ಜಿಲ್ಲೆಯಲ್ಲಿ ಮುಂದುವರೆದ ಮಳೆ; ಭಟ್ಕಳದಲ್ಲಿ ೨೨೮ಮಿ.ಮೀ ದಾಖಲೆ

Source: sonews | By Staff Correspondent | Published on 23rd July 2019, 6:42 PM | Coastal News | Don't Miss |

ಕಾರವಾರ  :ಉತ್ತರಕನ್ನಡ ಜಿಲ್ಲೆಯ ಅಂಕೋಲ,ಕಾರವಾರ,ಹೊನ್ನಾವರ,ಕುಮಟಾ, ಹಾಗೂ ಭಟ್ಕಳ ತಾಲೂಕಿನಲ್ಲಿ ಕಳೆದ ೨೪ಗಂಟೆಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಸೋಮವಾರವೂ ಕೂಡ ಮುಂದುವರೆದಿದೆ. ಮಳೆಯ ಹಿನ್ನೆಲೆಯಲ್ಲಿ ಸೋಮವಾರ ದಂದು ಹೊನ್ನಾವರ, ಕುಮಟಾ, ಭಟ್ಕಳ ಅಂಕೋಲಾ ತಾಲೂಕುಗಳಲ್ಲಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿತ್ತು.  ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 965.7 ಮಿಮೀ ಮಳೆಯಾಗಿದ್ದು ಸರಾಸರಿ 87.8 ಮಿಮೀ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 991 ಮಿಮೀ ಇದ್ದು, ಇದುವರೆಗೆ ಸರಾಸರಿ 806.8 ಮಿಮೀ ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿಯೇ ಭಟ್ಕಳ ತಾಲೂಕಿನಲ್ಲಿ ಹೆಚ್ಚು ಮಳೆಯಾಗಿದ್ದು 228ಮಿ.ಮೀ ದಾಖಲೆಯ ಮಳೆ ಸುರಿದಿದೆ. 

ಈ ಅವಧಿಯಲ್ಲಿ ಅಂಕೋಲಾದಲ್ಲಿ 141 ಮಿ.ಮೀ,  ಭಟ್ಕಳ 228 ಮಿ ಮೀ,  ಹಳಿಯಾಳ 3.2 ಮಿ.ಮೀ, ಹೊನ್ನಾವರ 134.3 ಮಿ ಮೀ,   ಕಾರವಾರ 137.3 ಮಿ ಮೀ, ಕುಮಟಾ 197.2 ಮಿ ಮೀ,  ಮುಂಡಗೋಡ 5.6 ಮಿ ಮೀ,  ಸಿದ್ದಾಪುರ 54.2 ಮಿ.ಮೀ,  ಶಿರಸಿ 31.5 ಮಿ.ಮೀ,  ಜೋಯಿಡಾ  11 ಮಿಮೀ ಯಲ್ಲಾಪುರ 22.4 ಮಿ.ಮೀ ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿವೆ. 
ಕದ್ರಾ: 34.50 ಮೀ (ಗರಿಷ್ಟ), 32.85 ಮೀ (ಇಂದಿನ ಮಟ್ಟ), (ನೀರಿನ ಒಳ ಹರಿವು) 12170 ಕ್ಯೂಸೆಕ್ಸ್, (ಹೊರ ಹರಿವು) 12170 ಕ್ಯೂಸೆಕ್ಸ್, ಕೊಡಸಳ್ಳಿ: 75.50 ಮೀ (ಗರಿಷ್ಟ), 71.65 (ಇಂದಿನ ಮಟ್ಟ) 3038 ಕ್ಯೂಸೆಕ್ಸ್ (ಒಳಹರಿವು) , 3345 ಕ್ಯೂಸೆಕ್ಸ್ ( ಹೊರ ಹರಿವು), ಸೂಪಾ: 564 ಮೀ (ಗ), 541.80 ಮೀ (ಇ.ಮಟ್ಟ), 12318.967 ಕ್ಯೂಸೆಕ್ಸ್ (ಒಳ ಹರಿವು).11591.621 ( ಹೊರಹರಿವು )  ತಟ್ಟಿಹಳ್ಳ: 468.38ಮೀ (ಗ), 452.50 ಮೀ (ಇ.ಮಟ್ಟ),32 ಕ್ಯೂಸೆಕ್ಸ್ (ಒಳಹರಿವು ) 32 ಕ್ಯೂಸೆಕ್ಸ್ (ಹೊರಹರಿವು ) ಬೊಮ್ಮನಹಳ್ಳಿ: 438.38ಮೀ (ಗ), 432.74 ಮೀ (ಇ.ಮಟ್ಟ), 1790 ಕ್ಯೂಸೆಕ್ಸ್ (ಒಳಹರಿವು), 433 ಕ್ಯೂಸೆಕ್ಸ್ (ಹೊರಹರಿವು), ಗೇರುಸೊಪ್ಪ: 55ಮೀ (ಗ), 50.2 ಮೀ (ಇ.ಮಟ್ಟ), 4872 ಕ್ಯೂಸೆಕ್ಸ್ (ಒಳಹರಿವು), 4787 ಕ್ಯೂಸೆಕ್ಸ್ (ಹೊರಹರಿವು), ಲಿಂಗನಮಕ್ಕಿ 1819 ಅಡಿ (ಗ), 1768.80 ಅಡಿ (ಇಂದಿನ ಮಟ್ಟ), 16153 ಕ್ಯೂಸೆಕ್ಸ್  (ಒಳಹರಿವು), 727.56 (ಹೊರಹರಿವು)
 

Read These Next

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...