ಭಟ್ಕಳದ ಯುವಕನ ಮೊದಲ ಆನ್ ಲೈನ್ ವಿವಾಹ; ಕಂಪ್ಯೂಟರ್, ಮೊಬೈಲ್ ಸ್ಕ್ರೀನ್ ಮೂಲಕ ಮದುವೆಯಲ್ಲಿ ಪಾಲ್ಗೊಂಡ ನೂರಾರು ಮಂದಿ ನೆಂಟರು

Source: sonews | By Staff Correspondent | Published on 25th July 2020, 4:50 PM | Coastal News | Don't Miss |

ಭಟ್ಕಳ: ಕೊರೊನಾ ಲಕ್ಡೌನ್ ನಿಂದಾಗಿ ಜಗತ್ತಿನಾದ್ಯಂತ ಜನರು ಕಂಗಾಲಾಗಿದ್ದು ಜೀವನದ ಗತಿಯನ್ನು ಬದಲಿಸಿಕೊಂಡು ಕೊರೋನಾದೊಂದಿಗೆ ಬದುಕುವುದನ್ನು ಕಲಿಯುತ್ತಿದ್ದಾರೆ. ಜನರು ಒಂದು ರಾಜ್ಯದಿಂದ ಇನ್ನೊಂದಕ್ಕೆ ಹೋಗಬೇಕಾದರೆ ಅಲ್ಲಿನ ಕ್ವಾರೆಂಟೈನ್ ನಿಯಮಗಳನ್ನು ಪಾಲಿಸಲಾಬೇಕಾಗುತ್ತದೆ. ಹಾಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಲು ಹೆದರುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಲವಾರು ಕಾರ್ಯಕ್ರಮಗಳು ಈಗ ಆನ್ ಲೈನ್ ನಡೆಯುತ್ತಿವೆ. ಇಂತಹದ್ದರಲ್ಲಿ ಭಟ್ಕಳದ ಯುವಕ ಬೆಂಗಳೂರಿನಲ್ಲಿದ್ದುಕೊಂಡು ಚೈನ್ನೈನ ವಧುವಿನೊಂದಿಗೆ ಆನ್ ಲೈನ್ ವಿವಾಹವಾಗಿ ಭಟ್ಕಳದ ಮೊದಲ ಆನ್ ಲೈನ್ ವಿವಾಹ ಎಂಬ ಇತಿಹಾಸವನ್ನು ದಾಖಲೆ ಮಾಡಿದ್ದಾನೆ. 

ಭಟ್ಕಳದ ಮೊದಲ ಮಂತ್ರಿ ದಿ.ಜುಕಾಕೋ ಶಮ್ಸುದ್ದೀನ್ ರವರ ಮರಿಮೊಮ್ಮೊಗ ಮುಹಮ್ಮದ್ ಆದಿಲ್ ಕೌಡ ಮಾಲ್ದೀವ್ಸ್ ನಲ್ಲಿ ಪೈಲಟ್ ಆಗಿದ್ದು ಲಾಕ್ಡೌನ್ ಗೆ ಪೂರ್ವ ತನ್ನ ಹೆತ್ತವರೊಂದಿಗೆ ಉಮ್ರಾ ನಿರ್ವಹಿಸಲಿಕ್ಕಾಗಿ ಬೆಂಗಳೂರಿಗೆ ಬಂದಿದ್ದಾರೆ. ಲಾಕ್ಡೌನ್ ಘೋಷಣೆಯಾದ ಬಳಿಕ ಅವರು ಬೆಂಗಳೂರಿನಲ್ಲೇ ಸಿಲುಕಿಕೊಂಡಿದ್ದಾರೆ. ಈ ನಡುವೆ ಅವರ ನಿಶ್ಚಿತಾರ್ಥ ಚೈನ್ನೈ ಮೂಲದ ಆಂಬೂರು ನಿವಾಸಿ ಆಫಿಯಾ ಮರಿಯಮ ರೊಂದಿಗೆ ಏರ್ಪಟ್ಟಿದೆ. 

ನೂರಾರು ಕಿ.ಮೀ ದೂರ ಇರುವ ವಧು ಮತ್ತು ವರ ವಿವಾಹಕ್ಕಾಗಿ ಒಂದು ಕಡೆ ಸೇರುವುದು ಕಷ್ಟವಾಗಿರುವ ಈ ಪರಿಸ್ಥಿತಿಯಲ್ಲಿ ಆನ್ ಲೈನ್ ಮೂಲಕ ಅವರಿಬ್ಬರು ಹಾಗೂ ಅವರ ನೂರಾರು ಕುಟುಂಬಸ್ಥರು ಅತ್ಯಂತ ಸರಳವಾಗಿ ಯುವ ಜನಾಂಗಕ್ಕೆ ಮಾದರಿಯೆಂಬಂತೆ ಅನೋನ್ಯವಾದ ವಿವಾಹವು ಶುಕ್ರವಾರದಂದು  ಬೆಂಗಳೂರಿನಲ್ಲಿ ನಡೆಯಿತು. ಪ್ರಪಂಚದ ವಿವಿಧ ಭಾಗಗಳಲ್ಲಿರುವ ಅವರು ಕುಟುಂಬಸ್ಥರು ಮತ್ತು ಸ್ನೇಹಿತರು ಸಿಸ್ಕೋ ಆಪ್ ಮೂಲಕ ಆನ್ ಲೈನ್ ನಲ್ಲಿ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  

ಮೂಲಗಳ ಪ್ರಕಾರ, ಭಟ್ಕಳ ಮೂಲದ ಮುಹಮ್ಮದ್ ಆದಿಲ್ ಕೌಡ (ತಂದೆಮುಹಮ್ಮದ್ ಸ್ವಾಲೇಹ್ ಕೌಡ) ಕೆಲವು ಸಮಯದಿಂದ ಮಾಲ್ಡೀವ್ಸನಲ್ಲಿ ಪೈಲಟ್ ಆಗಿದ್ದಾರೆ. ಚೆನ್ನೈ ಮತ್ತು ಲಕ್ನೋ ನಂತರ ಮಾಲ್ಡೀವ್ಸ್ನಲ್ಲಿ ಶಿಕ್ಷಣ ಪಡೆದರು. ಅವರು ಪೈಲಟ್ ಆದಾಗಿನಿಂದಲೂ ಅಲ್ಲೇ ವಾಸಿಸುತ್ತಿದ್ದಾರೆ. 

ಕಳೆದ ನಾಲ್ಕು ತಿಂಗಳ ಹಿಂದೆ ಬೆಂಗಳೂರಿನಲ್ಲಿ  ಸಿಲುಕೊಂಡಿದ್ದ ಇವರು ತಮ್ಮ ವಿವಾಹವನ್ನು ಅತ್ಯಂತ ಸರಳ ರೀತಿಯಿಂದ ನಡೆಸಲು ನಿರ್ಧರಿಸಿ ಆನ್ ಲೈನ್ ವಿವಾಹಕ್ಕ ಮೊರೆ ಹೋದರು. ಹಾಗಾಗಿ ಖಾಜಿ ಸಾಹಿಬ್ ರನ್ನು ತಮ್ಮ ಮನೆಗೆ ಆಹ್ವಾಸಿ ಇಬ್ಬರು ಅಥವಾ ನಾಲ್ಕು ಆಪ್ತರೊಂದಿಗೆ ಆನ್‍ಲೈನ್‍ನಲ್ಲಿ ವಿವಾಹ ಸಮಾರಂಭವನ್ನು ಏರ್ಪಡಿಸಿದರು.

ಭಟ್ಕಳ ಮೂಲದ ಚೆನ್ನೈನ ಅಬ್ದುಲ್ ರಹೀಂ ಪಟೇಲ್ ಅವರು, ಈ ಕುರಿತಂತೆ ಮಾಹಿತಿ ನೀಡಿದ್ದು   ವಿವಾಹ ಸಂಬಂಧ ಎಲ್ಲ ರೀತಿಯ ದಾಖಲೆಗಳನ್ನು  ಈಗಾಗಲೆ ಚೆನ್ನೈ ನಲ್ಲಿ  ಪೂರ್ಣಗೊಂಡಿವೆ, ಅದೇ ರೀತಿ ಕೆಲವು ಕೆಲಸಗಳನ್ನು ಸಹ ವೀಡಿಯೊ ರೆಕಾಡಿರ್ಂಗ್ ಮೂಲಕ ಪೂರ್ಣಗೊಳಿಸಲಾಗಿದೆ, ಆದರೆ ಇತರ ಕಾರ್ಯಗಳನ್ನು ಖಾಜಿ ಸಾಹಿಬ್ ಮತ್ತು ಅವರ ಮುಂದೆ ಸಹಿ ಹಾಕುವ ಮೂಲಕ ಶುಕ್ರವಾರ ವಿವಾಹ ನೆರವೇರಿಸಲಾಗಿದೆ ಎಂದರು. 

ಸಿಸ್ಕೋ ಆ್ಯಪ್ ಮೂಲಕ ಇಡೀ ಪ್ರಕ್ರಿಯೆಯನ್ನು ಆನ್‍ಲೈನ್‍ನಲ್ಲಿ ಮಾಡಲಾಯಿತು.ಈ ಸಂದರ್ಭದಲ್ಲಿ, ವಿಶ್ವದಾದ್ಯಂತದ ಸಂಬಂಧಿಕರು ಮತ್ತು ಸ್ನೇಹಿತರು ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಬಹಳ ಅದ್ಭುತವಾಗಿಸಿದರು.

ಭಟ್ಕಳದಲ್ಲಿರುವ ಯುವಕ/ಯುವತಿಯರಿಗೆ ಮಾದರಿಯಾಗಲಿ: ಕರೋನಾ ಲಾಕ್‍ಡೌನ್‍ನಿಂದಾಗಿ ಭಟ್ಕಳದಲ್ಲಿ  ನಡೆಬೇಕಿದ್ದ ನೂರಕ್ಕೂ ಹೆಚ್ಚು ವಿವಾಹಗಳು ಸ್ಥಗಿತಗೊಂಡಿವೆ. ಕೆಲವರು ದಿನಾಂಕಗಳನ್ನು ಫಿಕ್ಸ್ ಮಾಡಿಕೊಂಡಿದ್ದರು. ಆದರೆ ವಿವಾಹ ಸಮಾರಂಭದಲ್ಲಿ ಜನರು ಸೇರುವ ಸಮಸ್ಯೆಯಿಂದಾಗಿ ಬಹಳಷ್ಟು ವಿವಾಹಗಳು ರದ್ದಾಗಿವೆ. ಆನ್ ಲೈನ್ ವಿವಾಹಗಳಲ್ಲಿ ಯಾವುದೇ ಸಮಸ್ಯೆ ಎದುರಾಗದರು ಎಷ್ಟು ಸಾವಿರ ಮಂದಿಯಾದರೂ ವಿವಾಹ ಸಮಾರಂಭದಲ್ಲಿ ಭಾಗವಹಿಸಬಹುದು. ಮತ್ತು ಇದರಿಂದಾಗಿ ಹಣಕಾಸು ಉಳಿತಾಯವೂ ಆಗುತ್ತದೆ. ಇಂತಹ ವಿವಹಾಗಳನ್ನು ಹೆಚ್ಚೆಚ್ಚು ಪೆÇ್ರೀತ್ಸಾಹಿಸಬೇಕಾಗುತ್ತದೆ ಎನ್ನುತ್ತಾರೆ ಆದಿಲ್. 

ಆದಿಲ್ ಕೌಡ, ತಮ್ಮ ಮದುವೆಯನ್ನು ಆನ್‍ಲೈನ್‍ನಲ್ಲಿ ಏರ್ಪಡಿಸಿದ ರೀತಿ. ಅವರ ಉದಾಹರಣೆಯನ್ನು ಗಮನದಲ್ಲಿಟ್ಟುಕೊಂಡು ವಿವಾಹ ಸಮಾರಂಭವನ್ನು ನಡೆಸಬೇಕು. ಕರೋನಾ ಲಾಕ್‍ಡೌನ್‍ನಿಂದಾಗಿ, ಅನೇಕ ಭಟ್ಕಳದ ಯುವಕರು ದುಬೈ, ಮಸ್ಕತ್, ಸೌದಿ ಅರೇಬಿಯಾ ಮತ್ತು ಕೊಲ್ಲಿಯ ವಿವಿಧ ನಗರಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರೆಲ್ಲರ ವಿವಾಹಗಳು ಆನ್ ಲೈನ್ ಮೂಲಕ ನಡೆದರೆ ನೂರಾರು ಸಂಬಂಧಿಕರು ಕಂಪ್ಯೂಟರ್ ಅಥವಾ ಮೊಬೈಲ್ ಸ್ಕ್ರೀನ್ ಮೂಲಕ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶ ದೊರಕಿದಂತಾಗುತ್ತದೆ.  
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...