್ಲಿ ಟಿಕಾಯತ್, ಸರಕಾರಿ ತಾಲಿಬಾನ್‌ಗಳು ದೇಶವನ್ನು ವಶಪಡಿಸಿಕೊಂಡಿದ್ದಾರೆ. ಅವರ ಕಮಾಂಡರ್‌ಗಳು ಈ ದೇಶದಲ್ಲಿದ್ದಾರೆ. ಈ ಕಮಾಂಡರ್‌ಗಳನ್ನು ಗುರುತಿಸಬೇಕಿದೆ. ರೈತರ ತಲೆ ಒಡೆಯಲು ಆದೇಶಿಸಿದ್ದ ವ್ಯಕ್ತಿ ಈ ಕಮಾಂಡರ್ ಗಳಲ್ಲಿ ಒಬ್ಬನಾಗಿದ್ದಾನೆ ಎಂದಿದ್ದಾರೆ. ಶನಿವಾರ ವೈರಲ್ ಆಗಿದ್ದ ವೀಡಿಯೊವನ್ನು ಪ್ರಸ್ತಾಪಿಸಿ ಟಿಕಾಯತ್ ಮಾತನಾಡುತ್ತಿದ್ದರು. 'ರೈತರ ತಲೆಗಳನ್ನು ಒಡೆಯಿರಿ' ಎಂದು ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಅವರು ಈ ವೀಡಿಯೊದಲ್ಲಿ ಪೊಲೀಸರಿಗೆ ಆದೇಶಿಸಿದ್ದರು.

ಇತ್ತೀಚೆಗೆ ಒಬ್ಬರು(ಕಲ್ಯಾಣ ಸಿಂಗ್) ನಿಧನರಾದಾಗ ಬಿಜೆಪಿಯವರು ರಾಷ್ಟ್ರಧ್ವಜದ ಮೇಲೆ ಬಿಜೆಪಿ ಧ್ವಜವನ್ನು ಹೊದಿಸಿದ್ದರು. ಇದು ರಾಷ್ಟ್ರಧ್ವಜಕ್ಕೆ ಮಾಡಿರುವ ಅವಮಾನವಾಗಿದೆ. ಅವರು ರಾಷ್ಟ್ರಧ್ವಜವನ್ನೂ ಲೆಕ್ಕಿಸುವುದಿಲ್ಲ ಎಂದು ಟಿಕಾಯತ್ ಹೇಳಿದ್ದಾರೆ. ಶನಿವಾರ ಹರ್ಯಾಣ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್ ಪಾಲ್ಗೊಂಡಿದ್ದ ಬಿಜೆಪಿ ಸಭೆಯನ್ನು ಪ್ರತಿಭಟಿಸಲು ಕರ್ನಾಲ್‌ಗೆ ತೆರಳುತ್ತಿದ್ದ ರೈತರ ಮೇಲೆ ಬಸ್ತಾರಾ ಟೋಲ್ ಪ್ಲಾಝಾದ ಬಳಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಘಟನೆಯಲ್ಲಿ ಕನಿಷ್ಠ 10 ರೈತರು ಗಾಯಗೊಂಡಿದ್ದರು. ಟೀಟ್‌ವೊಂದರಲ್ಲಿ ಖಟ್ಟರ್ ಅವರನ್ನು ಜಲಿಯನ್‌ವಾಲಾಬಾಗ್ ನಲ್ಲಿ ಜನರ ಹತ್ಯೆಗೆ ಆದೇಶಿಸಿದ್ದ ಬ್ರಿಟಿಷ್ ಜನರಲ್ ಡೈಯರ್‌ಗೆ ಹೋಲಿ ಸಿರುವ ಟಿಕಾಯತ್, ರೈತರ ಮೇಲೆ ಹರ್ಯಾಣ ಪೊಲೀಸರ ದೌರ್ಜನ್ಯವನ್ನು ಸಹಿಸಲು ಸಾಧ್ಯವಿಲ್ಲ. ರೈತರು ಇವೆಲ್ಲವನ್ನು ಮರೆಯುವುದಿಲ್ಲ 'ಎಂದೂ ಹೇಳಿದ್ದಾರೆ.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...