ಸಂಸದ ಅನಂತಕುಮಾರ ಹೆಗಡೆಗೆ ಕೊರೋನಾ ಸೋಂಕು.

Source: SO News | By Laxmi Tanaya | Published on 14th September 2020, 4:21 PM | National News | Don't Miss |

ನವದೆಹಲಿ : ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.. ಮುಂಗಾರು ಅಧಿವೇಶನ ನಡೆಯುವ ಮುನ್ನ ನಡೆಸಿದ  ಕೋವಿಡ್-19 ಪರೀಕ್ಷೆಯಲ್ಲಿ ಅವರಿಗೆ ಸೋಂಕು ದೃಢಗೊಂಡಿದೆ.  ಅವರ ಜೊತೆ ಮೀನಾಕ್ಷಿ ಲೇಖಿ, ಪರ್ವೇಶ್ ಸಾಹಿಬ್ ಸಿಂಗ್ ಸೇರಿ ಇನ್ನು‌ ಹದಿನಾರು ಸಂಸದರಿಗೆ ಸೋಂಕು‌ ತಗುಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ನಿನ್ನೆ ಮತ್ತು ಇಂದು  ಪಾರ್ಲಿಮೆಂಟ್ ಹೌಸ್‌ನಲ್ಲಿ ಲೋಕಸಭಾ ಸದಸ್ಯರುಗಳಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗಿತ್ತು. ಕೊರೋನ ಸೋಂಕಿತ ಸಂಸದರಲ್ಲಿ ವೈಆರ್‌ಎಸ್ ಕಾಂಗ್ರೆಸ್‌ನ ಇಬ್ಬರು, ಶಿವಸೇನೆ, ಡಿಎಂಕೆ ಹಾಗೂ ಆರ್‌ಎಲ್‌ಪಿ ಪಕ್ಷಗಳ ತಲಾ ಒಬ್ಬರು ಮತ್ತು
ಬಿಜೆಪಿ ಪಕ್ಷದವರೇ 12 ಮಂದಿ ಇದ್ದರೆ.

ಕೊರೋನಾ ಭೂತ ಎಂದಿದ್ದ ಅನಂತಕುಮಾರ ಹೆಗಡೆ :  ಸಂಸದ ಅನಂತ ಕುಮಾರ್‌ ಹೆಗಡೆ, ಕೊರೊನಾವನ್ನು ದೊಡ್ಡ ಭೂತವನ್ನಾಗಿ ಸೃಷ್ಠಿ ಮಾಡಿ ನಮ್ಮೆದುರಿಗೆ ಬಿಟ್ಟಿದ್ದಾರೆ. ಶೀತವಾದವರಿಗೆಲ್ಲಾ  ಚೆಕ್ ಮಾಡಿದ್ರೆ ಕೊರೊನಾ ಪಾಸಿಟಿವ್ ಅಂತಲೇ ಬರತ್ತೆ. ಶೀತ ಬಂದರೂ ಅದೇ ವೈರಸ್, ಕೊರೋನಾ‌ ಬಂದರೂ ಅದೇ ವೈರಸ್, ಜನರು ಪಾಸಿಟಿವ್ ಆಗ್ಬಿಡ್ತಾರೆ ಎಂದು ಕೊರೊನಾ ಕುರಿತು ಟೀಕೆ ಮಾಡಿದ್ದರು.

ಸಂಸದ ಅನಂತಕುಮಾರ ಹೆಗಡೆ ಯಾವುದೇ  ಸಭೆ, ಸಮಾರಂಭಗಳಲ್ಲಿ ಭಾಗಿಯಾಗಿದ್ದರೂ ಮಾಸ್ಕ್ ಧರಿಸುತ್ತಿರಲಿಲ್ಲ. ಅಲ್ಲದೇ, ಮಾಸ್ಕ್ ಧರಿಸುವವರನ್ನು ರಾಮಾಯಣದ ಕಪಿಗಳಿಗೂ ಅವರು ಹೋಲಿಸಿದ್ದರು. ಇದು ಬಾರೀ ಚರ್ಚೆಗೂ ಕಾರಣವಾಗಿತ್ತು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...