ಭಟ್ಕಳದ 11ಮಂದಿ ಸೇರಿ ಜಿಲ್ಲೆಯಲ್ಲಿ 23ಮಂದಿಗೆ ಕೊರೋನಾ ಪಾಸಿಟಿವ್

Source: so news | Published on 1st July 2020, 6:43 PM | Coastal News | Don't Miss |

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೋನಾ ರಣಕೇಕೆ ಆರಂಭವಾಗಿದೆ. ಆರಂಭದ‌ ದಿನದಲ್ಲಿ ಜಿಲ್ಲೆಯ ಭಟ್ಕಳದಲ್ಲಷ್ಟೆ ಕಾಣಿಸಿಕೊಂಡ‌ ಕೊರೋನಾ ಸೋಂಕು ಇದೀಗ ಜಿಲ್ಲೆಯ ತುಂಬಾ ತನ್ನ ಕದಂಬ ಬಾಹು ಚಾಚಿದೆ. ಒಂದು ಒಂದೆ ದಿನ ಜಿಲ್ಲೆಯಲ್ಲಿ 23 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ಜಿಲ್ಲೆಯ ಜನತೆಯ ಆತಂಕಕ್ಕೆ ಕಾರಣವಾಗತ್ತಾ ಇದೆ.
ಭಟ್ಕಳ ತಾಲೂಕು ಒಂದರಲ್ಲೆ 11ಜನರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಅಂಕೋಲಾದಲ್ಲಿ 5, ಕುಮಟ 6, ಕಾರವಾರದಲ್ಲಿ ಓರ್ವರಿಗೆ ಸೋಂಕು ದೃಢಪಟ್ಟಿದೆ.
ಇನ್ನೂ ಜೂನ್ 25ರಂದು ಭಟ್ಕಳದಲ್ಲಿ ನಡೆದ ಮದುವೆಗೆ ಹೋಗಿದ್ದ 10ಮಂದಿಗೆ ಸೋಂಕು ಕಾಣಿಸಿಕೊಳ್ಳುವ ಮೂಲಕ‌ ಜನತೆಯನ್ನ ಬೆಚ್ಚಿ ಬಿಳಿಸಿದೆ.‌ ಭಟ್ಕಳದ ಯುವತಿಯನ್ನ ವಿವಾಹವಾದ 26 ವರ್ಷದ ಯುವಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಈತನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಇನ್ನೂ ಈತನ ಮದುವೆಗೆ ಹೋದ ಹೆಚ್ಚಿನವರಲ್ಲಿ ಇದೀಗ ಸೋಂಕು ಕಾಣಿಸಿಕೊಂಡಿದೆ.ಇನ್ನೂ ಅಂಕೋಲಾ ತಾಲೂಕಿನ ಪೇಷೇಂಟ್ ನಂಬರ್ 10648ರ ಸಂಪರ್ಕದಿಂದ 5 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ನಿನ್ನೆಯವರೆಗೆ 253ಇದ್ದ ಸೋಂಕಿತರ ಸಂಖ್ಯೆ ಇಂದಿನ 23ಸೇರಿ ಸೋಂಕಿತರ ಸಂಖ್ಯೆ 276ಏರಿಕೆ ಆಗಿದೆ

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...