ಹೊಸದಿಲ್ಲಿ: ಮತ್ತೆ ಭಾರತಕ್ಕೆ ಕೊರೋನ ಆತರಿಕ ಕಳೆದೆರಡು ತಿಂಗಳುಗಳ ಬಳಿಕ ಸೋಂಕು ಪ್ರಕರಣದಲ್ಲಿ ಗರಿಷ್ಠ ಏರಿಕೆ

Source: VB | By S O News | Published on 23rd February 2021, 8:21 PM | National News |

ಹೊಸದಿಲ್ಲಿ: ನವೆಂಬರ್ ಅಂತ್ಯದ ಬಳಿಕ ಇದೇ ಮೊದಲ ಬಾರಿಗೆ ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಪ್ರಮಾಣ ಹಠಾತ್ ಹೆಚ್ಚಳವಾಗಿದ್ದು ಸೋಮವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳಲ್ಲಿ 14,199 ಒಟ್ಟು ಪ್ರಕರಣ(ಇದರಲ್ಲಿ 4,421 ಸಕ್ರಿಯ ಪ್ರಕರಣ) ಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸೋಮವಾರ ಮಾಹಿತಿ ನೀಡಿದೆ.

ಕಳೆದ 5 ದಿನಗಳಲ್ಲಿ 13,506 ಹೊಸ ಪ್ರಕರಣಗಳು ದಾಖಲಾಗಿವೆ. 2 ವಾರದ ಹಿಂದೆ ದೈನಂದಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 157ಕ್ಕೆ ಇಳಿದಿತ್ತು. ಅಲ್ಲದೆ ಒಟ್ಟು ಹೊಸ ಪ್ರಕರಣಗಳ ಪ್ರಮಾಣವೂ ತೀವ್ರಗತಿಯಲ್ಲಿ ಹೆಚ್ಚಿದ್ದು ಫೆಬ್ರವರಿ 16ರ ಬಳಿಕದ 7 ದಿನಗಳಲ್ಲಿ 13.8 ಶೇ, ಹೆಚ್ಚಳವಾಗಿದೆ ಎಂದು ಇಲಾಖ ಹೇಳಿದೆ.

ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸ್ ಗಡ ಮತ್ತು ಮಧ್ಯಪ್ರದೇಶದಲ್ಲಿ ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿರುವುದರಿಂದ ದೇಶದ ಒಟ್ಟು ಸೋಂಕು ಪ್ರಕರಣದಲ್ಲಿ ಭಾರೀ ಹೆಚ್ಚಳವಾಗಿದೆ. ಪ್ರಸರಣ ಸರಪಳಿ ಕಡಿಯಲು ಮತ್ತು ಕೊರೋನ ಸೋಂಕನ್ನು ನಿಯಂತ್ರಿಸಲು ಕೊರೋನ ವಿರುದ್ಧದ ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೇಂದ್ರ ಸರಕಾರ ಈ ಐದೂ ರಾಜ್ಯಗಳಿಗೆ ಸೂಚಿಸಿದೆ.

ದೇಶದಲ್ಲಿರುವ ಸಕ್ರಿಯ ಪ್ರಕರಣಗಳಲ್ಲಿ 74 ಶೇ.ಕ್ಕೂ ಹೆಚ್ಚು ಕೇರಳ ಮತ್ತು ಮಹಾರಾಷ್ಟ್ರದಲ್ಲಿದೆ. ಛತ್ತೀಸ್ಗಡ, ಮಧ್ಯಪ್ರದೇಶ, ಪಂಜಾಬ್, ಜಮ್ಮು-ಕಾಶ್ಮೀರದಲ್ಲೂ ದೈನಂದಿನ ಹೊಸ ಸೋಂಕು ಪ್ರಕರಣ ಹೆಚ್ಚಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ಮಹಾರಾಷ್ಟ್ರದಲ್ಲಿ ಸೋಮವಾರ ಬೆಳಗ್ಗಿನವರೆಗಿನ 24 ಗಂಟೆಗಳ ಅವಧಿಯಲ್ಲಿ 6,971 ಹೊಸ ಪ್ರಕರಣಗಳು ದಾಖಲಾಗಿದ್ದು, ಕಳೆದ ಅಕ್ಟೋಬರ್ 24ರಂದು ದಾಖಲಾದ 7,347 ಪ್ರಕರಣಗಳ ಬಳಿಕದ ಅತ್ಯಧಿಕ ಪ್ರಮಾಣ ಇದಾಗಿದೆ. ಕೇರಳದಲ್ಲಿ ಸೋಮವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಗಳಲ್ಲಿ 4,070 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಪಂಜಾಬ್‌ನಲ್ಲಿ ಕಳೆದ 4 ವಾರಗಳಿಗೆ ಹೋಲಿಸಿದರೆ ವಾರದ ಪಾಸಿಟಿವಿಟಿ ದರ 1.4 ಶೇ.ದಿಂದ 1.6 ಶೇಕ್ಷೆ ಹೆಚ್ಚಿದೆ. ಜನತೆ ಮಾಸ್ಕ್ ಧರಿಸದೆ ಇರುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷಿತ ಅಂತರದ ನಿಯಮ ಮರೆತಿರುವುದು ಕೊರೋನ ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಲು ಕಾರಣ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ದೇಶದಲ್ಲಿ ಕೊರೋನದ 240 ಹೊಸ ವೈರಸ್ ಲಕ್ಷಣ ಪತ್ತೆಯಾಗಿರುವುದು ಕೊರೋನ ಸೋಂಕು ಪ್ರಕರಣ ಏಕಾಏಕಿ ಹೆಚ್ಚಲು ಕಾರಣವಾಗಿರಬಹುದು ಎಂದು ಮಹಾರಾಷ್ಟ್ರ ಕೋವಿಡ್ ಕ್ರಿಯಾಪಡೆಯ ಸದಸ್ಯ ಡಾ.ಶಶಾಂಕ್  ಜೋಷಿ ಹೇಳಿದ್ದಾರೆ. ದೇಶದಲ್ಲಿ ಸಮೂಹ ಪ್ರತಿರಕ್ಷೆ (ಜನಸಮೂಹದಲ್ಲಿ ರೋಗನಿರೋಧಕ ಶಕ್ತಿ ರೂಪುಗೊಳ್ಳುವ ಪ್ರಕ್ರಿಯೆ) ಸಾಧಿಸುವ ಉದ್ದೇಶದಿಂದ ಕೊರೋನ ಲಸಿಕೆ ಹಾಕುವ ಪ್ರಕ್ರಿಯೆಗೆ ಕಳೆದ ತಿಂಗಳು ಚಾಲನೆ ನೀಡಲಾಗಿದೆ. ಆದರೆ ದೇಶದ ಕನಿಷ್ಠ 80 ಶೇ. ಜನರಿಗೆ 2 ಡೋಸ್  ಲಸಿಕೆ ಲಭ್ಯವಾಗದೆ ಸಮೂಹ ಪ್ರತಿರಕ್ಷೆ ಪರಿಕಲ್ಪನೆ ಸಾಕಾರವಾಗದು. ಭಾರತದಲ್ಲಿ ಮತ್ತೆ ತೀವ್ರ ಪರೀಕ್ಷೆ ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಕ್ವಾರಂಟೈನ್ ಪ್ರಕ್ರಿಯೆ ಆರಂಭಿಸುವ ಅಗತ್ಯವಿದೆ ಎಂದು ಎಐಐಎಂಎಸ್‌ನ ಮುಖ್ಯಸ್ಥ ಡಾ.ರಣದೀಪ್ ಗುಲೇರಿಯಾ ಅಭಿಪ್ರಾಯಪಟ್ಟಿದ್ದಾರೆ.

Read These Next

ರಿಲಯನ್ಸ್ ಜೊತೆ ನಂಟು ಹೊಂದಿರುವ ಕಂಪೆನಿಯಿಂದ ಬಿಜೆಪಿಗೆ 375 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್

ರಿಲಯನ್ಸ್ ಗುಂಪಿನೊಂದಿಗೆ ನಂಟು ಹೊಂದಿರುವ, ಆದರೆ ಹೊರಜಗತ್ತಿಗೆ ಅಪರಿಚಿತವಾಗಿರುವ ಕಂಪೆನಿ ಕ್ವಿಕ್ ಸಪ್ಪೆ ಚೇನ್ ಪ್ರೈವೇಟ್ ...

ಲೋಕಸಭಾ ಚುನಾವಣೆ; ಕಾಂಗ್ರೇಸ್ ನ ಎರಡನೇ ಪಟ್ಟಿ ಬಿಡುಗಡೆ; ಉ.ಕ ಕ್ಷೇತ್ರಕ್ಕೆ ಅಂಜಲಿ ನಿಂಬಾಳ್ಕರ್

ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಕರ್ನಾಟಕದ 17, ಅರುಣಾಚಲ ...

ಸಿಎಎ ನಿಯಮಾವಳಿಗಳಿಗೆ ತಡೆ ಕೋರುವ ಅರ್ಜಿಗಳ ವಿಚಾರಣೆ ; ಸು.ಕೋರ್ಟ್‌ನಿಂದ ಕೇಂದ್ರಕ್ಕೆ ನೋಟಿಸ್

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯ ನಿಯಮಗಳಿಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಮಂಗಳವಾರ ...