ಭಟ್ಕಳ ತಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸೇರಿದಂತೆ 45 ಮಂದಿಯಲ್ಲಿ ಕೊರೋನ ಸೋಂಕು ಪತ್ತೆ

Source: sonews | By Staff Correspondent | Published on 6th July 2020, 5:00 PM | Coastal News | Don't Miss |

•    ಮಧ್ಯಾಹ್ನ 2ಗಂಟೆಯಿಂದ ಬೆಳಿಗ್ಗೆ 6ಗಂಟೆವರೆಗೆ ಲಾಕ್ಡೌನ್ ಆದೇಶ
•    15ದಿನಗಳ ಸ್ವಯಂ ಪ್ರೇರಿತ ಲಾಕ್ಡೌನ್ ಮಾಡುವಂತೆ ವಾಟ್ಸಪ್ ಅಭಿಯಾನ

ಭಟ್ಕಳ: ಉತ್ತರಕನ್ನಡ ಜಿಲ್ಲಾದ್ಯಂತ ಕೊರೋನ ಸೋಂಕಿನ ಆತಂಕ ಹೆಚ್ಚಾಗುತ್ತಲೆ ಇದ್ದು ಸೋಮವಾರ 80ಕ್ಕೂ ಹೆಚ್ಚು ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದ್ದು ಭಟ್ಕಳ ನಗರವೊಂದರಲ್ಲೇ 45 ಮಂದಿಗೆ ಸೊಂಕು ಇರುವುದು ದೃಢಪಟ್ಟಿದೆ. 

ಭಟ್ಕಳದಲ್ಲಿ ಇದುವರೆಗೆ 177 ಮಂದಿ ಈ ಕೊರೋನಾ ಸೋಂಕಿನೊಂದಿಗೆ ಸೆಣಸಾಡಿದ್ದು 55ಮಂದಿ ಕೊರೋನಾವನ್ನು ಜಯಿಸಿದ್ದರೆ, ಇನ್ನೂ 122 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಸೋಮವಾರ ದೃಢಪಟ್ಟ ಸೋಂಕಿತರ ಪೈಕಿ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ, ಖಾಸಗಿ ಆಸ್ಪತ್ರೆ ಹಾಗೂ ಖಾಸಗಿ ಪರೀಕ್ಷಾ ಲ್ಯಾಬ್ ಸಿಬ್ಬಂದಿಯೂ ಇರುವುದು ಭಟ್ಕಳದ ಜನರಲ್ಲಿ ಆತಂಕವನ್ನು ಮೂಡಲು ಕಾರಣವಾಗಿದೆ. ಒಟ್ಟು 11 ಮಹಿಳೆಯರು, ಓರ್ವ ಯುವತಿ, ಓರ್ವ ಬಾಲಕಿ, 19 ಪುರುಷರಿಗೆ, 7 ಯುವಕರಿಗೆ, ಆರು ಬಾಲಕರಿಗೆ ಸೋಂಕು ದೃಢಪಟ್ಟಿದೆ.

ಮದ್ಯಾಹ್ನ 2ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಲಾಕ್ಡೌನ್: ಭಟ್ಕಳ ಪುರಸಭೆ, ಜಾಲಿ ಪ.ಪಂ ಹಾಗೂ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ತಕ್ಷಣವೇ ಜಾರಿಗೆ ಬರುವಂತೆ ಮಧ್ಯಾಹ್ನ 2ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ಸಂಪೂರ್ಣ ಲಾಕ್ಡೌನ್ ವಿಧಿಸಲಾಗಿದೆ ಎಂದು ಭಟ್ಕಳ ಸಹಾಯಕ ಆಯುಕ್ತ ಭರತ್ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದು ವೈದ್ಯಕೀಯ ಕಾರಣ ಹೊರತು ಪಡಿಸಿ ಬೇರೆ ಯಾವುದೇ ಕಾರಣಕ್ಕೂ ಸಾರ್ವಜನಿಕರು ಹೊರಗಡೆ ಬರದಂತೆ ನಿರ್ಬಂಧವನ್ನು ಹೇರಲಾಗಿದೆ ಎಂದು ತಿಳಿಸಿದ್ದಾರೆ. 

ಸಂಪೂರ್ಣ ಲಾಕ್ಡೌನ್ ಗಾಗಿ ಸಾರ್ವಜನಿಕರಿಂದ ವಾಟ್ಸಪ್ ಅಭಿಯಾನ: ಭಟ್ಕಳದಲ್ಲಿ ದಿನೆ ದಿನೆ ಹೆಚ್ಚುತ್ತಿರುವ ಕೊರೊನಾ ಪ್ರಕರಣವನ್ನು ನಿಯಂತ್ರಸುವ ಕುರಿತಂತೆ ಸಾರ್ವಜನಿಕರಿಂದ ಜಿಲ್ಲಾ ಹಾಗೂ ತಾಲೂಕಾಡಳಿತದ ಮೇಲೆ ಒತ್ತಡಗಳು ಹೆಚ್ಚುತ್ತಿದ್ದು ಈ ನಿಟ್ಟಿನಲ್ಲಿ ಮುಂದಿನ 15ದಿನಗಳ ಕಾಲ ಭಟ್ಕಳ ನಗರ ಸಂಪೂರ್ಣ ಲಾಕ್ಡೌನ್ ಗಾಗಿ ವಾಟ್ಸಪ್ ಅಭಿಯಾನವೊಂದು ಆರಂಭಿಸಲಾಗಿದೆ. 

ಭಟ್ಕಳದಲ್ಲಿ ಕರೋನಾ ರೋಗ ಅಟ್ಟಹಾಸ ಮೆರೆದಿದ್ದು,  ಒಬ್ಬರಿಂದ ಒಬ್ಬರಿಗೆ ತೀವ್ರ ಸ್ವರೂಪದಲ್ಲಿ ಹರಡರಿವುದು ಹಾಗೂ ಹರಡುತ್ತಿರುವುದು ಈಗಾಗಲೇ ಮೇಲ್ನೋಟಕ್ಕೆ ಗಮನಕ್ಕೆ ಬಂದಿರುತ್ತದೆ. 

ಭಟ್ಕಳದ ಜವಾಬ್ದಾರಿಯುತ ನಾಗರಿಕರು ಎಚ್ಚೆತ್ತು, ಮುಂದಿನ ಹದಿನೈದು ದಿನಗಳವರೆಗೆ ಸ್ವಯಂಪ್ರೇರಿತ ಲಾಕ್ ಡೌನ್ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಪ್ರತಿಯೊಂದು ಮನೆಗಳಲ್ಲಿ ಒಂದೊಂದು ಕರೊನಾ ಪಾಸಿಟಿವ್ ಕೇಸ್ ಬಂದು, ಮನೆಯಲ್ಲಿರುವ ಎಲ್ಲರೂ ಹೋಮ್ ಕ್ವಾರಂಟೈನ್ ಆಗುವ ಪರಿಸ್ಥಿತಿ ಬರುವುದರಲ್ಲಿ ಸಂದೇಹವಿಲ್ಲ. 

ಈ ರೀತಿ ಭಯಪಡುವ ವಾತಾವರಣ ನಿರ್ಮಾಣವಾಗುವ ಮೊದಲೇ ಪಕ್ಷಭೇದ, ಧರ್ಮಭೇದ ಮರೆತು ನಾವೆಲ್ಲರೂ ಒಂದಾಗಿ ಭಟ್ಕಳವನ್ನು ಮುಂದಿನ 15 ದಿನಗಳವರೆಗೆ ಸಂಪೂರ್ಣವಾಗಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಮಾಡುವಂತೆ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತಕ್ಕೆ ಶಿಪಾರಸ್ಸು ಮಾಡುವುದರ ಮೂಲಕ ನಮ್ಮೆಲ್ಲರ ರಕ್ಷಣೆಗೆ ಮುಂದಾಗುವುದು ತುಂಬಾ ಅನಿವಾರ್ಯವಾಗಿದೆ.

ದಯವಿಟ್ಟು, ಇದರ ಗಂಭೀರತೆಯನ್ನು ಅರಿತು ಸಹ ನಮ್ಮಲ್ಲೇ ಕೊರಗುವುದಕ್ಕಿಂತ, ನಮ್ಮ ಒಂದು ಪ್ರಯತ್ನದ ಮೂಲಕ ಈ ರೋಗವನ್ನು ಭಟ್ಕಳದಲ್ಲಿ ಹೆಚ್ಚು ಜನರಿಗೆ ಹರಡದಂತೆ ಆದಷ್ಟು ನಿಯಂತ್ರಣಕ್ಕೆ ತರಲು "ಮುಂದಿನ ಹದಿನೈದು ದಿನಗಳವರೆಗೆ ಭಟ್ಕಳ ಸಂಪೂರ್ಣ ಲಾಕ್ ಡೌನ್" ಎಂಬ ಅಭಿಯಾನ ಮಾಡುವ ಮೂಲಕ ನಮ್ಮ ರಕ್ಷಣೆಗೆ ನಾವೇ ಇಳಿಯೋಣ.

ಬನ್ನಿ ಎಲ್ಲರೂ ಸೇರಿ ತಮ್ಮ ತಮ್ಮ ವಯಕ್ತಿಕ ಹಾಗೂ ಸಾಂಘಿಕ ಪ್ರಯತ್ನದ ಮೂಲಕ ಭಟ್ಕಳವನ್ನು ಮುಂದಿನ 15 ದಿನಗಳವರೆಗೆ ಲಾಕ್ ಡೌನ್ ಮಾಡಿ ಶಂಕಿತ ರೋಗಿಗಳ ರಾಂಡಮ್ ಟೆಸ್ಟ್ ಮಾಡಿಸುವಂತೆ  ಜಿಲ್ಲಾಡಳಿತಕ್ಕೆ, ತಾಲೂಕಾಡಳಿತಕ್ಕೆ, ಮಾನ್ಯ ಶಾಸಕರಿಗೆ, ಮಾನ್ಯ ಉಸ್ತುವಾರಿ ಸಚಿವರಿಗೆ ಎಲ್ಲಾ ಮಟ್ಟದಲ್ಲೂ ಶಿಪಾರಸ್ಸು ಮಾಡಿ ಯಶಸ್ವಿ ಲಾಕ್ ಡೌನ್ ಮಾಡಿಸುವ ಮೂಲಕ ಜವಾಬ್ದಾರಿಯುತ ನಾಗರಿಕರಾದ ನಾವು ನಮ್ಮ ನಮ್ಮ ಕರ್ತವ್ಯವನ್ನು ಮಾಡೋಣ ಎಂದು ವಾಟ್ಸಪ್ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದೆ.  

 

Read These Next

‘ರಾಜ್ಯ ಮಟ್ಟದ ಜನ ಸಂಘಟನೆಗಳ ಪರ್ಯಾಯ ಜನತಾ ಅಧಿವೇಶನ’ದಲ್ಲಿ ಶಿರಸಿ ರವೀಂದ್ರ ನಾಯ್ಕ ರಿಂದ ವಿಷಯ ಮಂಡನೆ

ಶಿರಸಿ: ರಾಜ್ಯದ ಹಲವಾರು ಜನಪರ ಸಂಘಟನೆಗಳ ಒಕ್ಕೂಟ ಆಶ್ರಯದಲ್ಲಿ ಬೆಂಗಳೂರಿನ ಪ್ರೀಡಂಪಾರ್ಕ ಆವರಣದಲ್ಲಿ ಜರಗುತ್ತಿರುವ 2 ನೇ ದಿನದ ...