ಎಲ್‌ಪಿಜಿ ತುಟ್ಟಿ ಸಿಲಿಂಡರ್‌ಗೆ 25 ರೂ. ಏರಿಕೆ; ಒಂದೇ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ

Source: VB | By I.G. Bhatkali | Published on 4th September 2021, 6:38 PM | National News |

ಹೊಸದಿಲ್ಲಿ: ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಏರಿಕೆಯಾಗಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ.

14.2 ಕೆ.ಜಿ. ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬುಧವಾರ 25 ರೂ. ಏರಿಕೆಯಾಗಿದೆ. ಒಂದೇ ತಿಂಗಳಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಒಂದೇ ಏರಿಕೆಯಾಗಿರುವುದು ಇದು ಎರಡನೇ ಬಾರಿಯಾಗಿದೆ. ಆಗಸ್ಟ್ 18ರಂದು ಸಾರ್ವಜನಿಕ ರಂಗದ ಅನಿಲ ಸಂಸ್ಥೆಗಳು ಎಲ್‌ಪಿಜಿ ಸಿಲಿಂಡರ್ ದರದಲ್ಲಿ 25 ರೂ. ಎರಡು ಬಾರಿ ಏರಿಕೆ ಮಾಡಿದ್ದವು.

ಬುಧವಾರದ ಬೆಲೆ ಏರಿಕೆಯ ಬಳಿಕ 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರವು ದಿಲ್ಲಿಯಲ್ಲಿ 884.50 ರೂ. ಆಗಿದೆ. ಮುಂಬೈ 884.50 ರೂ., ಕೋಲ್ಕತಾ 911 ರೂ. ಹಾಗೂ ಚೆನ್ನೈನಲ್ಲಿ 900.50 ರೂ.ಗೆ ತಲುಪಿದೆ.

ವಾಣಿಜ್ಯ ಬಳಕೆಗಾಗಿನ 19 ಕೆ.ಜಿ. ಎಲ್‌ಪಿಜಿ ಸಿಲಿಂಡರ್ ದರದಲ್ಲೂ 75 ರೂ. ಹೆಚ್ಚಾಗಿದೆ. ಈಗ ದಿಲ್ಲಿಯಲ್ಲಿ ಅದರ ಬೆಲೆ 1,693 ರೂ., ಮುಂಬೈ 1,649.50 ರೂ., ಕೋಲ್ಕತಾ 1,772 ರೂ. ಹಾಗೂ ಚೆನ್ನೈನಲ್ಲಿ 1,831 ರೂ. ಆಗಿದೆ.

ಈ ಮಧ್ಯೆ ತೈಲ ದರದಲ್ಲಿ 13ರಿಂದ 15 ಪೈಸೆಯಷ್ಟು ಇಳಿಕೆಯಾಗಿದೆ ಎಂದು ವರದಿಗಳು ತಿಳಿಸಿವೆ. ಇದರಿಂದಾಗಿ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 101.34 ರೂ. ಹಾಗೂ ಡೀಸೆಲ್ 88.77 ರೂ. ಆಗಿದೆ. ಅದೇ ರೀತಿ ಮುಂಬೈಯಲ್ಲಿ 

ಪೆಟ್ರೋಲ್ ಬೆಲೆಯು ಲೀಟರ್‌ಗೆ 107.39 ರೂ. ಹಾಗೂ ಡೀಸೆಲ್ 96.33 ರೂ. ಆಗಿದೆ. ಎಲ್ ಪಿಜಿ ಸಿಲಿಂಡರ್‌ ದರದಲ್ಲಿ ನಿರಂತರ ಏರಿಕೆ ಮಾಡುತ್ತಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸಾರ್ವಜನಿಕರನ್ನು ಖಾಲಿ ಹೊಟ್ಟೆಯಲ್ಲಿ ಮಲಗುವಂತೆ ಮಾಡುವ ಈ ನಾಯಕ ಸ್ವತಃ ತನ್ನ ಗೆಳೆಯರ ನೆರಳಿನಡಿ ನಿದ್ರಿಸುತ್ತಿದ್ದಾರೆ.ಆದರೆ ದೇಶವು ಈ ಅನ್ಯಾಯದ ವಿರುದ್ಧ ಒಗ್ಗಟ್ಟಾಗುತ್ತಿದೆ ಎಂದು ಅವರು ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಪರೋಕ್ಷವಾಗಿ ಪ್ರಸ್ತಾವಿಸುತ್ತಾ ಟೀಕಿಸಿದ್ದಾರೆ.

Read These Next

ಹುಬ್ಬಳ್ಳಿ: ಹುಬ್ಬಳ್ಳಿಯ ಚರ್ಚ್‌ಗೆ ನುಗ್ಗಿ ಭಜನೆ ಮಾಡಿದ ಸಂಘಪರಿವಾರದ ಕಾರ್ಯಕರ್ತರು

ಬಲವಂತದಿಂದ ಮತಾಂತರಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ರವಿವಾರ ಬೆಳಗ್ಗೆ ಇಲ್ಲಿಯ ಭೈರಿದೇವರ ಕೊಪ್ಪದಲ್ಲಿರುವ ಚರ್ಚೆಂದಕ್ಕೆ ...

ಫೇಸ್ ಕ್ರೀಂನಲ್ಲಿ 24 ಲಕ್ಷ ರೂ. ಮೌಲ್ಯದ ಚಿನ್ನ ಕಳ್ಳಸಾಗಣೆ ಯತ್ನ: ಏರ್ ಪೋರ್ಟ್ ನಲ್ಲಿ ಆರೋಪಿ ಬಂಧನ

ಹೈದರಾಬಾದ್: ಹೈದರಾಬಾದ್ ಆರ್ ಜಿ ಐ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಫೇಸ್ ಕ್ರೀಮ್ ನಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ...