ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಪೆಗಾಸಸ್ ಬೇಹುಗಾರಿಕೆಯ ಶಂಕೆ; ಆಪರೇಶನ್ ಕಮಲಕ್ಕೆ ಪೆಗಾಸಸ್ ಬಳಕೆ?

Source: VB News | By I.G. Bhatkali | Published on 21st July 2021, 7:17 PM | State News | National News |

ಹೊಸದಿಲ್ಲಿ,: ಪೆಗಾಸಸ್ ಸ್ಪೈವೇರ್ ಹಗರಣವು ಈಗ ಕರ್ನಾಟಕದ ರಾಜಕೀಯದ ಬಾಗಿಲಿಗೂ ತಲುಪಿದೆ. ಎರಡು ವರ್ಷಗಳ ಹಿಂದೆ ಜೆಡಿಎಸ್ -ಕಾಂಗ್ರೆಸ್ ಸಮಿಶ್ರ ಸರಕಾರವನ್ನು ಉರುಳಿಸಲು ನಡೆದ 'ಆಪರೇಶನ್ ಕಮಲ' ಕಾರ್ಯಾಚರಣೆಯಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆಯಾಗಿರುವ ಸಾಧ್ಯತೆಯಿದೆಯೆಂದು thewire ಸುದ್ದಿ ಸಂಸ್ಥೆಯ ವರದಿ ಬಹಿರಂಗಪಡಿಸಿದೆ. ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರಕಾರದ ಪತನಕ್ಕೆ ಕೆಲವು ಸಮಯದ ಮೊದಲು ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಆಪ್ತ ಸಹಾಯಕರು ಮತ್ತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಮೊಬೈಲ್ ಫೋನ್‌ಗಳನ್ನು ಪೆಗಾಸಸ್ ಪ್ರೈವೇರ್‌ ದಾಳಿಗೆ ಗುರಿ ಮಾಡಲಾಗಿರುವ ಸಾಧ್ಯತೆಯಿರುದ್ಧವಾಗಿ ವರದಿಯಲ್ಲಿ ಅನುಮಾನ ವ್ಯಕ್ತಪಡಿಸಲಾಗಿದೆ.

ಸ್ಪೈವೇರ್ ಬಗ್ಗೆ ನನಗೆ ಯಾವುದೇ ಅರಿವು ಇಲ್ಲ. ಆದರೆ ಒಂದು ವೇಳೆ ನನ್ನ ಮೊಬೈಲ್ ದೂರವಾಣಿ ಸಂಖ್ಯೆಯು ಕಣ್ಣಾವಲಿಗೊಳಪಡಿಸಿರುವುದು ಹೌದೇ ಆದಲ್ಲಿ, ಅದನ್ನು ಯಾಕೆ ಮಾಡಲಾಗಿದೆಯೆಂದು ನನಗೆ ತಿಳಿಯುತ್ತಿಲ್ಲ. ಆ ಸಮಯದಲ್ಲಿ ನಾನು ಯಾವುದೇ ರಾಜಕೀಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರಲಿಲ್ಲ. ಆ ಸಮಯದಲ್ಲಿ ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೂ ಆಗಿರಲಿಲ್ಲ. 

ಜಿ. ಪರಮೇಶ್ವರ್, ಮಾಜಿ ಡಿಸಿಎಂ

2019ರಲ್ಲಿ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ 17 ಮಂದಿ ಶಾಸಕರು ರಾಜೀನಾಮೆ ನೀಡಿದ ಪರಿಣಾಮವಾಗಿ ಆಗಿನ ಮುಖ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿವಾಸಮತ ಯಾಚನೆಯನ್ನು ಎದುರಿಸಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಕಾಂಗ್ರೆಸ್ ಸರಕಾರದ ನಡುವೆ ಅಧಿಕಾರಕ್ಕಾಗಿ ಪಣಾಹಣಿ ನಡೆಯುತ್ತಿದ್ದಾಗ, ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಸೇರಿದಂತೆ ವಿವಿಧ ಪ್ರಮುಖ ರಾಜಕೀಯ ನಾಯಕರನ್ನು ಪೆಗಾಸಸ್ ಸ್ಪೈವೇರ್ ಮೂಲಕ ಕಣ್ಗಾವಲಿಗೋಳ  ಪಡಿಸಲಾಗಿತ್ತು ಎಂದು ದಿ ವೈರ್ ವರದಿ ಶಂಕೆ ವೈಕ್ತಪಡಿಸಿದೆ.

ವಿಶ್ವಾಸಮತ ಯಾಚನೆಯಲ್ಲಿ ಕುಮಾರಸ್ವಾಮಿ ಸರಕಾರ ಪತನಗೊಂಡ ಬಳಿಕ, ಯಡಿಯೂರಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ಹಿಡಿಯುವಲ್ಲಿ ಸಫಲವಾಗಿತ್ತು.

ಆದಾಗ್ಯೂ, ಡಿಜಿಟಲ್  ಅಪರಾಧ ವಿಧಿವಿಜ್ಞಾನದ ಮೂಲಕ ಪರೀಕ್ಷೆಗೊಳಪಡಿಸದೆ

ದೇವೇಗೌಡರ ಭದ್ರತಾ ಸಿಬ್ಬಂದಿಯ ಮೊಬೈಲ್‌ಗೂ ಸೈವೇರ್ ದಾಳಿ?:  ಕುತೊಹಲಕರವೆಂದರೆ  ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರ ಭದ್ರತಾ ಸಿಬಂದಿಯಲೊಬ್ಬರಾಗಿದ್ದ ಪೊಲೀಸ್ ಉದ್ಯೋಗಿ ಮಂಜುನಾಥ್ ಮುದೇಗೌಡ ಅವರ ದೂರವಾಣಿ ಸಂಖ್ಯೆಯನ್ನೂ ಪೆಗಾಸಸ್ ಸೈವೇರ್‌ ದಾಳಿಗೆ ಗುರಿಪಡಿಸಲಾಗಿದೆಯೆಂಬುದು ಸೋರಿಕೆಯಾದ ದಾಖಲೆಗಳಿಂದ ತಿಳಿದುಬಂದಿದೆ.

ಕರ್ನಾಟಕದ ಈ ರಾಜಕೀಯ ನಾಯಕರು ಹಾಗೂ ಅವರ ನಿಕಟವರ್ತಿಗಳ ದೂರವಾಣಿ ಸಂಖ್ಯೆಗಳನ್ನು ಸ್ಪೈವೇರ್ ದಾಳಿಗೆ ಗುರಿಪಡಿಸಲಾಗಿರುವುದನ್ನು ಇರಿಸಲು ಸಾಧ್ಯವಿಲ್ಲ ವೆಂದು ವರದಿ ಸ್ಪಷ್ಟಪಡಿಸಿದೆ.

ಪೆಗಾಸಸ್ ಬಳಕೆ?: ಫ್ರಾನ್ಸ್‌ನ ಲಾಭೋದ್ದೇಶರಹಿತ ಮಾಧ್ಯಮಸಂಸ್ಥೆ 'ಫಾರ್ ಬಿಡನ್ ಸ್ಟೋರೀಸ್'ಗೆ ಲಭ್ಯವಾಗಿರುವ ಭಾರತದಲ್ಲಿ ಪೆಗಾಸಸ್ ಸೈವೇರ್ ದಾಳಿಗೆ ವಿವಿಧ ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು, ಕಾನೂನು ತಜ್ಞರು, ಉನ್ನತ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಗುರಿಪಡಿಸಲಾಗಿತ್ತು.

ಸಿದ್ದರಾಮಯ್ಯ ಅವರ ಅಪ್ತಕಾರ್ಯದರ್ಶಿ ವೆಂಕಟೇಶ್‌ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಸತೀಶ್ ಮತ್ತು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ದೂರವಾಣಿ ಸಂಖ್ಯೆಗಳನ್ನೂ ಕೂಡಾ ಪೆಗಾಸಸ್ ಮೂಲಕ ಹ್ಯಾಕ್ ಮಾಡಲಾಗಿ ದೆಯೆಂದು ದಿ ವೈರ್ ವರದಿ ತಿಳಿಸಿದೆ.

ಇಸ್ರೇಲ್ ಮೂಲದ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಜಗತ್ತಿನಾದ್ಯಂತ 50 ಸಾವಿರಕ್ಕೂ ಅಧಿಕ ಮೊಬೈಲ್ ಫೋನ್ ಸಂಖ್ಯೆಗಳಿಗೆ ಪೆಗಾಸಸ್ ಸ್ಪೆವೇರ್ ಲಿಂಕ್ ಮಾಡಿರುವುದಾಗಿ ವಾಶಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್, ದಿ ವೈರ್ ಹಾಗೂ ಇತರ ಮಾಧ್ಯಮ ಸಂಸ್ಥೆಗಳು ಎರಡು ದಿನಗಳ ಹಿಂದೆ ಪ್ರಕಟಿಸಿದ ವರದಿ ಬಹಿರಂಗಪಡಿಸಿದೆ. ಭಾರತದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ವ್ಯೂಹ ತಜ್ಞ ಪ್ರಶಾಂತ್ ಕಿಶೋರ್ ಹಾಗೂ ಇಬ್ಬರು ಕೇಂದ್ರ ಸಚಿವರು, ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ, ವಿವಿಧ ಸಾಮಾಜಿಕ ಹೋರಾಟಗಾರರು ಹಾಗೂ 40ಕ್ಕೂ ಅಧಿಕ ಪತ್ರಕರ್ತರ ಮೊಬೈಲ್‌ ಫೋನ್‌ಗಳನ್ನು ಪೆಗಾಸಸ್ ಸ್ಪೆವೇರ್ ಮೂಲಕ ಹ್ಯಾಕ್ ಮಾಡಲಾಗಿತ್ತೆಂದು ವರದಿ ತಿಳಿಸಿದೆ.

ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ ಫೋನ್ ಹ್ಯಾಕ್: ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾರ್ಯದರ್ಶಿ ವೆಂಕಟೇಶ್ ಅವರ ಮೊಬೈಲ್ ಫೋನ್ ಕೂಡಾ ಪೆಗಾಸಸ್ ಸ್ಪೈವೇರ್ ದಾಳಿಗೆ ಸಂಭಾವ್ಯ ಗುರಿಯಾಗಿತ್ತು ಎಂದು ದಿ ವೈರ್ ಬಹಿರಂಗಪಡಿಸಿದೆ. ಸಿದ್ದರಾಮಯ್ಯ ಅವರು ಹಲವಾರು ವರ್ಷಗಳಿಂದ ತನ್ನ ಖಾಸಗಿ ಮೊಬೈಲ್ ಫೋನನ್ನು ಬಳಸುತ್ತಿರಲಿಲ್ಲ. ದೂರವಾಣಿ ಸಂಭಾಷಣೆಗಳಿಗೆ ಅವರು ತನ್ನ ಸಹಾಯಕರ ಮೊಬೈಲ್ ಫೋನ್ ಗಳನ್ನೇ ಅವಲಂಬಿಸುತ್ತಿದ್ದರೆನ್ನಲಾಗಿದೆ. ಹೀಗಾಗಿ ಅವರ ಆಪ್ತ ಕಾರ್ಯದರ್ಶಿ ವೆಂಕಟೇಶ್ ಅವರ ಮೊಬೈಲ್ ಫೋನ್ ಸಂಖ್ಯೆಯನ್ನು ದಾಳಿಗೆ ಗುರಿಪಡಿಸಿರಬಹುದೆಂದು ದಿ ವೈರ್ ಅನುಮಾನ ವ್ಯಕ್ತಪಡಿಸಿದೆ.

ಎಚ್‌ಡಿಕೆ ಆಪ್ತ ಕಾರ್ಯದರ್ಶಿಯ ಫೋನ್‌ಗೆ ಪೆಗಾಸಸ್ ಕನ್ನ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಸತೀಶ್‌ಗೆ ಸೇರಿದ ಎರಡು ದೂರವಾಣಿ ಸಂಖ್ಯೆಗಳನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿರುವುದಾಗಿ ವೈರ್ ತಿಳಿಸಿದೆ.

ಪೆಗಾಸಸ್ ಸ್ಪೈವೇರ್ ನ ಸಂಭಾವ್ಯ ದಾಳಿಗೆ ಗುರಿಯಾದ ದೂರವಾಣಿ ಸಂಖ್ಯೆಗಳ ಪಟ್ಟಿಯಲ್ಲಿ ತನ್ನ ಎರಡು ದೂರವಾಣಿ ಸಂಖ್ಯೆಗಳು ಇರುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಎಚ್.ಡಿ. ಕುಮಾರಸ್ವಾಮಿ ಅವರ ಆಪ್ತ ಕಾರ್ಯದರ್ಶಿ ಸತೀಶ್ ನಿರಾಕರಿಸಿದ್ದಾರೆ. ಆದರೆ 2019ರಲ್ಲಿಯೂ ತಾನು ಆ ದೂರವಾಣಿ ಸಂಖ್ಯೆಯನ್ನು ಬಳಸುತ್ತಿರುವುದನ್ನು ಅವರು ಖಚಿತಪಡಿಸಿದ್ದಾರೆ.

Read These Next

ಮಂಗಳೂರು: ಮುಖ್ಯಮಂತ್ರಿಗೆ ಕೊಲೆ ಬೆದರಿಕೆ; ಹಿಂದೂ ಮಹಾಸಭಾ ರಾಜ್ಯ ಪ್ರ.ಕಾರ್ಯದರ್ಶಿ ಬಂಧನ

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗವಾಗಿ ಕೊಲೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ...

ಪಂಜಾಬ್‌ಗೆ ಮೊದಲ ದಲಿತ ಮುಖ್ಯಮಂತ್ರಿ; ಚರಣ್‌ಜೀತ್ ಸಿಂಗ್ ಚನ್ನಿಗೆ ಸಿಎಂ ಪಟ್ಟ, ಇಂದು ಪ್ರಮಾಣ

ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಅಚ್ಚರಿಯ ರಾಜಕೀಯ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್, ದಲಿತ ಸಿಖ್ ಸಮುದಾಯದ ...