ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಖಂಡಿಸಿ ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ.

Source: SO News | By Laxmi Tanaya | Published on 11th June 2021, 7:48 PM | Coastal News |

ಮಂಗಳೂರು : ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕೇಂದ್ರ ಸರಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಿಂದ ನಗರದ ಕೆಪಿಟಿ ಯಲ್ಲಿರುವ ಪೆಟ್ರೋಲ್ ಪಂಪ್ ಎದುರು ಶುಕ್ರವಾರ ಬೆಳಿಗ್ಗೆ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಯಿತು.

100 ನಾಟೌಟ್ ಎಂಬ ಹೆಸರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಾಗಟೆ ಬಾರಿಸುವ ಮೂಲಕ ಇಂಧನ ತೈಲ ಬೆಲೆ ಏರಿಕೆಯನ್ನು ಖಂಡಿಸಲಾಯಿತು  . 

ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರಲ್ ಗೆ ನೂರ ನಲವತ್ತು$ ಇದ್ದ ಸಂದರ್ಭದಲ್ಲಿ ಎಪ್ಪತ್ತು ವರ್ಷದಲ್ಲಿ ಪೆಟ್ರೋಲ್ ಗೆ ಎಪ್ಪತ್ತು ರೂ  ಹೇರಿಕೆಯಾಗದಂತೆ ಕಾಂಗ್ರೆಸ್ ನೋಡಿಕೊಂಡಿತ್ತು. ಇದೀಗ ಬ್ಯಾರಲ್ ಬೆಲೆ ಅತಿ ಕಡಿಮೆ ಆಗಿದ್ದರೂ ಇಂಧನ ತೈಲ ಬೆಲೆಯಲ್ಲಿ ನಿರಂತರ ಏರಿಕೆ ಮಾಡುತ್ತಿದೆ ಈ ಬಗ್ಗೆ ಜನ ಸಾಮಾನ್ಯರೊಂದಿಗೆ ವಿಪಕ್ಷಗಳು ಧ್ವನಿ ಎತ್ತಬೇಕಾಗಿದೆ ಕೂರೋಣ ಸಂದರ್ಭದಲ್ಲಿ ಜನಸಾಮಾನ್ಯರು ಬದುಕಬೇಕಾದರೆ ಇಂಧನ ಬೆಲೆ ಕಡಿಮೆ ಆಗಬೇಕು ಆಗ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದರು . 

ಕೆಪಿಸಿಸಿ ಸೂಚನೆ ಮೇರೆಗೆ ಇಂದಿನಿಂದ ಆರಂಭಗೊಂಡ ಈ ಪ್ರತಿಭಟನೆ ಮುಂದೆ ವಿಧಾನಸಭೆ ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಿರಂತರವಾಗಿ 5ದಿನಗಳ ಕಾಲ ಮುಂದುವರಿಯಲಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು  . 

ಮೂವತ್ತು ರೂ ನಲ್ಲಿ ಸಿಗಬೇಕಾದ ಪೆಟ್ರೋಲ್ ಬೆಲೆ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶತಕ ಬಾರಿಸಿದೆ ಹಿಂದೆ ತೈಲ ಬೆಲೆ 1₹ಹೆರಿಗೆಯಾದ ಜಿಲ್ಲಾಧಿಕಾರಿ ಕಚೇರಿ ಎದುರು ಅಡುಗೆ ಮಾಡಿ ಪ್ರತಿಭಟನೆ ಪ್ರತಿಭಟನೆ ಮಾಡುತ್ತಿದ್ದು ಬಿಜೆಪಿ ಪ್ರತಿನಿಧಿಗಳು ಈಗ ಎಲ್ಲಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದರು .

ಇಂಧನ ಬೆಲೆ ಏರಿಕೆ ವಿರುದ್ಧ ಭಿತ್ತಿಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನಾಕಾರರು ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು . 

 ಪ್ರತಿಭಟನೆಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ  , ಸದಾಶಿವ ಉಳ್ಳಾಲ್ ,  ಪಿ ವಿ ಮೋಹನ್  , ವಿನಯರಾಜ್  , ಪ್ರತಿಭಾ ಕುಳಾಯಿ , ಭಾಸ್ಕರ್ ಕೆ  , ಅಪ್ಪಿ  , ನವೀನ್ ಡಿಸೋಜ  , ಟಿ ಕೆ ಸುಧೀರ್  , ಶಬೀರ್  , ಸವಾದ್ ಸುಳ್ಯ  , ವಿಶ್ವಾಸ್ ಕುಮಾರ್ ದಾಸ್  , ವಿವೇಕ್ ರಾಜ್ ಶಂಶುದ್ದೀನ್ ಮೊದಲಾದವರು ಭಾಗವಹಿಸಿದ್ದರು ಇದೇ ವೇಳೆ೧೦೦ notout ಕೇಕ್ ಕತ್ತರಿಸಿ ಇಂಧನ ತೈಲ ಬೆಲೆ ಏರಿಕೆಯನ್ನು ಪ್ರತಿಭಟನಕಾರರು ವ್ಯಂಗ್ಯವಾಡಿದರು.

Read These Next