ಕೊರೊನಾ ವೈರಸ್‌ ಸೋಂಕು: 24 ಗಂಟೆಗಳಲ್ಲಿ 6,473 ಮಂದಿ ಗುಣಮುಖ

Source: uni | Published on 12th August 2020, 12:35 AM | State News | Don't Miss |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್‌–19 ದೃಢಪಟ್ಟ 6,257 ಹೊಸ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 6,473 ಮಂದಿ ಗುಣಮುಖರಾಗಿದ್ದಾರೆ ಹಾಗೂ 86 ಮಂದಿ ಸಾವಿ‌ಗೀಡಾಗಿದ್ದಾರೆ.
ಒಟ್ಟು 1,88,611 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 1,05,599 ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 79,606 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನಿಂದ ಈವರೆಗೂ 3,398 ಜನ ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ 1,610 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, 17 ಜನ ಮೃತಪಟ್ಟಿದ್ದಾರೆ. 1508 ಮಂದಿ ಗುಣಮುಖರಾಗಿದ್ದಾರೆ ಹಾಗೂ 33,070 ಸಕ್ರಿಯ ಪ್ರಕರಣಗಳಿವೆ.
ಬಳ್ಳಾರಿಯಲ್ಲಿ 736 ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 4 ಮಂದಿ ಮೃತಪಟ್ಟಿದ್ದಾರೆ. ಬೆಳಗಾವಿಯಲ್ಲಿ 575 ಹೊಸ ಪ್ರಕರಣಗಳು, 4 ಮಂದಿ ಸಾವಿಗೀಡಾಗಿದ್ದಾರೆ. ಧಾರವಾಡದಲ್ಲಿ 276 ಪ್ರಕರಣಗಳು, 9 ಜನ ಸಾವು; ದಕ್ಷಿಣ ಕನ್ನಡದಲ್ಲಿ 243 ಪ್ರಕರಣಗಳು, 9 ಮಂದಿ ಸಾವು; ಮೈಸೂರಿನಲ್ಲಿ 238 ಪ್ರಕರಣಗಳು, 11 ಮಂದಿ ಸಾವು; ಉಡುಪಿಯಲ್ಲಿ 219 ಪ್ರಕರಣಗಳು ಹಾಗೂ ರಾಯಚೂರಿನಲ್ಲಿ 201 ಕೋವಿಡ್‌ ಪ್ರಕರಣಗಳು ದಾಖಲಾಗಿವೆ

Read These Next

ಸಪ್ಟೆಂಬರ್ 28 ರಂದು ಕರ್ನಾಟಕ ಬಂದ್ ಹಿನ್ನೆಲೆ. ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 29 ಕ್ಕೆ.

ಬೆಂಗಳೂರು : ಸಪ್ಟೆಂಬರ್ 28 ರಂದು ನಡೆಯುವ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದೂಡಿದೆ.

ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಭಾರತವನ್ನು ಎಷ್ಟು ಸಮಯ ಹೊರಗಿಡುತ್ತೀರಿ: ಪ್ರಧಾನಿ ಮೋದಿ

ವಿಶ್ವಸಂಸ್ಥೆಯ ನಿರ್ಧಾರ ತೆಗೆದುಕೊಳ್ಳುವ ರಚನೆಗಳಿಂದ ಭಾರತವನ್ನು ಎಷ್ಟು ಸಮಯ ಹೊರಗಿಡುತ್ತೀರಿ: ಪ್ರಧಾನಿ ಮೋದಿ