ಭಟ್ಕಳದಲ್ಲಿ 21 ಕೋರೋನ ಪಾಸಿಟಿವ್ ಪ್ರಕರಣ ಜನರಲ್ಲಿ ಹೆಚ್ಚಿದ ಆತಂಕ

Source: so news | Published on 1st July 2020, 12:32 PM | Coastal News | Don't Miss |


ಭಟ್ಕಳ: ಭಟ್ಕಳದಲ್ಲಿ ಇಷ್ಟು ದಿನಗಳವರೆಗೆ ನಿಯಂತ್ರಣದಲ್ಲಿದ್ದ ಕೊರೋಣ ಇಂದು 21 ಪ್ರಕರಣಗಳು ದಾಖಲಾಗುವ ಮೂಲಕ ಮತ್ತೊಮ್ಮೆ ಟನ್ನ ಅಟ್ಟಹಾಸ ಮೆರೆದಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ
ಜಿಲ್ಲೆಯಲ್ಲಿ ಕೋವಿಡ್-19 ಒಮ್ಮೆ ನಿಯಂತ್ರಣಕ್ಕೆ ಬಂದಂತೆ ಕಂಡರೂ ಸಹ ಮತ್ತೆ ಮತ್ತೆ ಕಾಡುತ್ತಿದ್ದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಕಳೆದ ಮಾರ್ಚ 22ರಿಂದ ಲಾಕ್ಡೌನ್ ಆಗಿದ್ದರೂ ಸಹ ಪ್ರಥಮವಾಗಿ ದುಬೈಯಿಂದ ಬಂದವರಲ್ಲಿ ಕೋವಿಡ್-19 ಕಾಣಿಸಿಕೊಂಡು ಪ್ರಥಮವಾಗಿ ಹನ್ನೊಂದು ಜನರಿಗೆ ಸೋಂಕು ತಗುಲಿತ್ತು. ಎಲ್ಲರನ್ನು ಕೂಡಾ ಕಾರವಾರದ ಪತಂಜಲಿ ಆಸ್ಪತ್ತೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಗುಣಮುಖರಾಗಿದ್ದಾರೆ. ನಂತರ ಮೇ ತಿಂಗಳಿನಲ್ಲಿ ಮಂಗಳೂರಿನ ಆಸ್ಪತ್ರೆಗೆ ಹೋಗಿ ಬಂದವರಿಂದ ಕೊರೊನಾ ಸೋಂಕು ತಗುಲಿದ್ದು ಅವರ ಸಂಪರ್ಕಕ್ಕೆ ಬಂದವರಿಗೂ ಕೂಡಾ ಸೋಂಕು ತಗುಲಿದ್ದು ಭಟ್ಕಳದಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಕಾರವಾರದ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ದೊರೆತ ಉತ್ತಮವಾದ ಚಿಕಿತ್ಸೆಯಿಂದಾಗಿ ಚಿಕ್ಕ ಮಗುವಿನಿಂದ ಹಿಡಿದು 83 ವರ್ಷದ ವೃದ್ಧರೂ ಕೂಡಾ ಗುಣಮುಖರಾಗಿದ್ದು ವಿಶೇಷವಾಗಿತ್ತು.
ನಂತರ ಕೆಲವು ದಿನಗಳ ಕಾಲ ಭಟ್ಕಳಿಗರಲ್ಲಿ ಸೋಂಕು ಕಾಣಿಸಿಕೊಳ್ಳದೇ ಜಿಲ್ಲಾಡಳಿತ ಸ್ವಲ್ಪ ಮಟ್ಟಿಗೆ ನಿರಾಳವಾಗುತ್ತಿದ್ದಂತೆಯೇ ಮಹಾರಾಷ್ಟ್ರದಿಂದ ಬಂದ ಮಹಾಮಾರಿ ಇಡೀ ಜಿಲ್ಲೆಯನ್ನೇ ಆವರಿಸುವ ಮೂಲಕ ಮತ್ತೆ ಜಿಲ್ಲೆಯ ಜನರ ನಿದ್ದೆಗೆಡಿಸಿತು. ದಿನಕ್ಕೊಂದು ತಾಲೂಕಿನಲ್ಲಿ ಕಾಣಿಸಿಕೊಂಡ ಸೋಂಕು ಜಿಲ್ಲೆಯ ಜನರು ಭಟ್ಕಳದೆಡೆಗೆ ಮುಖ ಮಾಡುವುದು ತಪ್ಪಿತಾದರೂ ಕೂಡಾ ಭಟ್ಕಳ ಸಂಪೂರ್ಣ ಸೋಂಕು ಮುಕ್ತವಾಗಿಲ್ಲ ಎನ್ನುವುದು ಈಗ ಮತ್ತೆ 21 ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಜನರಲ್ಲಿ ಮತ್ತೆ ಆತಂಕ ಎದುರಾಗಿದೆ.
ಇಲ್ಲಿನ ಪ್ರಮುಖ ಧಾರ್ಮಿಕ ವಿದ್ವಾಂಸ ರವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕಕ್ಕೆ ಬಂದ 25 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು ಅದರಲ್ಲಿ 21 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೆ ಸೋಂಕು ತಗುಲಿರುವ ಸಂಪರ್ಕ ಯಾವುದು ಎನ್ನುವುದು ಕೂಡಾ ಪತ್ತೆಯಾಗಿಲ್ಲ ಎನ್ನಲಾಗಿದೆ. ಅವರ ಸಂಪರ್ಕದಲ್ಲಿರುವ 20 ಜನರಿಗೆ ಸೋಂಕು ಹರಿಡಿದ್ದು ಇನ್ನೂ ಅವರ ಎರಡನೇ ಸಂಪರ್ಕದವರ ಪತ್ತೆಗಾಗಿ ತಾಲೂಕಾ ಆಡಳಿತ ಶ್ರಮಿಸುತ್ತಿದೆ. ಈಗಾಗಲೇ ಸೋಂಕು ದೃಢವಾದ ವ್ಯಕ್ತಿಗಳು ಅನೇಕ ಕಡೆಗಳಲ್ಲಿ ತಿರುಗಾಡಿರುವ ಸಂಶಯವಿದ್ದು ಅವರೆಲ್ಲರ ಸಂಪರ್ಕವನ್ನು ಕೂಡಾ ಕಲೆ ಹಾಕಿ ಕ್ವಾರೈಂಟೈನ್ ಮಾಡಬೇಕಾಗಿದೆ.
ಮದುವೆ ಸಂಕಷ್ಟ: ಬೆಂಗಳೂರಿನಲ್ಲಿ ನೆಲೆಸಿದ್ದ ಭಟ್ಕಳದ ಮೂಲದ ವ್ಯಕ್ತಿಯೋರ್ವ ಬೆಂಗಳೂರಿನಿಂದ ಬಂದು ಭಟ್ಕಳದಲ್ಲಿ ಮದುವೆ ನೆರವೇರಿಸಿಕೊಂಡಿದ್ದು ಅಂದೇ ಆತನಿಗೆ ಜ್ವರ ಬಂದ ಕಾರಣ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು ಸಾವಿನ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಈತನ ಮದುವೆಗೆ ವಿ.ಐ.ಪಿ. ಗಳು ಸೇರಿದಂತೆ 100 ರಿಂದ 125 ಜನರು ಭಾಗವಹಿಸಿದ್ದಾರೆಂದು ತಿಳಿದು ಬಂದಿದ್ದು ಒಂದು ವೇಳೆ ಆತನಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢವಾದಲ್ಲಿ ಮದುವೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನು ಕೂಡಾ ಕ್ವಾರಂಟೈನ್ ಮಾಡಬೇಕಾಗಿದೆ. ಇನ್ನು ಇವರ ಟ್ರಾವೆಲ್ ಹಿಸ್ಟರಿಯಂತೆ ಎರಡನೇ ಸಂಪರ್ಕಕ್ಕೆ ಬಂದವರನ್ನು ಕೂಡಾ ಪರೀಕ್ಷೆಗೊಳಪಡಿಸಿ ಅವರನ್ನು ಕೂಡಾ ನಿಗಾ ವಹಿಸಬೇಕಾಗಿದೆ.
ಸ್ವಯಂ ಪ್ರೇರಿತ ಲಾಕ್ಡೌನ್ಗೆ ಆಗ್ರಹ: ಭಟಕಳದಲ್ಲಿ ಮತ್ತೆ ಹಲವು ಪ್ರಕರಣಗಳು ಪತ್ತೆಯಾಗುವ ಮೂಲಕ ಸುದ್ದಿಯಾಗಿದ್ದು ನಾಗರೀಕರು ಆತಂಕಿತರಾಗಿದ್ದಾರೆ. ಸರಕಾರ ಮತ್ತೆ ಲಾಕ್ಡೌನ್ ಮಾಡಲು ಮೀನಮೇಷ ಎಣಿಸುತ್ತಿದ್ದರೆ ನಾಗರೀಕರೇ ಸ್ವಯಂ ಲಾಕ್ಡೌನ್ಗೆ ಮುಂದಾಗಬೇಕು ಎನ್ನುವ ಕೂಗು ಭಟ್ಕಳದ ನಾಗರೀಕರದ್ದಾಗಿದೆ. ಪ್ರಕರಣಗಳು ಹರಡುತ್ತಿರುವುದರಿಂದ ಹಾಗೂ ಯಾರೂ ಕೂಡಾ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಸ್ವಯಂ ಲಾಕ್ಡೌನ್ ಅಗತ್ಯ ಎನ್ನುವ ಮಾತು ಕೇಳಿ ಬಂದಿದೆ. ತಾಲೂಕಾ ವರ್ತಕರ ಸಂಘ, ವಿವಿಧ ಸಂಘ ಸಂಸ್ಥೆಗಳು, ತಂಜೀಂ ಸಂಸ್ಥೆ ಸೇರಿ ಈ ಕುರಿತು ನಿರ್ಣಯ ತೆಗೆದುಕೊಳ್ಳಬೇಕಾಗಿದೆ. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...