ಇಂಧನ ಬೆಲೆ ಏರಿಕೆ ಬರೆ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

Source: VB News | By I.G. Bhatkali | Published on 25th October 2021, 10:41 AM | National News |

ಹೊಸದಿಲ್ಲಿ: ಇಂಧನಗಳ ಬೆಲೆಯೇರಿಕೆಗಾಗಿ ಕಾಂಗ್ರೆಸ್ ರವಿವಾರ ಕೇಂದ್ರದ ವಿರುದ್ಧ ತೀವ್ರ ವಾಗಾಳಿ ನಡೆಸಿದ

ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೆಟ್ರೋಲ್ ಬೆಲೆಗಳ ಮೇಲಿನ ತೆರಿಗೆ ದರೋಡೆ'ಯು ಹೆಚ್ಚುತ್ತಿದೆ ಮತ್ತು ಎಲ್ಲಿಯಾದರೂ ಚುನಾವಣೆಗಳು ನಡೆದರೆ ಇದಕ್ಕೆ ಸಲ್ಪ ವಿರಾಮ ಬೀಳಲಿದೆ ಎಂದು ಟೀಟಿಸಿದ್ದಾರೆ.

ಇಂಧನಗಳ ಬೆಲೆಯೇರಿಕೆಗಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

ಜನರಿಗೆ ತೊಂದರೆಗಳನ್ನು ನೀಡುವಲ್ಲಿ ಮೋದಿ ಸರಕಾರವು ದಾಖಲೆಯನ್ನು ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ. ಈ ವರ್ಷ ಪೆಟ್ರೋಲ್ ಬೆಲೆಗಳಲ್ಲಿ 23.53 ರೂ.ಗಳಷ್ಟು ದಾಖಲೆಯ ಏರಿಕೆಯಾಗಿದೆ ಎಂಬ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿರುವ ಪ್ರಿಯಾಂಕಾ, 'ಸಾರ್ವಜನಿಕರಿಗೆ ತೊಂದರೆಗಳನ್ನು ನೀಡುವಲ್ಲಿ ಮೋದಿ ಸರಕಾರವು ದೊಡ್ಡ ದಾಖಲೆಗಳನ್ನು ಮಾಡಿದೆ. ಅತ್ಯಂತ ಹೆಚ್ಚಿನ ನಿರುದ್ಯೋಗ ಮೋದಿ ಆಡಳಿತದಲ್ಲಿ, ಸರಕಾರಿ ಆಸ್ತಿಗಳು ಮಾರಾಟವಾಗುತ್ತಿರುವುದು ಮೋದಿ ಆಡಳಿತದಲ್ಲಿ, ಪೆಟ್ರೋಲ್ ಬೆಲೆ ವರ್ಷದಲ್ಲಿ ಅತ್ಯಂತ ಹೆಚ್ಚು ಏರಿಕೆಯಾಗಿರುವುದು ಮೋದಿ ಆಡಳಿತದಲ್ಲಿ

ಎಂದು ಟೀಟಿಸಿದ್ದಾರೆ. ಪ್ರಿಯಾಂಕಾ ಹಂಚಿಕೊಂಡಿರುವ ವರದಿಯನ್ನೇ ಟ್ಯಾಗ್ ಮಾಡಿರುವ ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು 'ಅಚ್ಛೇ ದಿನ್' ಎಂದು ಟೀಟಿಸಿದ್ದಾರೆ.

Read These Next