ಮಂಗಳೂರು: ಕರಾವಳಿಯಲ್ಲಿ ಮುಂದುವರಿದ ಭಾರೀ ಮಳೆ

Source: VB | By S O News | Published on 17th June 2021, 6:33 PM | Coastal News |

ಮಂಗಳೂರು: ದ.ಕ.ಜಿಲ್ಲೆಯಲ್ಲಿ  ಮುಂಗಾರು ಮಳೆ ಮುಂದುವರಿದಿದ್ದು, ಬುಧವಾರ ಉತ್ತಮ ಮಳೆಯಾಗಿದೆ. ಹವಾಮಾನ ಇಲಾಖೆ ಪ್ರಕಾರ ಇನ್ನೂ ಮೂರು ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇದರಿಂದ ಜಿಲ್ಲೆಯಲ್ಲಿ ಜೂ.18ರಂದು ಬೆಳಗ್ಗಿನವರಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

 ಬುಧವಾರ ರಾತ್ರಿ ಬಿರುಸು ಪಡೆದಿದ್ದ ಮಳೆ ಗುರುವಾರ ಮುಂಜಾನೆ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂ.20ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಜೂ.20ರವರೆಗೆ ಉತ್ತರ ಕನ್ನಡ, ದ.ಕ. ಮತ್ತು ಉಡುಪಿ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಆದ್ದರಿಂದ ಈ ಜಿಲ್ಲೆಗಳಲ್ಲಿ ಜೂ.17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದೇರೀತಿ ಜೂ.18ರಿಂದ 20ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್, ಶಿವಮೊಗ್ಗ, ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಜೂ.16ರಂದು ಆರೆಂಜ್ ಅಲರ್ಟ್ ಹಾಗೂ ಜೂ.17, 18ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಿ.ಎಸ್.ಪಾಟೀಲ್, ನಿರ್ದೇಶಕರು, ರಾಜ್ಯ ಹವಾಮಾನ ಇಲಾಖೆ

ವರೆಗೂ ಉತ್ತಮವಾಗಿ ಸುರಿದಿದೆ. ಅಬ್ಬರದ ಮಳೆಯಾಗದಿದ್ದರೂ ತಂಪಾದ ಮೋಡದ ವಾತಾವರಣ ದಿನಪೂರ್ತಿ ಮುಂದುವರಿದಿತ್ತು. ಜಿಲ್ಲೆಲ್ಲಿ ನೈರುತ್ಯ ಮುಂಗಾರು ಮುಂದಿನ ದಿನಗಳಲ್ಲಿ ಚುರುಕುಗೊಳ್ಳಲಿದ್ದು, ಉತ್ತಮ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂ.18ರವರೆಗೆ ಸಮುದ್ರ ತೀರದಲ್ಲಿ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಕಡಲು ಪ್ರಕ್ಶ್ಯುಬ್ದಗೊಳ್ಳಲಿದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಮುಂದಿನ 48 ಗಂಟೆ ಅವಧಿಯಲ್ಲಿ ದ.ಕ. ಜಿಲ್ಲೆಯ ವಿವಿಧ ಕಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲೆಯಲ್ಲಿ ವಾರ್ಷಿಕ ಮುಂಗಾರು ಕೃಷಿ ಚಟುವಟಿಕೆ ಆರಂಭಗೊಂಡಿವೆ. ಭಾರೀ ಮಳೆಗೆ ಜಿಲ್ಲೆಯಲ್ಲಿ ಇದು ವರೆಗೆ 10 ಮನೆಗಳು ಭಾಗಶಃ ಹಾನಿಗೀಡಾಗಿದ್ದು, ಒಂದು ಮನೆ ಸಂಪೂರ್ಣ ಹಾನಿಯಾಗಿದೆ.

ಧರೆಗುರುಳಿದ ಆಲದ ಮರ 5 ವಿದ್ಯುತ್ ಕಂಬಗಳಿಗೆ ಹಾನಿ

ಬುಧವಾರ ಸಂಜೆಯ ವೇಳೆ ಸುರಿದ ಭಾರೀ ಗಾಳಿ-ಮಳೆಗೆ ದ.ಕ. ಜಿಲ್ಲೆಯ ಕಡೇಶಿವಾಲಯ ಗ್ರಾಮದ ಸಂಪೋಳಿ ಎಂಬಲ್ಲಿ ಬೃಹತ್ ಗಾತ್ರದ ಆಲದ ಮರವೊಂದು ಧರೆಗುರುಳಿದೆ. ಸಂಜೆ ಸುಮಾರು 4ಗಂಟೆಗೆ ಬೀಸಿದ ಭಾರೀ ಗಾಳಿಗೆ ಬೃಹತ್ ಗಾತ್ರದ ಆಲದ ಮರ ರಸ್ತೆಗೆ ಉರುಳಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಹಳೆಯದಾದ ಬೃಹತ್ ಗಾತ್ರದ ಮರ ಉರುಳಿಬಿದ್ದ ಪರಿಣಾಮ ಸಮೀಪದಲ್ಲೇ ಇದ್ದ ಐದಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಕೂಡ ಧರೆಗುರುಳಿವೆ. ಇಲ್ಲಿನ ನಾಗೇಶ್ ಸಂಪೋಳಿ ಎಂಬುವವರ ಜಮೀನಿನಲ್ಲಿ ಇದ್ದ ಈ ಆಲದ ಮರದ ಪಕ್ಕದಲ್ಲೇ ನಾಲ್ಕೈದು ಮನೆಗಳು ಇದ್ದವು. ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ.

ಮೆಸ್ಕಾಂಗೆ 13.67 ಕೋ.ರೂ. ನಷ್ಟ

ಭಾರೀ ಗಾಳಿ ಮಳೆಯಿಂದಾಗಿ 2021ರ ಎಪ್ರಿಲ್‌ನಿಂದ ಜೂ.14ರವರೆಗೆ ಮೆಸ್ಕಾಂಗೆ 13.67 ಕೋಟಿ ನಷ್ಟ ಉಂಟಾಗಿದೆ.

ಮಂಗಳೂರು, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಒಟ್ಟು 7075 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, 586.35ಲಕ್ಷ ರೂ. ನಷ್ಟವಾಗಿದೆ. 680ಸಂಖ್ಯೆಯ ಪರಿವರ್ತಕಗಳಿಗೆ ಹಾನಿಯಾಗಿದ್ದು, 656.50ಲಕ್ಷ ರೂ.ನಷ್ಟ ಉಂಟಾಗಿದೆ. 219.80ಕಿ.ಮೀ ಉದ್ದದ ವಿದ್ಯುತ್‌ ಲೈನ್‌ಗಳಿಗೆ ಹಾನಿಯಾಗಿದ್ದು,124.10ಲಕ್ಷ ರೂ. ನಷ್ಟ ಉಂಟಾಗಿದೆ.

ಕಂಪೆನಿ ವ್ಯಾಪ್ತಿಯಲ್ಲಿ ಒಟ್ಟು ಹಾನಿಯ ಮೊತ್ತ 1366.94ಲಕ್ಷ ರೂ.ಗಳಾಗಿದೆ. ಹಾನಿಯಾದ ವಿದ್ಯುತ್ ಮಾರ್ಗಗಳನ್ನು ಸಮರೋಪಾದಿಯಲ್ಲಿ ದುರಸ್ತಿ ಮಾಡಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳು ಬೆಟ್ಟಗುಡ್ಡ, ಕಾಡು, ನದಿ ಹಾಗೂ ದುರ್ಗಮ ಪ್ರದೇಶಗಳನ್ನು ಒಳಗೊಂಡಿದ್ದು, ಸಾಮಗ್ರಿಗಳ ಸಾಗಾಟ, ನದಿ ದಾಟುವಿಕೆ, ವಾಹನ ಸಂಚಾರ ದುಸ್ತರ ಮುಂತಾದ ಸಂದರ್ಭಗಳಲ್ಲಿ ಕೆಟ್ಟುಹೋದ ವಿದ್ಯುತ್ ಮಾರ್ಗಗಳ ಪುನರ್ರಚನೆ ಮತ್ತು ವಿದ್ಯುತ್‌ ಪುನರ್‌ ಸಂಪರ್ಕ ಸಹಜವಾಗಿಯೇ ವಿಳಂಬವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಗ್ರಾಹಕರು ಮೆಸ್ಕಾಂನೊಂದಿಗೆ ಸಹಕರಿಸುವಂತೆ ಕೋರಲಾಗಿದೆ ಎಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Read These Next

ಜೆಡಿಎಸ್ ಮತ ಬುಟ್ಟಿಗೆ ’ಕೈ’ ಹಾಕಿದ ಅಂಜಲಿ ತಾಯಿ ; ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮ ಗೌಡರ ಮನೆಗೆ ಭೇಟಿ

ಅಂಕೋಲಾ: ಉ.ಕ ಲೋಕಸಭಾ ಕ್ಷೇತ್ರದ ಅಂಕೋಲಾ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಹಾಲಕ್ಕಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಿನ ...