ಮುಂದುವರೆದ ಮಳೆಗೆ ಅಪಾರ ಆಸ್ತಿಪಾಸ್ತಿ ಹಾನಿ; ಇಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ

Source: sonews | By Staff Correspondent | Published on 6th August 2019, 7:22 PM | Coastal News | Don't Miss |

ಭಟ್ಕಳ: ತಾಲೂಕಿನಾದ್ಯಂತ ಕಳೆದ ಮೂರುಗಳಿಂದ ನಿರಂತರವಾಗಿ ಬಿರುಗಾಳಿಯಿಂದ ಕೂಡಿದ ಮಳೆಯಾಗುತ್ತಿದ್ದು ಅಪಾರ ಆಸ್ತಪಾಸ್ತಿ ಹಾನಿ ಸಂಭವಿಸಿದೆ. ಮುನ್ನೆಚರಿಕೆ ಕ್ರಮವಾಗಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿದ್ದು ಬುಧವಾರವೂ ಕೂಡ ಎಲ್ಲ ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಆಸ್ತಿಪಾಸ್ತಿ ಹಾನಿಯ ವಿವರ: ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಬಬ್ಬನಕಲ್ಲು ಹೊನ್ನೆಗದ್ದೆ, ಫ಼ಿರ್ ದೊಶ್ ನಗರ್,ಜನತಾ ಕೊಲೊನಿಯಲ್ಲಿ ದಿನಾಂಕ: 5-8-2019 ರಂದು ಮಧ್ಯ ರಾತ್ರಿ ಬಿಸಿದ ಭಾರಿ ಮಳೆ ಗಾಳಿಗೆ

ಕೆಲವು ಮನೆಗಳಿಗೆ ಭಾಗಶ: ಹಾನಿಯಾಗಿದ್ದು ಹಾನಿಯ ವಿವರ ಈಕೆಳಗಿನಂತೆ ಇರುತ್ತದೆ.
1. ಕ್ರಷ್ಣಪ್ಪ ಜಟ್ಟಪ್ಪ ನಾಯ್ಕ. 10000/-
2. ಜಟ್ಟಮ್ಮ ವೆಂಕಟಪ್ಪ ನಾಯ್ಕ.10000/-
3.ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಬ್ಬನಕಲ್ಲು.10000/-
4.ದುರ್ಗಮ್ಮ ಜಟ್ಟಪ್ಪ ನಾಯ್ಕ.10000/-
5.ಭಾಸ್ಕರ ಜಟ್ಟಪ್ಪ ನಾಯ್ಕ.5000/-
6.ಅಬ್ದುಲ್ ಸತ್ತಾರ್ ಅಹ್ಮದ್ ಶರಿಫ಼್.5000/-
7.ಮುಸ್ತಾಕ್ ಅಹ್ಮದ್ ಮರ್ದನ್ ಸಾಹೆಬ್.5000/-
8. ಶ್ರಿಧರ ಈರಯ್ಯ ನಾಯ್ಕ್.70000/-
9. ಅಜಿಜಾ ಫಿರ್ದೊಶ್ ದಾಮ್ದಾ ಅಬ್ಬು.50000/-
10. ಇಬ್ರಾಹಿಂ ರುಕ್ನುದ್ದಿನ್ ಸಿಪಾಯಿ.50000/-ಈ ಮೇಲಿನಂತೆ ಹಾನಿಯಾಗಿದ್ದು ಯಾವುದೇ ಜನ ಜಾನುವಾರು ಗಳಿಗೆ ತೊಂದರೆ ಆಗಿರುವುದಿಲ್ಲ.

ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ಬಬ್ಬನಕಲ್ಲು ಹೊನ್ನೆಗದ್ದೆ, ಫ಼ಿರ್ ದೊಶ್ ನಗರ್, ಜನತಾ ಕೊಲೊನಿ ,ಹನಿಫಾಬಾದ್ನಲ್ಲಿ  ದಿನಾಂಕ: 5-8-2019 ರಂದು ಮಧ್ಯ ರಾತ್ರಿ ಬಿಸಿದ ಭಾರಿ ಮಳೆ ಗಾಳಿಗೆ ದುರ್ಗಪ್ಪ ಶನಿಯಾರ ನಾಯ್ಕ್, ಮಂಜುನಾಥ ಮಾಸ್ತಪ್ಪ ನಾಯ್ಕ್, ಮಂಜುನಾಥ ಬೈರಪ್ಪ ನಾಯ್ಕ್, ಮಂಜುನಾಥ ಮೊಗೆರ, ಲಕ್ಷ್ಮಿ ನಾರಾಯಣ ನಾಯ್ಕ, ಸೈಯದ್ ಹಾಸಿಮ್, ಸಮಿರ ರಜಾ ಅರ್ಮಾರ, ಮೊಹಮ್ಮದ್ ನಥಾರ್, ಇಬ್ಬು ಅಲಿ ಆದಮ್, ಇವರ ಮನೆಗಳಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದ್ದು ಹಾಗೂ ನಾಮದಾರಿ ಸಮುದಾಯ ಭವನ ತೆಂಗಿನಗುಂಡಿ ಇದರ ಪೂರ್ತಿ ಮೇಲ್ಚಾವಣಿ ಗಾಳಿಗೆ ಹಾರಿ ಹೊಗಿರಿತ್ತದೆ.ಯಾವುದೇ ಜನ ಜಾನುವಾರುಗಳಿಗೆ ಹಾನಿಯಾಗಿದ್ದು ಇರುವುದಿಲ್ಲ.
ಕೈಕಿಣಿ ಗ್ರಾಮದ ಕೋಟದಮಕ್ಕಿ ಮಜರೇಯ ಹನುಮಂತ ದೇವಡಿಗ ಇವರ ಮನೆ ಮೇಲೆ ತೆಂಗಿನಮರ ಬಿದ್ದು ಹನಿಯಾಗಿದ್ದು ಹಾನಿಯಾ ಅಂದಾಜು ಮೊತ್ತಾ 30000 ಇದ್ದು ಪ್ರಾಣಹಾನಿ ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ. 

ಕೈಕಿಣಿ ಗ್ರಾಮದ ಎಣ್ಣೆಬೋಲ್ ಮಜರೇಯ ಮಂಜಪ್ಪ ಶನಿಯಾರ್ ನಾಯಕ್  ಇವರ ಪಕ್ಕಾ ಮನೇಯ ಮೆಲೆ ಮಾವಿನಮರ ಬಿದ್ದು ಹನಿಯಾಗಿದ್ದು ಹಾನಿಯ ಆಂದಾಜು ಮೊತ್ತ 30000 ಇರುತ್ತದೆ. 

ಮಳೆಯಿಂದಾಗಿ ಹೆಸ್ಕಾಂ ಇಲಾಖೆಗೆ ಅಪಾರ ಹಾನಿ: ದಿನಾಂಕ 05.08.2019ರಂದು ರಾತ್ರಿ ಹಾಗೂ 06.08.2019ರಂದು 11.00 ಘಂಟೆಯವರೆಗೆ ಸುಮಾರು 17 ಕಂಬಗಳು (ಶಿರಾಲಿ ಬ್ರಿಡ್ಜ್ 3, ಬೈಲೂರು 2, ಗೊರ್ಟೆ 1, ಮಲ್ಲಾರಿ 1, ಗುಂಡ್ಲಕಟ್ಟಾ 3, ಕೋಟಖಂಡ 1, ಸಂಪನಕೇರಿ 1, ಮುಂಡಳ್ಳಿ ಮೋಗೇರಕೇರಿ 1, ಹೆಬ್ಳೆ ವಾಟರ್ ಟ್ಯಾಂಕ್ 1, ಹೊಂಡದಕೇರಿ 2, ಮಗ್ದೂಮ್ ಕಾಲೋನಿ 1 ಹಾಗೂ 3 ಪರಿವರ್ತಕ, 01 ಪರಿವರ್ತಕದ ಸ್ಟ್ರಕ್ಚರ್ಗಳು ಹಾನಿಗೊಳಗಾಗಿದ್ದು, ಒಟ್ಟೂ 6.68ಲಕ್ಷ ಹಾನಿ ಉಂಟಾಗಿದೆ ಹೆಸ್ಕಾಂ ಸಹಾಯಕ ಅಭಿಯಂತರರು ಮಾಹಿತಿ ನೀಡಿದ್ದಾರೆ. 
 
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...